ಚಿಕ್ಕಮಗಳೂರು ಜಿಲ್ಲಾ ಅಪರಾಧ ತನಿಖಾ ವಿಭಾಗ ಕಾರ್ಯಾಚರಣೆ 8 ಹುಲಿ ಉಗುರು ಸೇರಿದಂತೆ , ಹುಲಿಯ ಹಲ್ಲು ಮತ್ತು ಮುಳೆ ಮತ್ತು ವನ್ಯಜೀವಿ ಕಳ್ಳಸಾಗಣೆ ಗೆ ಬಳಸಿದ ಸ್ವಿಫ್ಟ್ ಕಾರು ವಶ ಪಡಿಸಿಕೊಂಡಿದ್ದಾರೆ. ಅರಶಿನಗುಪ್ಪೆ ನಿವಾಸಿ ಸಾಗರ್ ಮತ್ತು ಹಾಸನ ಮೂಲದ ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದ ಲೋಕೇಶ್ ಬಂಧನ. ನಗರದ ರೈಲ್ವೆ ನಿಲ್ದಾಣದ ಬಳಿ ಮಾರಾಟ ಮಾಡುವಾಗ ಖಚಿತ ಮಾಹಿತಿ ಮೇರೆಗೆ ಬಂಧನ. ವೃತ ನಿರೀಕ್ಷಕ ಸತ್ಯ ನಾರಾಯಣ ತಂಡ ಕಾರ್ಯಾಚರಣೆ. ಹೆಚ್ಚಿನ ತನಿಖೆಗೆ ಅರಣ್ಯ ಇಲಾಖೆಗೆ ಪ್ರಕರಣ ನೀಡಲಾಗಿದೆ.ಚಿಕ್ಕಮಗಳೂರಿನ ಗೌರವ ವನ್ಯಜೀವಿ ಪರಿಪಾಲಕ ಜಿ.ವೀರೇಶ್ ಇದ್ದರು. ಇತ್ತೀಚಿನ ದನಮಾನಗಳಲ್ಲಿ ಹುಲಿ ಬೇಟೆ ಮತ್ತು ಅದರ ಆಂಗ ಅಂಗಗಳ ಮಾರಾಟ ಜಾಲ ಸಕ್ರಿಯವಾಗಿದೆ.
ಶನಿವಾರ, ಫೆಬ್ರವರಿ 27, 2021
ಚಿಕ್ಕಮಗಳೂರಿನಲ್ಲಿ ಹಾಡು ಹಗಲೇ ಕಳ್ಳತನಕ್ಕೆ : ಇಬ್ಬರು ಅಂದರ್
ಚಿಕ್ಕಮಗಳೂರು :ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಮನೆಯೊಂದಕ್ಕೆ ನುಗ್ಗಿದ ಇಬ್ಬರು ಹಾಡುಹಗಲೇ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ .
ಗುರುವಾರ, ಫೆಬ್ರವರಿ 25, 2021
ಅಕ್ರಮ ಭೂ ಮಂಜೂರಾತಿ :ಮೂವರ ಅಮಾನತು
ಚಿಕ್ಕಮಗಳೂರು :ಜಿಲ್ಲೆಯ ಕಡೂರು ತಾಲ್ಲೂಕು ಕಚೇರಿಯಲ್ಲಿ ನಡೆದಿರುವ ಭೂ ಅಕ್ರಮ ಮಂಜೂರಾತಿ ಹಗರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಕೆ .ಎನ್ ರಮೇಶ್ ಆದೇಶ ಹೊರಡಿಸಿದ್ದಾರೆ .
ಕಡೂರು ತಾಲ್ಲೂಕು ಕಚೇರಿಯ ತಹಸೀಲ್ದಾರ್ ವರ್ಗಾವಣೆಗೊಂಡಿದ್ದರು ಅವರ ಹೆಸರಿನಲ್ಲಿ ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ ಭೂಮಿ ಮಂಜೂರು ಮಾಡಿದ 64 ಪ್ರಕರಣಗಳು ಬೆಳಕಿಗೆ ಬಂದಿದ್ದು ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ಬಗಾದಿ ಗೌತಮ್ ತನಿಖೆಗೆ ಆದೇಶಿಸಿದ್ದರು.
ತನಿಖಾಧಿಕಾರಿಯಾಗಿ ಉಪ ವಿಭಾಗಾಧಿಕಾರಿ ಎಚ್ ಎಲ್ ನಾಗರಾಜ್ ನೇಮಕಗೊಂಡಿದ್ದು , ಅಕ್ರಮ ಎಸಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಸಖರಾಯಪಟ್ಟಣ ಹೋಬಳಿಯ ರಾಜಸ್ವ ನಿರೀಕ್ಷಕ ಹೆಚ್ ಸಿ. ಸುರೇಶ್ ,ಪಂಚನಹಳ್ಳಿಯ ಬಿ. ಎನ್ .ಚಂದ್ರಶೇಖರ್ ಹಾಗೂ ಭೂಮಿ ಕೇಂದ್ರದ ಕೆ .ಎಸ್. ಶ್ರುತಿ ಅಮಾನತುಗೊಂಡಿದ್ದಾರೆ
ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ತಹಶೀಲ್ದಾರ್ ಉಮೇಶ್ ಹಾಗೂ ಶಿರಸ್ತೆದಾರ್ ಮೇಲೂ ಕ್ರಮಕ್ಕೆ ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿದೆ .
ಬುಧವಾರ, ಫೆಬ್ರವರಿ 24, 2021
ಪೊಲೀಸರ ವಿರುದ್ಧ ಪಿ ಎಫ್ ಐ ಪ್ರತಿಭಟನೆ
ಚಿಕ್ಕಮಗಳೂರು: ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತನನ್ನು ಯುಪಿ ಪೊಲೀಸರು ಅಪಹರಿಸಿದ ಕ್ರಮವನ್ನು ಖಂಡಿಸಿ ಚಿಕ್ಕಮಗಳೂರಿನಲ್ಲಿ ಪಿಎಫ್ ಐ ಕಾರ್ಯಕರ್ತರು ಪ್ರತಿಭಟನೆ ಮಾಡಿದರು .
ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸಿ ಪಿಎಫ್ಐ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹಾಕಿ ಕಿರುಕುಳ ನೀಡುವ ಕ್ರಮ ದೇಶದ ವಿವಿಧ ಕಡೆಗಳಲ್ಲಿ ಪೋಲಿಸರು ಮಾಡುತ್ತಿದ್ದು ಇದು ಖಂಡನೀಯ ಎಂದರು .
ದೇಶದ ಯಾವುದೇ ಭಾಗದಲ್ಲಿ ಗಲಭೆಗಳು ನಡೆದಾಗ ಪಿಎಫ್ಐ ಸಂಘಟನೆಯನ್ನು ಥಳಕು ಹಾಕುವ ಪ್ರವೃತ್ತಿಯನ್ನು ಕೆಲವು ರಾಜಕೀಯ ಪಕ್ಷದ ಮುಖಂಡರು ಮಾಡುತ್ತಿದ್ದು ಇದನ್ನು ತೀವ್ರವಾಗಿ ಖಂಡಿಸುವುದಾಗಿ ಮುಖಂಡರು ಹೇಳಿದರು .
ಪೊಲೀಸರಿಂದ ಅಪಹರಣಕ್ಕೆ ಒಳಗಾದ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು .
(ಚಿತ್ರ ತಾರನಾಥ್ ಕಾಮತ್)
ಗುಡಿಸಲು ನೆಲಸಮ ಖಂಡಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ
ಚಿಕ್ಕಮಗಳೂರು : ನಗರ ಸಭೆ ವ್ಯಾಪ್ತಿಯ ಉಪ್ಪಳ್ಳಿ ಸಮೀಪದ ಕಲ್ದೊಡ್ಡಿಯ ಇಂದಿರಾಗಾಂಧಿ ಬಡಾವಣೆಯಲ್ಲಿ ಗುಡಿಸಲುಗಳನ್ನು ನೆಲಸಮ ಮಾಡಿ ಮುನ್ನೂರು ಕುಟುಂಬಗಳನ್ನು ಬೀದಿ ಪಾಲು ಮಾಡಿದ ಕ್ರಮ ಖಂಡಿಸಿ ಇಲ್ಲಿನ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಯಿತು .
ಗುಡಿಸಲು ದ್ವಂಸಮಾಡಿ ಭೂಮಿ ವಸತಿ ವಂಚಿತ ಬಡವರನ್ನು ಬೀದಿಪಾಲು ಮಾಡಿರುವುದನ್ನು ಖಂಡಿಸಿ, ಎಲ್ಲರಿಗೂ ಕೂಡಲೇ ನಿವೇಶನ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಜಾತ್ಯತೀತ ಜನತಾದಳದ ಎಚ್ ಎಚ್ ದೇವರಾಜ್ , ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಕೆ ಎಲ್ ಅಶೋಕ್ ನಿಲಗುಳಿ ಪದ್ಮನಾಭ ಇತರರು ನೇತೃತ್ವ ವಹಿಸಿದ್ದರು .
ಮಂಗಳವಾರ, ಫೆಬ್ರವರಿ 23, 2021
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಎಫ್ ಡಿ ಪ್ರಕರಣ ಪತ್ತೆ
ಚಿಕ್ಕಮಗಳೂರು :ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನಲ್ಲಿ ಮಂಗನ ಕಾಯಿಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ .
ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಮ್ಮನೆಯಲ್ಲಿ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಕಾಣಿಸಿಕೊಂಡಿದೆ .
ತೀರ್ಥಹಳ್ಳಿಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವ್ಯಕ್ತಿಯಲ್ಲಿ ಜ್ವರ ಕಾಣಿಸಿಕೊಂಡಿತು. ಪರೀಕ್ಷೆ ಮಾಡಿ ರಕ್ತದ ಮಾದರಿಯನ್ನು ತೀರ್ಥಹಳ್ಳಿ ಆಸ್ಪತ್ರೆಗೆ ಕಳಿಸಿದಾಗ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ .
ವ್ಯಕ್ತಿಯನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ . ಮಂಗನ ಕಾಯಿಲೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೆರೋಡಿ, ಬೆಮ್ಮನೆ ,ಕಾರೆಹೂಳಲು ಸೇರಿದಂತೆ 6 ಗ್ರಾಮಗಳಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ .
ರೈತ ಹೋರಾಟ :ದೆಹಲಿಯಲ್ಲಿ ಕನ್ನಡದ ಕಹಳೆ
ಚಿಕ್ಕಮಗಳೂರು :ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಚಳವಳಿಗೆ ಕರ್ನಾಟಕದ ರೈತರು ಬೆಂಬಲ ವ್ಯಕ್ತಪಡಿಸಿದ್ದಾರೆ .
ಕಳೆದ 1ತಿಂಗಳಿನಿಂದ ರಾಜ್ಯದ ವಿವಿಧ ಭಾಗಗಳಿಂದ ರೈತರು ತಂಡೋಪತಂಡವಾಗಿ ದೆಹಲಿಗೆ ತೆರಳಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಚಳವಳಿಗೆ ಅಳಿಲು ಸೇವೆ ಸಲ್ಲಿಸಿದ್ದಾರೆ .
