ಗುರುವಾರ, ಫೆಬ್ರವರಿ 4, 2021

ಭಗವಾನ್ ಮೇಲೆ ಹಲ್ಲೆ: ಸದಸ್ಯತ್ವ ಕಿತ್ತು ಹಾಕಲು ಅಮೀನ್ ಮಟ್ಟು ಒತ್ತಾಯ

 


ಸೈದ್ಧಾಂತಿಕ ವಿರೋಧಿಗಳ ಹತ್ಯೆ, ಅವರ ಮೇಲೆ ಹಲ್ಲೆ,ದೌರ್ಜನ್ಯ, ಮಸಿಬಳಿಯುವ ಹೀನ ಕೃತ್ಯವನ್ನು ಯಾರೇ ನಡೆಸಿದರೂ ಖಂಡನೀಯ . ಇದು ವೈಚಾರಿಕವಾಗಿ ವಿರೋಧಿಸಲಾಗದವರ ಸೈದ್ಧಾಂತಿಕ ದಿವಾಳಿತನ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಿಸಿದ್ದಾರೆ .     

ಭಗವಾನ್ ಅವರನ್ನು ಟೀಕಿಸುವವರು ದಯವಿಟ್ಟು ಬಾಬಾಸಾಹೇಬ್ ಅಂಬೇಡ್ಕರ್  ಬರವಣಿಗೆಗಳನ್ನು ಓದಬೇಕು .  ಹಿಂದೂ ದೇವರು-ಧರ್ಮ, ರಾಮ-ಕೃಷ್ಣರನ್ನು  ಕಟುವಾಗಿ ಬಾಬಾಸಾಹೇಬ್ ಅಂಬೇಡ್ಕರ್ ವಿಶ್ಲೇಷಿಸಿದ್ದಾರೆ ಎನ್ನುವುದನ್ನೂ ನಾವು ಗಮನಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ .ವಕೀಲೆ ಮೀರಾ ರಾಘವೇಂದ್ರ  ಮಸಿ ಬಳಿದದ್ದು ಕೆ.ಎಸ್.ಭಗವಾನ್ ಅವರಿಗಲ್ಲ, ಅವರ ವಕೀಲಿ ವೃತ್ತಿಗೆ ಅದಕ್ಕಿಂತಲೂ ಮಿಗಿಲಾಗಿ ನ್ಯಾಯಾಂಗಕ್ಕೆ. ನ್ಯಾಯಾಲಯದ ಆವರಣದಲ್ಲಿ ಕಕ್ಷಿದಾರರ ಮೇಲೆ ಹಲ್ಲೆ ನಡೆಸುವುದು ಕ್ರಿಮಿನಲ್ ಅಪರಾಧ. ಈ ಕೃತ್ಯವನ್ನು ವಕೀಲರೇ ನಡೆಸಿದರೆ ಅದಿನ್ನೂ ಘೋರ ಕ್ರಿಮಿನಲ್ ಅಪರಾಧ  ಎಂದು ಕಳವಳ ಹೊರಹಾಕಿದ್ದಾರೆ .

ಕೆ.ಎಸ್. ಭಗವಾನ್ ಅವರು ಮೀರಾ ರಾಘವೇಂದ್ರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈಗ ಚೆಂಡು ಹೈಕೋರ್ಟ್ ಅಂಗಳದಲ್ಲಿದೆ. ಹೈಕೋರ್ಟ್ ಮುಖ್ಯನ್ಯಾಯಾಧೀಶರು ತಕ್ಷಣ ವಕೀಲೆ ಮೀರಾ ರಾಘವೇಂದ್ರ ಅವರ ನೋಂದಣಿಯನ್ನು ರದ್ದುಪಡಿಸಬೇಕು. ವೃತ್ತಿ ಸಂಹಿತೆಯನ್ನು ಉಲ್ಲಂಘಿಸಿರುವ ವಕೀಲೆಯ ಬಾರ್ ಕೌನ್ಸಿಲ್ ಸದಸ್ಯತ್ವವನ್ನು ಕಿತ್ತುಹಾಕಬೇಕು ಎಂದು ಒತ್ತಾಯಿಸಿದ್ದಾರೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...