ಚಿಕ್ಕಮಗಳೂರು :ತಾಲ್ಲೂಕಿನ ಲಕ್ಷೀಪುರ ಕೆರೆಯ ಬಳಿ ನಮ್ಮೂರ ಕೆರೆ ಹಬ್ಬ ಹಮ್ಮಿಕೊಂಡು ಸ್ಥಳಿಯರಿಗೆ ಮನರಂಜನೆ ಜೊತೆಗೆ ಸಂಜೆಯ ವೇಳೆ ಸರ್ಕಾರಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಕಂದಾಯ ಇಲಾಖೆಯ ಉಪ ವಿಭಾಗಧಿಕಾರಿ ಡಾ|| ಹೆಚ್.ಎಲ್ ನಾಗರಾಜ್ ಹಾಗೂ ತಾಲೂಕು ತಹಶಿಲ್ದಾರ್ ಡಾ|| ಕೆ.ಜೆ ಕಾಂತರಾಜ್ ನೇತೃತ್ವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ರಾತ್ರಿ ಹತ್ತು ಗಂಟೆಯವರೆಗೆ ಕಾರ್ಯನಿರ್ವಹಿಸಿದರು .
ಕೆರೆ ಅಂಗಳದಲ್ಲಿ ಸಾಂಸ್ಕೃತಿಕ ಕಲರವ ಸಮೀಪದ ಗ್ರಾಮಸ್ಥರನ್ನು ಸೂಜಿ ಗಲ್ಲಿನಂತೆ ಸೆಳೆಯುವಂತಿತ್ತು. ವಿಷನ್ ಚಿಕ್ಕಮಗಳೂರು ಮತ್ತು ಲಕ್ಷಿಪುರ ಕೆರೆ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಕೆರೆಯ ಪಕ್ಕದಲ್ಲೇ ವೇದಿಕೆ ನಿರ್ಮಿಸಿ , ಫೈರ್ ಕ್ಯಾಂಪ್ ಆಯೋಜಿಲಾಗಿತ್ತು.
ಸೂಫಿ ಸಂತ ನಾದ ಮಣಿನಾಲ್ಕೂರು ನಡೆಸಿಕೊಟ್ಟ ತತ್ವ ಪದಗಳು , ಸಾಣೆ ಹಳ್ಳಿ ರಂಗ ಶಾಲೆಯ ರಂಗ ಕರ್ಮಿ ಆರ್. ಜಗದೀಶ್ ಜಾನಪದ ಗಾಯನ ನಡೆಸಿಕೊಟ್ಟರು. ಎ.ಎನ್ ಮಹೇಶ್, ಬೆಳವಾಡಿ ರವೀಂದ್ರ, ರೇಖಾ ಹುಲಿಯಪ್ಪಗೌಡ,ರವಿ ಪ್ರದೀಪ್,ಪ್ರಕಾಶ್ ಉಪಸ್ಥಿತರಿದ್ದರು.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