ಕರ್ನಾಟಕ ಜನಶಕ್ತಿ ತಂಡದ ಸಿರಿಮನೆ ನಾಗರಾಜ್, ವಾಸು ,ಮಲ್ಲಿಗೆ ಇತರೆ ಗೆಳೆಯರು ಈಗಾಗಲೇ ದೆಹಲಿಗೆ ತೆರಳಿದ್ದು , ಹೋರಾಟ ನಡೆಸುತ್ತಿರುವ ರೈತರನ್ನು ಭೇಟಿಯಾಗಿ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ .
ಚಿಕ್ಕಮಗಳೂರಿನಿಂದ ಕಳಸದ ವಾಸು ,ರಾಮುಕೌಳಿ, ಹಾಗಲಗಂಚಿ ವೆಂಕಟೇಶ್ ಸೇರಿದಂತೆ ಅನೇಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ .
ಸೋಮವಾರ, ಫೆಬ್ರವರಿ 22, 2021
ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ
ಚಿಕ್ಕಮಗಳೂರು :ಜಿಲ್ಲಾಧಿಕಾರಿಯಾಗಿ ಕೆ. ಎನ್ .ರಮೇಶ್ ಅಧಿಕಾರ ಸ್ವೀಕರಿಸಿದರು .
ಕಂದಾಯ ಇಲಾಖೆ ನೌಕರರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಶುಭ ಹಾರೈಸಿದರು .
ಈ ಹಿಂದೆ ಇವರು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾಗಿದ್ದರು
ಭಾನುವಾರ, ಫೆಬ್ರವರಿ 21, 2021
ರೈತರಿಗೆ ಮಣ್ಣು ತಿನ್ನಿಸಿದ ಗುತ್ತಿಗೆದಾರ !!
ಚಿಕ್ಕಮಗಳೂರು ಕಡೂರು ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ರೈತರಿಗೆ ವಂಚಿಸಿದ್ದಾರೆ ಎಂದು ಹಿರೇಗೌಜ ಗ್ರಾಮಸ್ಥರು ಆರೋಪಿಸಿದ್ದಾರೆ.
ರಸ್ತೆ ಕಾಮಗಾರಿ ವೇಳೆ ಹಿರೇಗೌಜ ಗ್ರಾಮದ ಕೆಲವು ರೈತರ ಜಮೀನಿನಿಂದ ಉಚಿತವಾಗಿ ಗ್ರಾವೆಲ್ ಮಣ್ಣು ತೆಗೆದಿದ್ದು ಬದಲಿಗೆ ಗೋಡು ಮಣ್ಣು ಹಾಕಿಸಿಕೊಡುವುದಾಗಿ ನೂರಾರು ಲೋಡ್ ಮಣ್ಣು ತೆಗೆದಿದ್ದಾರೆ ಎಂದು ಹೇಳಿದ್ದಾರೆ
ಇದುವರೆಗೂ ರೈತರ ಜಮೀನಿಗೆ ಬದಲಿ ಮಣ್ಣು ಹಾಕಿಸಿಲ್ಲ. ಇದರಿಂದಾಗಿ ರೈತರು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರನಿಗೆ ಕರೆ ಮಾಡಿದರು ಸರಿಯಾದ ಉತ್ತರ ಸಿಗುತ್ತಿಲ್ಲ ಎಂದು ದೂರಿದ್ದಾರೆ .
ಸಣ್ಣ ನಿಲ್ದಾಣ :ಹಿರೇಗೌಜ ಗ್ರಾಮದ ಮುಖ್ಯ ರಸ್ತೆಯಲ್ಲಿ 50 ಜನ ನಿಲ್ಲುವಂತಹ ನಿಲ್ದಾಣ ತೆರವು ಮಾಡಿ ಬದಲಿಗೆ ಇದೀಗ ಶೆಡ್ ಮಾದರಿಯಲ್ಲಿ ಸಣ್ಣದಾದ ನಿಲ್ದಾಣ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ 1ವಾರದಲ್ಲಿ ಸಮಸ್ಯೆ ಬಗೆಹರಿಸುವಂತೆ ಗಡುವು ನೀಡಿದ್ದಾರೆ .
ಗಿರಿ ಸ್ವಚ್ಚತೆ :ರಾಶಿ ರಾಶಿ ಕಸ ಸಂಗ್ರಹ
ಚಿಕ್ಕಮಗಳೂರು:ಜಿಲ್ಲಾ ಆಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಗಿರಿ ಸ್ವಚ್ಛತಾ ಆಂದೋಲನದ ನಡೆಯಿತು .
ಸೂರ್ಯ ಮೂಡುವ ಮೊದಲೇ ಆಂದೋಲನಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಅಕ್ಷಯ್ ಹಾಕೆ ಚಾಲನೆ ನೀಡಿದರು .
ಪ್ರವಾಸೋದ್ಯಮ ಇಲಾಖೆ, ಸೇವಾದಳ ,ಬ್ರಹ್ಮಕುಮಾರಿ ಸಂಸ್ಥೆ ,ಗೃಹರಕ್ಷಕದಳ ,ಪಶುಪಾಲನಾ ಇಲಾಖೆ ,ಎನ್ ಸಿಸಿ ಸೇರಿದಂತೆ ವಿವಿಧ ಸಂಘಟನೆಗಳ ಅಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು .
ಕೈಮರದಿಂದ ಮುಳ್ಳಯ್ಯನಗಿರಿ ವರೆಗೆ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಬೆಳಗಿನ ಚಳಿಯನ್ನು ಲೆಕ್ಕಿಸದೆ ನೂರಾರು ಜನ ಪಾಲ್ಗೊಂಡಿದ್ದರು .
ರಸ್ತೆಯ ಇಕ್ಕೆಲ ಸೇರಿದಂತೆ ಬೆಟ್ಟದ ತಪ್ಪಲಿನಲ್ಲಿ ಬಿದ್ದಿದ್ದ ರಾಶಿ ರಾಶಿ ಕಸವನ್ನು ಸಂಗ್ರಹಿಸಲಾಯಿತು. ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಪರಿಸರವನ್ನು ಸ್ವಚ್ಛ ವಾಗಿ ಇಡುವಂತೆ ಇದೇ ಸಂದರ್ಭದಲ್ಲಿ ಅರಿವು ಮೂಡಿಸಲಾಯಿತು .
## ಚಿಕ್ಕಮಗಳೂರು ಜಿಲ್ಲಾಡಳಿತ ##ಪ್ರವಾಸೋದ್ಯಮ ಇಲಾಖೆ ##ಪೊಲೀಸ್ ಇಲಾಖೆ ##chikmagalur tourism .
## Karnataka tourism
ಚಿತ್ರಕೃಪೆ :ತಾರನಾಥ್ ಕಾಮತ್
ಶನಿವಾರ, ಫೆಬ್ರವರಿ 20, 2021
ರಸ್ತೆ ನಿರ್ಮಿಸದೆ ಬಿಲ್ ಪಾವತಿ :ಭಾರಿ ಭ್ರಷ್ಟಾಚಾರ ಶಂಕೆ
ಚಿಕ್ಕಮಗಳೂರು :ನಗರದ ಐಡಿಎಸ್ ಜಿ ಕಾಲೇಜು ಆವರಣದ ಹೆಲಿಪ್ಯಾಡ್ ಗೆ ರಸ್ತೆ ನಿರ್ಮಿಸದಿದ್ದರೂ 19.38 ಲಕ್ಷ ರೂ ಬಿಲ್ ಪಾವತಿಸಿರುವ ಹಗರಣ ಬೆಳಕಿಗೆ ಬಂದಿದೆ .
ದಾಖಲೆ ಸಮೇತ ಈ ಹಗರಣವನ್ನು ಬೆಳಕಿಗೆ ತಂದಿರುವ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ರಸೂಲ್ ಖಾನ್ ಕಾಮಗಾರಿಗೆ ೨೧ ಲಕ್ಷ ರೂ ಗುತ್ತಿಗೆ ನೀಡಲಾಗಿತ್ತು. ಆದರೆ ರಸ್ತೆಯನ್ನು ನಿರ್ಮಿಸಿಲ್ಲ .ಹೀಗಿದ್ದೂ ಲೋಕೋಪಯೋಗಿ ಇಲಾಖೆಯಿಂದ ಹಣ ಪಾವತಿಸಲಾಗಿದೆ ಎಂದು ಆರೋಪಿಸಿದ್ದಾರೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಉಡಾಫೆ ಉತ್ತರವನ್ನು ನೀಡುತ್ತಾರೆ ಎಂದು ಹೇಳಿರುವ ಅವರು ಈ ಬಗ್ಗೆ ಲೋಕಾಯುಕ್ತ ಹಾಗೂ ಎಸಿಬಿಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಪ್ರಕರಣದಲ್ಲಿ ಗುತ್ತಿಗೆದಾರನ ಗಮನಕ್ಕೆ ಬಾರದೆ ಬೇರೊಬ್ಬರಿಗೆ ಹಣ ಪಾವತಿಯಾಗಿರುವುದು ಅಚ್ಚರಿ ಮೂಡಿಸಿದೆ .
ಲೋಕೋಪಯೋಗಿ ಇಲಾಖೆಯಿಂದ ನಡೆದಿರುವ ಕಾಮಗಾರಿಗಳ ಸಮಗ್ರ ತನಿಖೆ ನಡೆದರೆ ಇನ್ನಷ್ಟು ಹಗರಣ ಬೆಳಕಿಗೆ ಬರುವ ಸಾಧ್ಯತೆಗಳು ಇವೆ .
ಶುಕ್ರವಾರ, ಫೆಬ್ರವರಿ 19, 2021
ರಾಜ್ಯದ ಹಲವೆಡೆ ಆಲಿಕಲ್ಲು ಮಳೆ: ರೈತ ಕಂಗಾಲು
ಚಿಕ್ಕಮಗಳೂರು :ರಾಜ್ಯದ ಅನೇಕ ಕಡೆಗಳಲ್ಲಿ ಇಂದು ಅಕಾಲಿಕ ಆಲಿಕಲ್ಲು ಮಳೆ ಬಿದ್ದಿದೆ .
ಮಡಿಕೇರಿ ಹಾಗೂ ಹಾಸನ ಜಿಲ್ಲೆಯ ಅನೇಕ ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಆಲಿ ಕಲ್ಲುಬಿದ್ದಿದ್ದು ಕೃಷಿಕರು ಕಂಗಲಾಗಿದ್ದಾರೆ .
ರಾಶಿ ರಾಶಿ ಆಲಿಕಲ್ಲುಗಳು ಬಿದ್ದಿದ್ದು ನೆಲಕ್ಕೆ ಹಿಮ ಹೊದಿಸಿದ ಅನುಭವ ಆಗಿದೆ .ಇದನ್ನು ನೋಡಿ ಜನ ಪುಳಕಿತಗೊಂಡಿದ್ದರೆ ಕೃಷಿಕರಿಗೆ ಮುಂದೇನು ಎಂಬ ಆತಂಕ ಎದುರಾಗಿದೆ .
ರಾಶಿ ರಾಶಿ ಬಿದ್ದ ಆಲಿಕಲ್ಲುಗಳನ್ನು ಕೆಲವರು ಪುಟ್ಟಿಗಳಲ್ಲಿ ಸಂಗ್ರಹಿಸಿದರೆ , ಕೆಲವರು ಹಾರೆ ಮೂಲಕ ಎಳೆದು ಹಾಕಿದ್ದಾರೆ.
ಇನ್ನೂ ಹಲವೆಡೆ ರಸ್ತೆಗಳಲ್ಲಿ ಮಲ್ಲಿಗೆ ಹೂ ಹಾಸಿದಂತೆ ಆಲಿಕಲ್ಲು ಬಿದ್ದಿರುವುದು ಕಂಡುಬಂದಿದೆ .ಹೂಕುಂಡಗಳಲ್ಲಿ ಉಪ್ಪನ್ನು ರಾಶಿ ಹಾಕಿದಂತೆ ಕಾಣಿಸುತ್ತಿದೆ .
ಚಿಕ್ಕಮಗಳೂರು :ವಿವಿಧೆಡೆ ರಥಸಪ್ತಮಿ
ಚಿಕ್ಕಮಗಳೂರು :ರಥಸಪ್ತಮಿ ಅಂಗವಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇಂದು ಸೂರ್ಯ ನಮಸ್ಕಾರ ನಡೆಯಿತು .
ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಸೂರ್ಯ ನಮಸ್ಕಾರ ನಡೆಯಿತು .
ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳು ಓಂ ಆಕೃತಿಯಲ್ಲಿ ನಿಂತು ಗಮನ ಸೆಳೆದರು .
ಬುಧವಾರ, ಫೆಬ್ರವರಿ 17, 2021
ಸಹಕಾರ ಸಾರಿಗೆ ಚಾಲಕ ಆತ್ಮಹತ್ಯೆ
ಚಿಕ್ಕಮಗಳೂರು: ಸಹಕಾರ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಗೋಪಾಲ ಪೂಜಾರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ .
ಸಾರಿಗೆ ಸಂಸ್ಥೆಯಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಸಂಸ್ಥೆಯಲ್ಲಿ 3ಲಕ್ಷ ರೂ ಸಾಲ ಮಾಡಿದ್ದರು ಎನ್ನಲಾಗಿದೆ .ಕಳೆದ 2ದಿನಗಳಿಂದ ಅವರು ಮನೆಗೆ ಬರದೆ ತಮ್ಮನ ಮನೆಯಲ್ಲಿ ಇದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ .
ಸಹಕಾರ ಸಾರಿಗೆ ತನ್ನ ಸಂಚಾರವನ್ನು ನಿಲ್ಲಿಸಿ 1ವರ್ಷ ಕಳೆದಿದ್ದು ಸಮಸ್ಯೆ ಈವರೆಗೂ ಬಗೆಹರಿದಿಲ್ಲ .ಸಂಸ್ಥೆಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಸರ್ಕಾರವೂ ಸ್ಪಂದಿಸಿಲ್ಲ .
ಮಂಗಳವಾರ, ಫೆಬ್ರವರಿ 16, 2021
ಕುಮಾರಸ್ವಾಮಿ ಆರೋಪ ದಲ್ಲಿ ಹುರುಳಿಲ್ಲ: ಸಿಟಿ ರವಿ ಪ್ರತಿಕ್ರಿಯೆ
ಚಿಕ್ಕಮಗಳೂರು :ರಾಮಮಂದಿರಕ್ಕೆ ಹಣ ನೀಡದವರ ಮನೆಗಳಿಗೆ ಗುರುತು ಹಾಕುತ್ತಾರೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಸಚಿವ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ ಉದ್ದೇಶದಿಂದ ಈ ಆರೋಪ ಮಾಡಿದ್ದಾರೆ. ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಸಾರಾಸಗಟಾಗಿ ತಳ್ಳಿಹಾಕಿದರು .
ರಾಮಮಂದಿರಕ್ಕೆ ಜನ ಸ್ವಯಂಪ್ರೇರಿತರಾಗಿ ಹಣವನ್ನು ನೀಡಿದ್ದಾರೆ ಇಚ್ಛೆ ಇದ್ದವರು ಕೊಡಬಹುದು .ಅನಗತ್ಯ ಆರೋಪ ಮಾಡಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು.
## ಎಚ್ ಡಿ ಕುಮಾರಸ್ವಾಮಿ
## jds karnataka
ಸೋಮವಾರ, ಫೆಬ್ರವರಿ 15, 2021
ರಾಮಮಂದಿರಕ್ಕೆ ಹಣ ನೀಡದವರ ಮನೆಗಳಿಗೆ ಗುರುತು: ಕುಮಾರಸ್ವಾಮಿ ಆರೋಪ
"ರಾಮಮಂದಿರಕ್ಕಾಗಿ ಹಣ ಕೊಡದವರ ಮನೆಗಳನ್ನು ಗುರುತು ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಇದು ಹಿಟ್ಲರ್ ಆಡಳಿತ ನೆನಪಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ .
ಶಿವಮೊಗ್ಗದಲ್ಲಿ ಮಾತನಾಡಿದ ಅವರು ಹಿಟ್ಲರ್ ಕಾಲದಲ್ಲಿ ನಾಜಿ, ಮತ್ತು ಜ್ಯೂ ಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ಆ ದಿನಗಳಲ್ಲೂ ಇದೇ ರೀತಿ ಮನೆಗಳಿಗೆ ಗುರುತು ಹಾಕಲಾಗುತ್ತಿತ್ತು ಇದು ಎಲ್ಲಿಗೆ ಹೋಗುತ್ತೆ ? ಯಾತಕ್ಕೆ ಮನೆಗಳನ್ನು ಗುರುತು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ ?
ಆರ್ ಎಸ್ ಎಸ್ ಹುಟ್ಟಿದ್ದು ಜರ್ಮನಿಯಲ್ಲಿ. ನಾಜಿ ಹುಟ್ಟಿದ ಕಾಲದಲ್ಲೇ ಎಂದು ಚರಿತ್ರಾಕಾರರು ಹೇಳುತ್ತಾರೆ. ಆ ನೀತಿಗಳನ್ನೆ ಮುಂದುವರೆಸಿದರೆ ಮುಂದೇನಾಗುತ್ತದೆ ಎನ್ನುವ ಭೀತಿ ಆವರಿಸಿದೆ ಎಂದು ಕಳವಳ ಹೊರಹಾಕಿದ್ದಾರೆ .
ದೇಶದಲ್ಲಿ ಮಾತಾಡುವ ಮೂಲಭೂತ ಹಕ್ಕನ್ನೆ ಕಸಿಯುತ್ತಿದ್ದಾರೆ.ಸ್ವತಂತ್ರವಾಗಿ ಯಾರೂ ಭಾವನೆಗಳನ್ನೆ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅಘೋಷಿತ ತುರ್ತು ಪರಿಸ್ಥಿತಿ ಇದೆ ವಾತಾವರಣ ನೋಡಿದಾಗ ಮುಂದೆ ದೇಶದಲ್ಲಿ ಏನು ಬೇಕಾದರೂ ಆಗಬಹುದು ಎಂದಿದ್ದಾರೆ.
ಕೆರೆ ಉಳಿಸಲು ವಿಭಿನ್ನ ಪ್ರಯತ್ನ
ಚಿಕ್ಕಮಗಳೂರು :ತಾಲ್ಲೂಕಿನ ಲಕ್ಷೀಪುರ ಕೆರೆಯ ಬಳಿ ನಮ್ಮೂರ ಕೆರೆ ಹಬ್ಬ ಹಮ್ಮಿಕೊಂಡು ಸ್ಥಳಿಯರಿಗೆ ಮನರಂಜನೆ ಜೊತೆಗೆ ಸಂಜೆಯ ವೇಳೆ ಸರ್ಕಾರಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಕಂದಾಯ ಇಲಾಖೆಯ ಉಪ ವಿಭಾಗಧಿಕಾರಿ ಡಾ|| ಹೆಚ್.ಎಲ್ ನಾಗರಾಜ್ ಹಾಗೂ ತಾಲೂಕು ತಹಶಿಲ್ದಾರ್ ಡಾ|| ಕೆ.ಜೆ ಕಾಂತರಾಜ್ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ರಾತ್ರಿ ಹತ್ತು ಗಂಟೆಯವರೆಗೆ ಕಾರ್ಯನಿರ್ವಹಿಸಿದರು .
ಕೆರೆ ಅಂಗಳದಲ್ಲಿ ಸಾಂಸ್ಕೃತಿಕ ಕಲರವ ಸಮೀಪದ ಗ್ರಾಮಸ್ಥರನ್ನು ಸೂಜಿ ಗಲ್ಲಿನಂತೆ ಸೆಳೆಯುವಂತಿತ್ತು. ವಿಷನ್ ಚಿಕ್ಕಮಗಳೂರು ಮತ್ತು ಲಕ್ಷಿಪುರ ಕೆರೆ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಕೆರೆಯ ಪಕ್ಕದಲ್ಲೇ ವೇದಿಕೆ ನಿರ್ಮಿಸಿ , ಫೈರ್ ಕ್ಯಾಂಪ್ ಆಯೋಜಿಲಾಗಿತ್ತು.
ಸೂಫಿ ಸಂತ ನಾದ ಮಣಿನಾಲ್ಕೂರು ನಡೆಸಿಕೊಟ್ಟ ತತ್ವ ಪದಗಳು , ಸಾಣೆ ಹಳ್ಳಿ ರಂಗ ಶಾಲೆಯ ರಂಗ ಕರ್ಮಿ ಆರ್. ಜಗದೀಶ್ ಜಾನಪದ ಗಾಯನ ನಡೆಸಿಕೊಟ್ಟರು. ಎ.ಎನ್ ಮಹೇಶ್, ಬೆಳವಾಡಿ ರವೀಂದ್ರ, ರೇಖಾ ಹುಲಿಯಪ್ಪಗೌಡ,ರವಿ ಪ್ರದೀಪ್,ಪ್ರಕಾಶ್ ಉಪಸ್ಥಿತರಿದ್ದರು.
ಭಾನುವಾರ, ಫೆಬ್ರವರಿ 14, 2021
ಅತ್ಯಾಚಾರದ ವಿಡಿಯೋ ವೈರಲ್: ಮೂವರ ಬಂಧನ
ಚಿಕ್ಕಮಗಳೂರು: ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಅದನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಕಿರಾತಕರು ಆಕೆಯನ್ನು ನಗ್ನಗೊಳಿಸಿ ವೀಡಿಯೋ ಮತ್ತು ಭಾವಚಿತ್ರವನ್ನು ತೆಗೆದು ಸ್ನೇಹಿತರಿಗೆ ಹಂಚಿದ್ದಾರೆ .
ಈ ಬಗ್ಗೆ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರವೀಣ್ ಚರಣ್ ಹಾಗೂ ಸಂದೇಶ್ ಎಂಬಾತನನ್ನು ಬಂಧಿಸಲಾಗಿದೆ .
ಜಿಲ್ಲೆಯಲ್ಲಿ ಇತ್ತೀಚೆಗೆ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಅಧಿಕವಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ .
ಶನಿವಾರ, ಫೆಬ್ರವರಿ 13, 2021
ಪೋಲಿಸ್ ಠಾಣೆಗೆ ನುಗ್ಗಿದ ವಿದ್ಯಾರ್ಥಿಗಳು !!
ಚಿಕ್ಕಮಗಳೂರು: ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವ ಭಾಗವಾಗಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶ ಕಲ್ಪಿಸಲಾಯಿತು .
೧೨೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಪ್ರದೇಶ ವ್ಯಾಪ್ತಿಯ ಠಾಣೆಗಳಿಗೆ ತೆರಳಿ ಪೊಲೀಸ್ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ಗಮನಿಸಿದರು .
ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಅಧಿಕಾರಿಗಳು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರಲ್ಲದೆ ಸಖಿ ಸೇರಿದಂತೆ ವಿವಿಧ ಕಾರ್ಯಕ್ರಮ ಹಾಗೂ ಕಾಯಿದೆಗಳ ಕುರಿತು ಮಾಹಿತಿಯನ್ನು ಒದಗಿಸಿದರು .
ಚಿಕ್ಕಮಗಳೂರು ಡಿ.ಸಿ / ಎಡಿಸಿ ವರ್ಗಾವಣೆ
ಚಿಕ್ಕಮಗಳೂರು: ಇಲ್ಲಿನ ಜಿಲ್ಲಾಧಿಕಾರಿಗಳಾಗಿದ್ದ ಬಗಾದಿ ಗೌತಮ್ ಅವರನ್ನು ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ .
ಶುಕ್ರವಾರ, ಫೆಬ್ರವರಿ 12, 2021
ಸರ್ಕಾರಿ ನೌಕರನ ಮೇಲೆ ಹಲ್ಲೆ ಆರೋಪ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೇರಿ ಇಬ್ಬರ ಮೇಲೆ ಎಫ್.ಐ.ಆರ್
ಚಿಕ್ಕಮಗಳೂರು :ಜಿಲ್ಲೆಯ ಕೊಪ್ಪ ಪಟ್ಟಣ ಪಂಚಾಯತಿಯ ಸಮುದಾಯ ಸಮನ್ವಯ ಅಧಿಕಾರಿ ಸುಬ್ಬಣ್ಣ ಎಂಬುವವರ ಮೇಲೆ ಖಾಸಗಿ ಲಾಡ್ಜ್ ನಲ್ಲಿ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆಂದು ಕೊಪ್ಪ ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದು, ಈ ಸಂಭಂದ ಎಫ್.ಐ.ಆರ್ ದಾಖಲಾಗಿದೆ.
ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ, ಪಟ್ಟಣ ಪಂಚಾಯತಿ ಸದಸ್ಯ ಶ್ರೀನಿವಾಸ್ ಶೆಟ್ಟಿ ಹಾಗೂ ಪ್ರಸನ್ನ ಶೆಟ್ಟಿ ಎಂಬುವವರ ಮೇಲೆ ದೂರು ದಾಖಲಾಗಿದೆ.
ಜೆ.ಎಂ.ಜೆ ಲಾಡ್ಜ್ ನ ಕೊಠಡಿಯೊಂದರಲ್ಲಿ ತನ್ನ ಮೇಲೆ ಹಲ್ಲೆ ನಡೆಯುವ ವೇಳೆಯಲ್ಲಿ ಪ.ಪಂ ಮುಖ್ಯಧಿಕಾರಿ ಬಸವರಾಜ್ ಹಾಗೂ ಸಿಬ್ಬಂದಿ ಕಿಶೋರ್ ಇದ್ದು, ಸುಮ್ಮನೆ ನಿಂತಿದ್ದರು ಎಂದು ಆರೋಪಿಸಿದ್ದಾರೆ .
ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ನ್ಯಾಯ ದೊರಕಿಸ ಕೊಡಬೇಕೆಂದು ದೂರು ನೀಡಿದ್ದಾರೆ.ಜಿಲ್ಲಾಧಿಕಾರಿಗಳ ಒಪ್ಪಿಗೆ ಮೇರೆಗೆ ಈ ಪ್ರಕರಣ ದಾಖಲಾಗಿದೆ .
ಮಹಿಳಾ ಕ್ರಿಕೆಟ್ ತಂಡಕ್ಕೆಕಾಫಿನಾಡಿನ ಶಿಶಿರಗೌಡ ಆಯ್ಕೆ
ಚಿಕ್ಕಮಗಳೂರು :ಅಂತರ ರಾಜ್ಯ ಮಹಿಳಾ ಏಕದಿನ ಪಂದ್ಯಾವಳಿಗೆ ಕರ್ನಾಟಕ ತಂಡಕ್ಕೆ ನಗರದ ಶಿಶಿರ ಗೌಡ ಆಯ್ಕೆಯಾಗಿದ್ದಾರೆ .
ಎಡಗೈ ಬ್ಯಾಟಿಂಗ್ ಹಾಗೂ ಬಲಗೈ ವೇಗದ ಬೌಲರ್ ವಿಭಾಗದಲ್ಲಿ ಖ್ಯಾತಿ ಪಡೆದಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ .
೨೦೧೫ ರಿಂದ ವಿವಿಧ ವಿಭಾಗಗಳಲ್ಲಿ ಪ್ರತಿನಿಧಿಸಿರುವ ಶಿಶಿರಗೌಡ ಆರ್. ಪಿ .ಕ್ರಿಕೆಟ್ ಅಕಾಡಮಿಯ ರಾಮದಾಸ್ ಪ್ರಭು ಅವರಲ್ಲಿ ತರಬೇತಿ ಪಡೆದಿದ್ದಾರೆ .ಡಾಕ್ಟರ್ ಅಶ್ವತ್ ಬಾಬು ತ್ರಿವೇಣಿ ದಂಪತಿಗಳ ಪುತ್ರಿ ಈಕೆ . ಈಕೆಯ ಆಯ್ಕೆ ಕಾಫಿ ನಾಡಿನ ಕ್ರಿಕೆಟ್ ವಲಯದಲ್ಲಿ ಹರ್ಷವನ್ನು ಉಂಟುಮಾಡಿದೆ .
ಗುರುವಾರ, ಫೆಬ್ರವರಿ 11, 2021
200 ಎಕರೆ ಕಾಫಿ ತೋಟ ಸೀಝ್
ಚಿಕ್ಕಮಗಳೂರು : ಕೊಟ್ಟ ಸಾಲ ಹಿಂದಿರುಗಿಸದ ಹಿನ್ನೆಲೆಯಲ್ಲಿ ಸುಮಾರು ೨೦೦ ಎಕರೆ ಕಾಫಿ ತೋಟವನ್ನು ಬ್ಯಾಂಕ್ ವಶಪಡಿಸಿಕೊಂಡ ಘಟನೆ ನಡೆದಿದೆ .
ಹಿರೇಕೊಳಲೆ ಸಮೀಪದ ವಾಟೇಕಾನ್ ತೋಟದ ಮಾಲಿಕರು 2005 ರಲ್ಲಿ ಯೂನಿಯನ್ ಬ್ಯಾಂಕಿನಿಂದ ೨೨ ಕೋಟಿ ರೂ ಸಾಲವನ್ನು ಪಡೆದಿದ್ದರು ಎನ್ನಲಾಗಿದೆ .
ಸಾಲ ಮರುಪಾವತಿಸ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯ ಬ್ಯಾಂಕಿನ ಪರ ತೀರ್ಪು ನೀಡಿದ್ದು , ಪೊಲೀಸ್ ನೆರವಿನೊಂದಿಗೆ ತೋಟವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ .
ರಮೇಶ್ ರಾವ್ ,ದಿನಕರ ರಾವ್ ಎನ್ನುವವರಿಗೆ ಸೇರಿದ ತೋಟ ಇದು ಎನ್ನಲಾಗಿದೆ .ತೋಟ ಕಾರ್ಮಿಕರು ಹಾಗೂ ಸಾಕಷ್ಟು ಹಣ ಪಾವತಿ ಮಾಡಿಲ್ಲ ಎಂಬ ಆರೋಪವೂ ಇದೆ .
ತೋಟಕ್ಕೆ ಬೀಗ ಮುದ್ರೆ ಹಾಕಿದ್ದು ಕಾರ್ಮಿಕರನ್ನು ಖಾಲಿ ಮಾಡುವಂತೆ ತಿಳಿಸಲಾಗಿದೆ. ಈ ಪ್ರಕರಣ ಬೆಳೆಗಾರರಲ್ಲಿ ಆತಂಕವನ್ನು ಉಂಟು ಮಾಡಿದೆ .
ಹಲ್ಲೆ ನೆಡಸಿ ೧೫ ದಿನವಾದರೂ ಕ್ರಮವಿಲ್ಲ !?
ಚಿಕ್ಕಮಗಳೂರು : ಪಾನಮತ್ತನತ್ತನಾಗಿ ಬಂದ ವ್ಯಕ್ತಿಯೋರ್ವ ಹಲ್ಲೆ ನಡೆಸಿ 15 ದಿನವಾದರೂ ಪೋಲಿಸರು ಕ್ರಮಕೈಗೊಂಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ .
ಮೂಡಿಗೆರೆ ತಾಲೂಕಿನ ಕಣಚೂರಿನಲ್ಲಿಪ್ರಸನ್ನ ಎಂಬಾತ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಗೋಣಿಬೀಡು ಪೊಲೀಸರಿಗೆ ಪುಟ್ಟಸ್ವಾಮಿ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ .
ಇನ್ನೂ ಎಫ್ ಐ ಅರ್ ದಾಖಲು ಮಾಡದಿದ್ದು ,ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ಪುಟ್ಟಸ್ವಾಮಿ ಹಾಸಿಗೆ ಹಿಡಿದಿದ್ದಾರೆ .
ಶೃಂಗೇರಿ ಅತ್ಯಾಚಾರ ಪ್ರಕರಣ :ಬಂಧಿತರ ಸಂಖ್ಯೆ 14ಕ್ಕೆ ಏರಿಕೆ
ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ .
ಚಾಲಕ ಯತೀಶ್ ಬಂಧಿತ ಆರೋಪಿಯಾಗಿದ್ದು ,ಈತ ಬಾಲಕಿಗೆ ಪದೇಪದೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪವಿದೆ .
ಈ ಮಧ್ಯೆ ಬಾಲಕಿ ೨೦೦ ಕ್ಕೂ ಅಧಿಕ ಸಂಖ್ಯೆಗಳನ್ನು ಬ್ಲ್ಯಾಕ್ ಲಿಸ್ಟ್ ನಲ್ಲಿ ಸೇರಿಸಿದ್ದು ಆ ಕುರಿತು ತನಿಖೆ ನಡೆಯುತ್ತಿದೆ .ಇನ್ನೊಂದು ಪ್ರಕರಣ : ಈ ಮಧ್ಯೆ ಮೂಡಿಗೆರೆ ತಾಲ್ಲೂಕಿನ ಬಾಳೂರು ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ ನಡೆದಿದ್ದು ಆರೋಪಿಯನ್ನು ಬಂಧಿಸಲಾಗಿದೆ .
ಶೃಂಗೇರಿ ಪ್ರಕರಣದ ಸಮಗ್ರ ತನಿಖೆ ಹಾಗೂ ಉಳಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾ ಕೇಂದ್ರದಲ್ಲಿ ವಿವಿಧ ಸಂಘಟನೆಗಳು ನಿತ್ಯ ಪ್ರತಿಭಟನೆ ನಡೆಸುತ್ತಿರುವುದು ಗಮನಾರ್ಹ .
ಗಡಿರೇಖೆಯ ಮರಗಳಿಗೆ ಕತ್ತರಿ :7ಜನ ಅಮಾನತು
ಚಿಕ್ಕಮಗಳೂರು :ಮಾಫಿ ಪಾಸ್ ಹೆಸರಿನಲ್ಲಿ ಗಡಿರೇಖೆಯ ಸುಮಾರು ಮರಗಳನ್ನು ಕಡಿದ ಆರೋಪದ ಮೇಲೆ ೭ ಜನ ಅರಣ್ಯ ನೌಕರರನ್ನು ಅಮಾನತು ಪಡಿಸಲಾಗಿದೆ .
ಮೂಡಿಗೆರೆ ತಾಲ್ಲೂಕಿನ ಬಾಳೂರು ಮೀಸಲು ಅರಣ್ಯ ಪ್ರದೇಶದಲ್ಲಿ ಮಾಫಿ ಪಾಸ್ ಹೆಸರಿನಲ್ಲಿ ೩೫೦ ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿತ್ತು ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು .
ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೂ ಅಧಿಕಾರಿಗಳ ವಿರುದ್ಧ ದೂರನ್ನು ನೀಡಲಾಗಿತ್ತು . ಪ್ರಕರಣದ ಪ್ರಾಥಮಿಕ ವರದಿ ಹಾಗೂ ನಿಷ್ಪಕ್ಷಪಾತ ತನಿಖೆ ಉದ್ದೇಶದಿಂದ ೭ ಜನರನ್ನು ಅಮಾನತು ಪಡಿಸಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ .
ಚಿಕ್ಕಮಗಳೂರು ವಿಭಾಗದ ಪ್ರಭಾರಿ ಸರ್ವೆ ರೇಂಜರ್ ದಿನೇಶ್ ,ಫಾರೆಸ್ಟರ್ ಗಳಾದ ಮಧುಸೂದನ್, ಶಿವರಾಜನಾಯಕ್ ಮೂಡಿಗೆರೆ ಉಪ ವಿಭಾಗದ ಅರಣ್ಯ ರಕ್ಷಕ ಸುರೇಶ್ ,ಕೊಪ್ಪ ವಿಭಾಗದ ಫಾರೆಸ್ಟರ್ ಯಾಸಿನ್ ಬಾಷಾ ,ಅರಣ್ಯ ರಕ್ಷಕ ನವೀನ್ ಕುಮಾರ್ ,ಸರ್ವೆ ಫಾರೆಸ್ಟರ್ ಅರುಣ್ ಕುಮಾರ್ ಅಮಾನತುಗೊಂಡಿದ್ದು , ಪ್ರಕರಣದ ಕೂಲಂಕಷ ತನಿಖೆಗೆ ಆದೇಶಿಸಲಾಗಿದೆ .
ಬುಧವಾರ, ಫೆಬ್ರವರಿ 10, 2021
ಅತ್ಯಾಚಾರ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಚಿಕ್ಕಮಗಳೂರು :ಶೃಂಗೇರಿ ಹಾಗೂ ಮಲ್ಲಂದೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಯಿತು .
ಆಜಾದ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸ್ಕ್ವೇರ್ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳನ್ನು ಬಂಧಿಸದೆ ರಕ್ಷಣೆ ನೀಡಲಾಗುತ್ತದೆ, ಮಲ್ಲಂದೂರಿನ ಆರೋಪಿಯನ್ನು ಈವರೆಗೂ ಬಂಧಿಸಿಲ್ಲ ಎಂದು ಆರೋಪಿಸಿದರು .
ಶೃಂಗೇರಿ ಪ್ರಕರಣದಲ್ಲಿ ಓರ್ವ ಅಧಿಕಾರಿಯನ್ನು ಅಮಾನತು ಮಾಡಿದರೆ ಮತ್ತೊಬ್ಬರನ್ನು ಎತ್ತಂಗಡಿ ಮಾಡಲಾಗಿದೆ.ಅಧಿಕಾರಿಗಳು ಪ್ರಭಾವಕ್ಕೆ ಮಣಿದಿರುವುದನ್ನು ಇದು ಸೂಚಿಸುತ್ತದೆ ಎಂದು ಟೀಕಿಸಿದರು.
ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಇಲ್ಲವಾದಲ್ಲಿ ಚಳವಳಿಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು .
ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ
ಚಿಕ್ಕಮಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಚಿಕ್ಕಮಗಳೂರಿನಲ್ಲಿ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಯಿತು .
ಪೆಟ್ರೋಲ್, ಡೀಸೆಲ್ ,ಅಡುಗೆ ಅನಿಲ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ .ಇದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು .
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್ ಎಚ್ ದೇವರಾಜ್, ಹೊಲಗದ್ದೆ ಗಿರೀಶ್ ಇತರರು ಪಾಲ್ಗೊಂಡಿದ್ದರು .
ಮಂಗಳವಾರ, ಫೆಬ್ರವರಿ 9, 2021
ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಹೊಸ ಸಸ್ಯ ಪ್ರಭೇದ ಪತ್ತೆ
ಚಿಕ್ಕಮಗಳೂರು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಾಧಿಕಾರಿ ವಾಹನ ಚಾಲಕ ಮಂಜುನಾಥ್ .ಬಿ ,ಮುಳ್ಳಯ್ಯನಗಿರಿ ಭಾಗದಲ್ಲಿ ಕಂಡುಬರುವ ವಿಶಿಷ್ಟ ಆರ್ಕಿಡ್ ಸಸ್ಯ ( ಸೀತಾಳೆಹೂವಿನ ಪ್ರಭೇದ ) ಪತ್ತೆಮಾಡಿದ್ದಾರೆ .ಕೇರಳದ ವಯನಾಡುವಿನಲ್ಲಿ ಡಾ.ಕೆ .ವಿ ಜಾರ್ಜ್ ಎಮರಿಟ್ ಸಸ್ಯ ತಜ್ನ್ಯ ಪತ್ತೆಮಾಡಿದ್ದರು . ವೈಭಿಯ ಜಾತಿಗೆ ಸೇರಿದ ಸಸ್ಯ .ತೇವಾಂಶ ಬರೀತಾ ಕಾಡು ಶೋಲಾ ಕಾಡಿನಲ್ಲಿ ಹುಟ್ಟುತ್ತದೆ .ಡಿಸೆಂಬರ್ ನಲ್ಲಿ ಚಿಗುರಿ ,ಫೆಬ್ರವರಿ ಯಲ್ಲಿ ಹೂವು ಬಿಡುತ್ತದೆ .
ಮಂಜುನಾಥ್ ಸಸ್ಯಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ,ವಿಶಿಷ್ಟ ಸಸ್ಯ ಪ್ರಭೇದಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.
ಸೋಮವಾರ, ಫೆಬ್ರವರಿ 8, 2021
ಸೌಂದರ್ಯದ ಗಣಿ : ಕ್ಯಾತನಮಕ್ಕಿ
ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ವಾಸಿ ಸ್ಥಳ ಕ್ಯಾತನಮಕ್ಕಿ .
ನಿಸರ್ಗದ ಸೌಂದರ್ಯವನ್ನೆಲ್ಲ ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಪ್ರಶಾಂತ ಸ್ಥಳ .
ವಾರದ ರಜಾ ದಿನ ಕಳೆಯಲು ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ .ಅರಣ್ಯ ಇಲಾಖೆ ಇದೀಗ 50 ರೂ ಶುಲ್ಕ ವಿಧಿಸುತ್ತಿದೆ .
#ಚಿಕ್ಕಮಗಳೂರು ಪ್ರವಾಸೋದ್ಯಮ
#ಕರ್ನಾಟಕ ಪ್ರವಾಸೋದ್ಯಮ
#chikmagalur tourist spot
ಅಕ್ರಮ ಮರ ಕಡಿತಲೆ ಆರೋಪ :ನಾಲ್ವರು ಅಧಿಕಾರಿಗಳ ವಿರುದ್ಧ ದೂರು ಸಲ್ಲಿಕೆ
ಚಿಕ್ಕಮಗಳೂರು: ಅಕ್ರಮ ಮರ ಕಡಿತಲೆ ಆರೋಪದ ಮೇಲೆ ನಾಲ್ವರು ಅರಣ್ಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಲಾಗಿದೆ .
ಶನಿವಾರ, ಫೆಬ್ರವರಿ 6, 2021
ಕೃಷಿ ಕಾಯ್ದೆ ವಿರೋಧಿಸಿ ರಕ್ತದಲ್ಲಿ ಸಹಿ ಹಾಕಿ ಪತ್ರ ಚಳವಳಿ
ಚಿಕ್ಕಮಗಳೂರು: ರೈತರ ಪಾಲಿಗೆ ಮರಣ ಶಾಸನವಾಗಿರುವ ಕೃಷಿ ಕಾಯ್ದೆಯನ್ನು ತಕ್ಷಣ ರದ್ದುಪಡಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರಿನಲ್ಲಿ ರಕ್ತ ಸಹಿ ಪತ್ರ ಚಳವಳಿ ನಡೆಯಿತು .
ಆಲ್ದೂರು ಹೋಬಳಿ ಕಾಫಿ ಬೆಳೆಗಾರರ ಒಕ್ಕೂಟದ ಮುಖಂಡ ವಿಜಯ್ ನೇತೃತ್ವದಲ್ಲಿ ಅಂಚೆ ಕಚೇರಿ ಬಳಿ ಜಮಾಯಿಸಿದ ರೈತರು ಕೃಷಿ ಕಾಯ್ದೆಯನ್ನು ವಿರೋಧಿಸಿ ಪತ್ರಕ್ಕೆ ರಕ್ತದಲ್ಲಿ ಸಹಿ ಮಾಡಿ ಪ್ರಧಾನಿಗೆ ಪತ್ರವನ್ನು ಪೋಸ್ಟ್ ಮಾಡಿದರು .ಇನ್ನೊಂದೆಡೆ ಹಿರೇಮಗಳೂರಿನಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ರಸ್ತೆ ತಡೆ ಚಳವಳಿ ನಡೆಯಿತು .ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು .
ಶುಕ್ರವಾರ, ಫೆಬ್ರವರಿ 5, 2021
ನಾಟಕ ಅಕಾಡಮಿ ಪ್ರಶಸ್ತಿ ಪ್ರಕಟ
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ 2020ನೇ ಸಾಲಿನ ಪ್ರಶಸ್ತಿ ಘೋಷಣೆಯಾಗಿದೆ.
ಜೀವಮಾನದ ರಂಗಗೌರವ ಪ್ರಶಸ್ತಿಗೆ ನಟ, ನಾಟಕಕಾರ, ನಿರ್ದೇಶಕ ಎಸ್.ಎನ್.ಸೇತೂರಾಂ ಆಯ್ಕೆಯಾಗಿದ್ದಾರೆ. ವಾರ್ಷಿಕ ಪ್ರಶಸ್ತಿಗೆ 25 ಮಂದಿ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಮಾರ್ಚ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆಯಲಿದೆ.
ಜೀವಮಾನದ ರಂಗಗೌರವ ಪ್ರಶಸ್ತಿ
1. ಶ್ರೀ ಎಸ್.ಎನ್.ಸೇತೂರಾಂ, ಬೆಂಗಳೂರು
ವಾರ್ಷಿಕ ರಂಗಪ್ರಶಸ್ತಿ
1. ಸಂತೋಷ ಕುಮಾರ ಕುಸನೂರು, ಕಲಬುರ್ಗಿ
2. ಎಂ.ಇಸ್ಮಾಯಿಲ್ ಸಾಬ್, ರಾಯಚೂರು
3. ಭರಮಪ್ಪ ಜುಟ್ಲದ, ಕೊಪ್ಪಳ
4. ಮಾ.ಭ.ಸೋಮಣ್ಣ, ಹೊಸಪೇಟೆ, ಬಳ್ಳಾರಿ
5. ಗೆಣಿಕೆಹಾಳು ತಿಮ್ಮನಗೌಡ ಮೇಲುಸೀಮೆ, ಬಳ್ಳಾರಿ
6. ಗುರುಬಸಪ್ಪ ಕಲ್ಲಪ್ಪ ಸಜ್ಜನ, ವಿಜಯಪುರ
7. ಹಣಮವ್ವ ಗಾಜರ ಕುಳಲಿ, ಬಾಗಲಕೋಟೆ
8. ಪಿ ಢಗಳಚಂದ್ರ ಪವಾರ, ಬಾಗಲಕೋಟೆ
9. ಉಮಾದೇವಿ ಹಿರೇಮಠ, ಗದಗ
10. ಬಸವರಾಜ ಬ ಕಡ್ಲೆಣ್ಣನವರ, ಧಾರವಾಡ
11. ಐರಣಿ ಬಸವರಾಜ, ದಾವಣಗೆರೆ
12. ನೂರಜಹಾನ ಗೊರಜಿನಾಳ್, ಚಿತ್ರದುರ್ಗ
13. ಮಹಾವೀರ ಜೈನ್, ಚಿಕ್ಕಮಗಳೂರು
14. ಅಶ್ವತ್ಥ ಕದಂಬ, ಮೈಸೂರು
15. ಚಂದ್ರಶೇಖರಯ್ಯ ಎಂ.ಆರ್., ಕೊಡಗು
16. ಧನ್ಯಕುಮಾರ, ಮಂಡ್ಯ
17. ವೆಂಕಟರಮಣಸ್ವಾಮಿ, ಚಾಮರಾಜನಗರ
18. ಶ್ರೀನಿವಾಸ ಪ್ರಭು ಉಪ್ಪುಂದ, ಉಡುಪಿ
19. ರೋಹಿಣಿ ಜಗರಾಂ, ಮಂಗಳೂರು
20. ಕೆ.ಎನ್.ವಾಸುದೇವ ಮೂರ್ತಿ, ಬೆಂಗಳೂರು ಗ್ರಾಮಾಂತರ
21. ವಿ.ಲಕ್ಷ್ಮೀಪತಿ, ಬೆಂಗಳೂರು ನಗರ
22. ಎಂ.ಎಸ್.ವಿದ್ಯಾ, ಬೆಂಗಳೂರು ನಗರ
23. ಮಂಜುಳಾ ಬಿ.ಎನ್. ಬೆಂಗಳೂರು ನಗರ
24. ಗೀತಾ ಸುರತ್ಕಲ್, ಬೆಂಗಳೂರು ನಗರ
25. ಬಾಬು ಹಿರಣ್ಣಯ್ಯ, ಬೆಂಗಳೂರು ನಗರ
ಕಲ್ಚರ್ಡ್ ಕೆಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ: ಮಾ.ಭಾಸ್ಕರ, ಬೆಂಗಳೂರು
ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ : ವೆಂಕಣ್ಣ ಕಾಮನೂರು, ಕೊಪ್ಪಳ
ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿ : ಅನ್ನಪೂರ್ಣ ಹೊಸಮನಿ, ಧಾರವಾಡ
ಕೆ.ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ: ರಂಗಸಂಪದ, ಬೆಳಗಾವಿ
ಶ್ರೀಮತಿ ಮಾಲತಿಶ್ರೀ,ಮೈಸೂರು ದತ್ತಿನಿಧಿ ಪುರಸ್ಕಾರ: ಸುನಂದಾ ಹೊಸಪೇಟೆ, ಧಾರವಾಡ
ಅತ್ಯಾಚಾರಿಗಳಿಗೆ ರಕ್ಷಣೆ ಆರೋಪ :ತನಿಖಾಧಿಕಾರಿ ಅಮಾನತು
ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ರಕ್ಷಣೆ ನೀಡಿದ್ದಾರೆಂಬ ಆರೋಪದ ಮೇಲೆ ತನಿಖಾಧಿಕಾರಿ ಸಿದ್ದರಾಮಪ್ಪನ ಅವರನ್ನು ಅಮಾನತುಪಡಿಸಲಾಗಿದೆ .
ಕೆಲವರನ್ನು ಮಾತ್ರ ಈವರೆಗೆ ಬಂಧಿಸಿದ್ದು ಉಳಿದವರನ್ನು ಬಂಧಿಸುವಲ್ಲಿ ಮೀನಮೇಷ ಎಣಿಸುತ್ತಿದ್ದು , ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಇವರ ವಿರುದ್ಧ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ದೂರು ನೀಡಿದ್ದರು .
ಪೊಲೀಸರು ಬಾಲಕಿಯನ್ನು ರಕ್ಷಿಸಿದಾಗ ಸಮಿತಿ ಗಮನಕ್ಕೆ ತಂದಿಲ್ಲ. ದೂರು ನೀಡಿ 2ದಿನ ಕಳೆದಿದ್ದರು ಪ್ರಕರಣ ದಾಖಲಿಸಿರಲಿಲ್ಲ ಎಂದು ಆರೋಪಿಸಲಾಗಿತ್ತು.
ಈ ಪ್ರಕರಣದಲ್ಲಿ ಬಿಜೆಪಿ ಹಾಗೂ ಅದರ ಅಂಗ ಸಂಸ್ಥೆಯ ಅನೇಕ ಕಾರ್ಯಕರ್ತರು ಆರೋಪಿಗಳಾಗಿರುವುದು ಕಾಲ ಗಮನಾರ್ಹ ಸಂಗತಿಯಾಗಿದೆ .ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಹಾಗೂ ತನಿಖಾಧಿಕಾರಿ ಅಮಾನತಿಗೆ ಒತ್ತಾಯಿಸಿ ಕಾಂಗ್ರೆಸ್ ಘಟಕದ ವತಿಯಿಂದ ಶೃಂಗೇರಿ ಠಾಣೆಮುಂದೆ ಬೃಹತ್ ಪ್ರತಿಭಟನೆ ನಡೆದು ಮುತ್ತಿಗೆ ಹಾಕುವ ಯತ್ನ ನಡೆದಿತ್ತು.
ಅತ್ಯಾಚಾರಿಗೆ ಶಾಸಕರ ಸಖ್ಯ !!? -ಪೊಲೀಸ್ ರಕ್ಷಣೆ ?
ಚಿಕ್ಕಮಗಳೂರು: ತಾಲೂಕಿನ ಮಲ್ಲಂದೂರು ಠಾಣೆ ವ್ಯಾಪ್ತಿಯಲ್ಲಿ ದಲಿತ ಯುವತಿ ಮೇಲೆ ಅತ್ಯಾಚಾರ ಪ್ರಕರಣವೊಂದು ನಡೆದಿದ್ದು ದೂರು ನೀಡಿ 15 ದಿನ ಕಳೆದರೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ.
ಆರೋಪಿ ಸಂಸದೆ ಶೋಭಾ ಕರಂದ್ಲಾಜೆ ,ಶಾಸಕರಾದ ಸಿ ಟಿ ರವಿ, ಪ್ರಾಣೇಶ್ ಜೂತೆ ಗುರುತಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ .ಈ ದತ್ತ ಜಯಂತಿಯಲ್ಲಿ ಪಾಲ್ಗೊಂಡಿದ್ದು ಕೇಸರಿ ರುಮಾಲು ರಾರಾಜಿಸುತ್ತಿದೆ !
ಆವತಿ ಗ್ರಾಮದ ಎಚ್ ಟಿ ಮಲ್ಲೇಶ್ ಎಂಬಾತ ತನ್ನ ತೋಟಕ್ಕೆ ಕೂಲಿಗೆಂದು ಯುವತಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದು , ಆಕೆ ಈಗ ಗರ್ಭಿಣಿಯಾಗಿದ್ದಾಳೆ .ಈ ಸಂಬಂಧ ಮಲ್ಲಂದೂರು ಠಾಣೆ ಕೆಲ ದಿನಗಳ ಹಿಂದೆ ದೂರು ನೀಡಲಾಗಿದೆ . ಈವರೆಗೂ ಆರೋಪಿಯನ್ನು ಬಂಧಿಸದೆ ತಲೆಮರೆಸಿಕೊಂಡಿದ್ದಾನೆ ಎಂದು ಹೇಳುತ್ತ ಪರೋಕ್ಷವಾಗಿ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ .
ಆರೋಪಿಯನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಬಹುಜನ ಸಮಾಜ ಪಕ್ಷದ ಕೆ ಟಿ ರಾಧಾಕೃಷ್ಣ ಒತ್ತಾಯಿಸಿದ್ದಾರೆ.
ತನಿಖಾಧಿಕಾರಿ ಬದಲಾವಣೆಗೆ ಆಗ್ರಹ : ಈ ಮಧ್ಯೆ ಶೃಂಗೇರಿಯಲ್ಲಿ ಯುವತಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಸಿದ್ದರಾಮಪ್ಪಅವರನ್ನು ಬದಲಿಸ ಬೇಕೆಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಜಿಲ್ಲಾ ರಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ .
ಗುರುವಾರ, ಫೆಬ್ರವರಿ 4, 2021
ಭಗವಾನ್ ಮೇಲೆ ಹಲ್ಲೆ: ಸದಸ್ಯತ್ವ ಕಿತ್ತು ಹಾಕಲು ಅಮೀನ್ ಮಟ್ಟು ಒತ್ತಾಯ
ಸೈದ್ಧಾಂತಿಕ ವಿರೋಧಿಗಳ ಹತ್ಯೆ, ಅವರ ಮೇಲೆ ಹಲ್ಲೆ,ದೌರ್ಜನ್ಯ, ಮಸಿಬಳಿಯುವ ಹೀನ ಕೃತ್ಯವನ್ನು ಯಾರೇ ನಡೆಸಿದರೂ ಖಂಡನೀಯ . ಇದು ವೈಚಾರಿಕವಾಗಿ ವಿರೋಧಿಸಲಾಗದವರ ಸೈದ್ಧಾಂತಿಕ ದಿವಾಳಿತನ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಿಸಿದ್ದಾರೆ .
ಭಗವಾನ್ ಅವರನ್ನು ಟೀಕಿಸುವವರು ದಯವಿಟ್ಟು ಬಾಬಾಸಾಹೇಬ್ ಅಂಬೇಡ್ಕರ್ ಬರವಣಿಗೆಗಳನ್ನು ಓದಬೇಕು . ಹಿಂದೂ ದೇವರು-ಧರ್ಮ, ರಾಮ-ಕೃಷ್ಣರನ್ನು ಕಟುವಾಗಿ ಬಾಬಾಸಾಹೇಬ್ ಅಂಬೇಡ್ಕರ್ ವಿಶ್ಲೇಷಿಸಿದ್ದಾರೆ ಎನ್ನುವುದನ್ನೂ ನಾವು ಗಮನಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ .ವಕೀಲೆ ಮೀರಾ ರಾಘವೇಂದ್ರ ಮಸಿ ಬಳಿದದ್ದು ಕೆ.ಎಸ್.ಭಗವಾನ್ ಅವರಿಗಲ್ಲ, ಅವರ ವಕೀಲಿ ವೃತ್ತಿಗೆ ಅದಕ್ಕಿಂತಲೂ ಮಿಗಿಲಾಗಿ ನ್ಯಾಯಾಂಗಕ್ಕೆ. ನ್ಯಾಯಾಲಯದ ಆವರಣದಲ್ಲಿ ಕಕ್ಷಿದಾರರ ಮೇಲೆ ಹಲ್ಲೆ ನಡೆಸುವುದು ಕ್ರಿಮಿನಲ್ ಅಪರಾಧ. ಈ ಕೃತ್ಯವನ್ನು ವಕೀಲರೇ ನಡೆಸಿದರೆ ಅದಿನ್ನೂ ಘೋರ ಕ್ರಿಮಿನಲ್ ಅಪರಾಧ ಎಂದು ಕಳವಳ ಹೊರಹಾಕಿದ್ದಾರೆ .
ಕೆ.ಎಸ್. ಭಗವಾನ್ ಅವರು ಮೀರಾ ರಾಘವೇಂದ್ರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈಗ ಚೆಂಡು ಹೈಕೋರ್ಟ್ ಅಂಗಳದಲ್ಲಿದೆ. ಹೈಕೋರ್ಟ್ ಮುಖ್ಯನ್ಯಾಯಾಧೀಶರು ತಕ್ಷಣ ವಕೀಲೆ ಮೀರಾ ರಾಘವೇಂದ್ರ ಅವರ ನೋಂದಣಿಯನ್ನು ರದ್ದುಪಡಿಸಬೇಕು. ವೃತ್ತಿ ಸಂಹಿತೆಯನ್ನು ಉಲ್ಲಂಘಿಸಿರುವ ವಕೀಲೆಯ ಬಾರ್ ಕೌನ್ಸಿಲ್ ಸದಸ್ಯತ್ವವನ್ನು ಕಿತ್ತುಹಾಕಬೇಕು ಎಂದು ಒತ್ತಾಯಿಸಿದ್ದಾರೆ .
ಭಗವಾನ್ ಮುಖಕ್ಕೆ ಮಸಿ : ಸಚಿವ ಲಿಂಬಾವಳಿ ಖಂಡನೆ
ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಇದು ದುರಾದೃಷ್ಟಕರ ಘಟನೆ ಎಂದು ಖಂಡಿಸಿದ್ದಾರೆ .
ತಾತ್ವಿಕ ಬಿನ್ನಾಭಿಪ್ರಾಯ ದೈಹಿಕ ಹಲ್ಲೆ , ಹಿಂಸೆ ರೂಪ ತಾಳಬಾರದು ,ಮಸಿ ಬಳಿಯವುದು ಕನ್ನಡದ ಸಂಸ್ಕೃತಿ ಅಲ್ಲಎಂದು ಹೇಳಿದ್ದಾರೆ.
ಕ್ರಮಕ್ಕೆ ಒತ್ತಡ :ಸಾಹಿತಿ ಭಗವಾನ್ ಮೇಲೆ ಹಲ್ಲೆ ನಡೆಸಿರುವ ವಕೀಲೆ ಮೀರಾ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಅಧಿಕವಾಗಿದೆ .
ನ್ಯಾಯಾಲಯದ ಆವರಣದಲ್ಲೇ ಇಂತಹ ಕೃತ್ಯಕ್ಕೆ ಮುಂದಾಗಿರುವ ಇವರ ಸದಸ್ಯತ್ವವನ್ನು ರದ್ದು ಮಾಡಬೇಕು. ಈ ನಿಟ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯಬೇಕು ಎಂಬ ಒತ್ತಾಯವೂ ಕೇಳಿಬಂದಿದೆ .
ಹಿಂದೂ ಧರ್ಮದ ಅವಹೇಳನ :ಸಾಹಿತಿ ಭಗವಾನ್ ಮುಖಕ್ಕೆ ಮಸಿ
ಬೆಂಗಳೂರು :ಹಿಂದೂ ಧರ್ಮ ಹಾಗೂ ಶ್ರೀರಾಮನ ಬಗ್ಗೆ ಸದಾ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಸಾಹಿತಿ ಪ್ರೊ.ಭಗವಾನ್ ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ಇಂದು ಕೋರ್ಟ್ ಆವರಣದಲ್ಲೇ ಮಸಿ ಬಳಿದಿದ್ದಾರೆ.
ಪ್ರಕರಣ ಒಂದರಲ್ಲಿ ಜಾಮೀನು ಪಡೆಯಲು ಕೋರ್ಟ್ ಗೆ ಆಗಮಿಸಿದ್ದ ಭಗವಾನ್ ಮುಖಕ್ಕೆ ಮೀರಾ ರಾಘವೇಂದ್ರ ಮಸಿ ಬಳಿದು, ಇಷ್ಟು ವಯಸ್ಸಾಗಿದೆ ಸದಾ ದೇವರ ಬಗ್ಗೆ ರಾಮನ ಬಗ್ಗೆ ಮಾತಾಡ್ತಿರ ನಾಚಿಕೆ ಆಗಲ್ವಾ ನಿಮಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಈ ವೇಳೆ ಭಗವಾನ್ ಅರೆಸ್ಟ್ ಮಾಡಿ ಅವರನ್ನ ಅಂತಾರೆ. ಅದಕ್ಕೆ ಪ್ರತಿಕ್ರಿಯಿಸುವ ಮೀರಾ ರಾಘವೇಂದ್ರ ನಾನು ಎಲ್ಲದಕ್ಕೂ ರೆಡಿ, ಜೈಲಿಗೆ ಹೋಗಲೂ ಸಿದ್ಧ ಎಂದು ಹೇಳಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
ಇನ್ನು ಭಗವಾನ್ ರನ್ನು ಗನ್ ಮ್ಯಾನ್ ಹಾಗೂ ಪೊಲೀಸರು ಕೋರ್ಟ್ ಆವರಣದಿಂದ ಕರೆದೊಯ್ದಿದ್ದಾರೆ. ಭಗವಾನ್ ಈಗ ದೂರು ನೀಡಲು ಠಾಣೆಗೆ ತೆರಳಿದ್ದಾರೆ
ಬುಧವಾರ, ಫೆಬ್ರವರಿ 3, 2021
ಶೃಂಗೇರಿ :ಅಪ್ರಾಪ್ತ ಬಾಲಕಿ . ಲೈಂಗಿಕ ದೌರ್ಜನ್ಯ ಪ್ರಕರಣ -ಕಾಂಗ್ರೆಸ್ ಪ್ರತಿಭಟನೆ-ಘಟನೆ ಖಂಡಿಸಿದ ಸಂಸದೆ
ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು .
ಇದೊಂದು ಗಂಭೀರ ಪ್ರಕರಣವಾಗಿದೆ .ಇದರಲ್ಲಿ ಬಿಜೆಪಿ' ಭಜರಂಗದಳ ,ವಿಶ್ವಹಿಂದೂ ಪರಿಷತ್ತಿನ ನಂಟು ಹೊಂದಿರುವ ಅನೇಕ ವ್ಯಕ್ತಿಗಳು ಆರೋಪಿಗಳಾಗಿದ್ದಾರೆ ಎಂದು ಟೀಕಿಸಿದರು .
ರಾಜಕೀಯ ಒತ್ತಡ ತಂದು ಪ್ರಕರಣವನ್ನು ಮೂಲೆಗುಂಪಾಗಿಸುವ ಯತ್ನವೂ ನಡೆದಿದೆ ಎಂದು ಶಂಕಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್, ಮಾಜಿ ಅಧ್ಯಕ್ಷ ವಿಜಯ ಕುಮಾರ್, ಮಹಿಳಾ ಘಟಕದ ರೇಖಾ ಹುಲಿಯಪ್ಪ ,ರಾಷ್ಟ್ರೀಯ ಕಾರ್ಯದರ್ಶಿ ಸಂದೀಪ್ ಇತರರು ನೇತೃತ್ವ ವಹಿಸಿದ್ದರು .
ಈ ಮಧ್ಯೆ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಂಸತ್ ಸದಸ್ಯೆ ಶೋಭಾ ಕರಂದ್ಲಾಜೆ ಘಟನೆ ನಡೆದ ದಿನವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿ ತನಿಖೆಗೆ ಸೂಚಿಸಿದ್ದೇನೆ ಎಂದಿದ್ದಾರೆ .
ಸೂಕ್ಷ್ಮ ಪ್ರಕರಣವಾಗಿದ್ದು ಮಾಧ್ಯಮಗಳಲ್ಲಿ ಹೇಳಿಕೆ ನೀಡುವುದು ಸರಿ
ಯಲ್ಲ ಎಂದು ಭಾವಿಸಿದ್ದು . ಆರೋಪಿ ಚಿಕ್ಕಮ್ಮನ ಬಗ್ಗೆ ವಿಶೇಷ ತನಿಖೆ ನಡೆಯಬೇಕಾದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ .
ಮಂಗಳವಾರ, ಫೆಬ್ರವರಿ 2, 2021
ದೇವಸ್ಥಾನದ ನೋಂದಣಿ ಕಡ್ಡಾಯ: ಹೆಚ್.ಎಲ್ ನಾಗರಾಜ್
ಚಿಕ್ಕಮಗಳೂರು,ಫೆ.೦೨: ದಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳನ್ನು ಹೊರತುಪಡಿಸಿ ಖಾಸಗಿ ಹಿಂದೂ ದೇವಸ್ಥಾನಗಳು ಒಂದು ತಿಂಗಳ ಒಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು, ನೋಂದಣಿ ಮಾಡಿಕೊಳ್ಳಲು ನಿರಾಕರಿಸಿದ್ದಲ್ಲಿ ಅಂತಹ ದೇವಸ್ಥಾನದ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ತಿಳಿಸಿದರು.
ಧಾರ್ಮಿಕ ದತ್ತಿ ಸಮಿತಿ ೨೦೧೧ರ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಧಾರ್ಮಿಕ ದತ್ತಿ ಆಯುಕ್ತರ ಸುತ್ತೋಲೆ ೨೦೧೫ ರಂತೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ೨೦೧೧ ರನ್ನೊಳಗೊಂಡಂತೆ ಕಲಂ-೫೩ ರ ಅಡಿಯಲ್ಲಿ ಆಯಾಯ ಸಹಾಯಕ ಆಯುಕ್ತರು ನೋಂದಣಿ ಮಾಡುವುದು ಕಡ್ಡಾಯವಾಗಿರುತ್ತದೆ,ಪತ್ರಕರ್ತರ ಬಂಧನ ಖಂಡಿಸಿ ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ
ನಾಳೆ ( ಜ೩) ಸಂಜೆ 5 ಗಂಟೆಗೆ ಬೆಂಗಳೂರಿನ ಅಲ್ಯುಮಿನಿಯಂ ಹಾಲ್ ಬಳಿ ಪ್ರತಿಭಟನೆ ನಡೆಯಲಿದ್ದು , ಪತ್ರಕರ್ತ ಮಿತ್ರರು ,ಪ್ರಗತಿಪರ ಚಿಂತಕರು , ಹೋರಾಟ ಬೆಂಬಲಿಸುವ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ
ಸೋಮವಾರ, ಫೆಬ್ರವರಿ 1, 2021
ಆರೋಪಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಲ್ಲಬೇಕು :ಮೋಹಿನಿ ಸಿದ್ದೇಗೌಡ ಆಕ್ರೋಶ
ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದಿರುವ ಲೈಂಗಿಕ ಪ್ರಕರಣದ ಆರೋಪಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಲ್ಲಬೇಕು ಎಂದು ಸಾಂತ್ವನ ಕೇಂದ್ರದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ ಆಕ್ರೋಶ ಹೊರಹಾಕಿದ್ದಾರೆ .
ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ಪ್ರಕರಣದ ಬಗ್ಗೆ ತೀವ್ರ ಬೇಸರ ಹೊರಹಾಕಿದ್ದಾರೆ .ಈ ಕೃತ್ಯಕ್ಕೆ ಮುಖ್ಯ ಕಾರಣಕರ್ತರಾಗಿರುವ ಬಾಲಕಿಯ ಚಿಕ್ಕಮ್ಮ ನ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಮಹಿಳೆಯರಿಗೆ ರಕ್ಷಣೆ ಇಲ್ಲದ ಸ್ಥಿತಿ ಇನ್ನೂ ಇದೆ ಎಂದು ವಿಷಾದಿಸಿದ ಮೋಹಿನಿ ಸಿದ್ದೇಗೌಡ ,ಕೋರ್ಟು ,ಕಚೇರಿ ,ವಕೀಲರು ಎಂದು ಆರೋಪಿಗಳು ಹೊರಬರುವ ಸಾಧ್ಯತೆಗಳು ಇದೆ ಎಂದು ಹೇಳಿದರು .
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ :ಪೊಲೀಸ್ ಅಧಿಕಾರಿ ಹೇಳಿದ್ದೇನು ?
ಚಿಕ್ಕಮಗಳೂರು: ಇತ್ತೀಚೆಗೆ ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಕುರಿತು ಹೆಚ್ಚುವರಿ ಪೊಲೀಸ್ ಅಧಿಕಾರಿ ಶ್ರುತಿ ಹೇಳಿದ್ದು ಹೀಗೆ .
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 7 ಜನ ಅಂದರ್
ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸರು ಈವರೆಗೆ 7 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ .
ಶೃಂಗೇರಿಯಲ್ಲಿ ತನ್ನ ಚಿಕ್ಕಮ್ಮ ಗೀತಾರವರ ಮನೆಯಲ್ಲಿ ವಿದ್ಯಾಭ್ಯಾಸಕ್ಕೆ ಇದ್ದ ಬಾಲಕಿ ಕ್ರಷರ್ ಕೆಲಸಕ್ಕೆ ಹೋಗುತ್ತಿದ್ದು ಅಲ್ಲಿ ನಿಶ್ಚಿತ ಬಸ್ಸಿನ ಚಾಲಕ ಯೋಗೀಶ್ ಪರಿಚಯವಾಗಿದೆ ಎಂದು ಹೆಚ್ಚುವರಿ ರಕ್ಷಣಾಧಿಕಾರಿ ಶ್ರುತಿ ತಿಳಿಸಿದ್ದಾರೆ .
ಬಳಿಕ ಈಕೆಯನ್ನು ಮುಖ್ಯ ಆರೋಪಿ ಅಭಿಗೆ ಪರಿಚಯ ಮಾಡಿಕೊಟ್ಟಿದ್ದು ಆತ ತನ್ನ ಸ್ನೇಹಿತರಿಗೂ ಈಕೆಯ ಪರಿಚಯ ಮಾಡಿಕೊಟ್ಟಿದ್ದಾನೆ .
ಆಕೆಯನ್ನು ಚೆನ್ನಾಗಿ ಬಳಸಿಕೊಂಡ ಅಭಿ ಆಕೆಯ ಭಾವಚಿತ್ರ ತೆಗೆದು ವಿಡಿಯೋ ದೃಶ್ಯಗಳನ್ನು ಮಾಡಿ ಬ್ಲಾಕ್ಮೇಲ್ ಮಾಡಿದ್ದಾನೆ
ಎಂದು ತಿಳಿಸಿದ್ದಾರೆ .
ಕಳೆದ ತಿಂಗಳಿ ೫ ತಿಂಗಳಿನಿಂದ ಈ ಪ್ರಕರಣ ನಡೆದಿದ್ದು , ಆರಂಭದಲ್ಲಿ ಪೊಲೀಸರಿಗೆ ದೂರು ನೀಡಲು ಹೆದರಿದ ಯುವತಿ ಕೊನೆಗೂ ಶಿಶು ಅಭಿವೃದ್ಧಿ ಅಧಿಕಾರಿಗಳಲ್ಲಿ ಅಳಲನ್ನು ತೋಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ನೀಡಿದ ದೂರು ಆಧರಿಸಿ ೧೩ ಜನರ ಮೇಲೆ ಪ್ರಕರಣವನ್ನು ದಾಖಲಿಸಿದ್ದು ಈವರೆಗೆ ೧೩ ಜನರನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ .
ಅಭಿಷೇಕ್, ಗಿರೀಶ್, ಮಣಿಕಂಠ' ಅಶ್ವತ್ಥ್ ರಾಜೇಶ್, ಸಂತೋಷ್ ಮತ್ತು ಗೀತಾರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ .
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ವಾಂತನ ಕೇಂದ್ರದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ ಇದೊಂದು ಗಂಭೀರ ಪ್ರಕರಣವಾಗಿದ್ದು ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಯಾವುದೇ ಕಾರಣಕ್ಕೆ ಅವರು ಹೊರ ಬರಬಾರದು ಎಂದು ಒತ್ತಾಯಿಸಿದ್ದಾರೆ .
ಪ್ರಕರಣದಲ್ಲಿ ಭಜರಂಗದಳದ ಮುಖಂಡರ ಹೆಸರುಗಳು ಮುಖ್ಯವಾಗಿ ಕೇಳಿಬರುತ್ತಿದ್ದು , ಕಾಂಗ್ರೆಸ್ ಪಕ್ಷವು ಈ ನಿಟ್ಟಿನಲ್ಲಿ ತನಿಖೆಗೆ ಒತ್ತಾಯಿಸಿದೆ . ಶೃಂಗೇರಿ ಶಾಸಕ ಟಿ. ಡಿ .ರಾಜೇಗೌಡ ಪ್ರಕರಣದ ತನಿಖೆಗೆ ಆಗ್ರಹಿಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ .
ಉಳಿದ ಆರೋಪಿಗಳ ಬಂಧನಕ್ಕೆ 2ತಂಡಗಳನ್ನು ರಚಿಸಲಾಗಿದೆ .
ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ
ಚಿಕ್ಕಮಗಳೂರು :ಇಂದಿನಿಂದ ಮೂರು ದಿನ ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ ಬೋಳರಾಮೇಶ್ವರ ದೇವಾಲಯದ ...
-
ಚಿಕ್ಕಮಗಳೂರು : ಇಂದು ಸಂಜೆ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಬ್ಬರು ಮೃತಪಟ್ಟು ಹಲವರಿಗೆ ಗಾಯಗಳುಆಗಿವೆ. ಕಳಸ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ನಿಯ...
-
ಚಿಕ್ಕಮಗಳೂರು: ಚಿನ್ನದ ವರ್ತಕನನ್ನು ಬೆದರಿಸಿ 10 ಲಕ್ಷ ರೂ. ನೀಡುವಂತೆ ಒತ್ತಾಯಿಸಿ ದರೋಡೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅಜ್ಜಂಪುರ ಠಾಣಾಧಿಕಾರಿ ಸೇರಿದಂತೆ ನಾಲ್ವರ...
-
ಚಿಕ್ಕಮಗಳೂರು :ಕೋಟೆ ಕೆರೆಯಿಂದ ಹಿರೇಮಗಳೂರು ಸಂಪರ್ಕಿಸುವ ಹೆದ್ದಾರಿಯಲ್ಲಿ ಸೂಕ್ತ ವಿದ್ಯುತ್ ವ್ಯವಸ್ಥೆ ಇಲ್ಲದೆ ಅನೇಕ ಅಪಘಾತಗಳು ಪದೇ ಪದೇ ಸಂಭವಿಸುತ್ತಿವೆ .ವಿದ್ಯುತ...
-
ಕೊಪ್ಪ :ಇಲ್ಲಿನ ಭೂ ದಾಖಲೆಗಳ ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಎಂದು ಆರೋಪಿಸಿ ನೊಂದವರು ಪ್ರತಿಭಟನೆ ನಡೆಸಿದ್ದಾರೆ. ಸಹಾಯಕ ನಿರ್ದೇಶಕರ ಕ...
-
ಶೃಂಗೇರಿ: ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡರೂ ಆದ ಶಿವಶಂಕರ್ (ಶೃಂಗೇರಿ ಶಿವಣ್ಣ) ಸುಳ್ಳು ಜಾತಿ ಪ್ರಮಾಣ ಪತ್ರವನ್ನು, ಜಾತಿಯ ಕುರಿತಾದ ಸುಳ್ಳು ...
-
ಚಿಕ್ಕಮಗಳೂರು :ರಾಜ್ಯ ಸರ್ಕಾರ ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಸಂಘ ಸಂಸ್ಥೆಗಳನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು ,ಜಿಲ್ಲೆಯ ಚಂದ್ರಶೇಖರ ನಾರಾ...
-
ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಕೃಷಿಕರ ಕೈಹಿಡಿಯಬೇಕಾದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಕರ್ನಾಟಕದಲ್ಲಿ ಸಂಪೂರ್ಣ ಫೇಲ್ ಆ...
-
ಚಿಕ್ಕಮಗಳೂರು ಶೃಂಗೇರಿ ಕ್ಷೇತ್ರ ಶಾಸಕ ಟಿಡಿ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ ದೂರು ಪ್ರಕರಣ ಈಗ ಹೊಸ ಆಯಾಮ ಪಡೆಯುತ್ತಿದೆ. ದೂರುದಾರ ಡಿ ಎನ್ ಜೀವರಾಜ್ ಗೆ ಚ...
-
ಚಿಕ್ಕಮಗಳೂರು :ಇಂದಿನಿಂದ ಮೂರು ದಿನ ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ ಬೋಳರಾಮೇಶ್ವರ ದೇವಾಲಯದ ...
-
ಚಿಕ್ಕಮಗಳೂರು :ರಸ್ತೆ ಅವ್ಯವಸ್ಥೆ ಬಗ್ಗೆ ವ್ಯಂಗ್ಯ ಚಿತ್ರಗಳ ಮೂಲಕ ಕಳಸ ಪಟ್ಟಣದ ನಾಗರಿಕರು ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ರಸ್ತೆ ಅವ್ಯವಸ್ಥೆ ಬಗ...

















































