ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಕೃಷಿಕರ ಕೈಹಿಡಿಯಬೇಕಾದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಕರ್ನಾಟಕದಲ್ಲಿ ಸಂಪೂರ್ಣ ಫೇಲ್ ಆಗಿದೆ. ಈಗ ಆಡಳಿತಾರೂಢ ಚುನಾಯಿತ ಪ್ರತಿನಿಧಿಗಳೂ ಬೆಳೆ ವಿಮೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಕಷ್ಟಕಾಲದಲ್ಲಿ ರೈತರ ನೆರವಿಗೆ ಬರಬೇಕಿದ್ದ ಬೆಳೆ ವಿಮೆ ಯೋಜನೆಯು ರಾಜ್ಯದಲ್ಲಿ ಅನ್ನದಾತರ ವಿಶ್ವಾಸವನ್ನು ಕಳೆದುಕೊಂಡು ವರ್ಷಗಳೇ ಸಂದಿವೆ. ಈಗ ಆಡಳಿತಾರೂಢ ಚುನಾಯಿತ ಪ್ರತಿನಿಧಿಗಳೂ ವಿಮೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಕೃಷಿಕರ ಕೈಹಿಡಿಯಬೇಕಾದ 'ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ' ಸಂಪೂರ್ಣ ಫೇಲ್ ಆಗಿದೆ.ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಅತಿವೃಷ್ಟಿ, ನೆರೆ ಹಾವಳಿಯಿಂದ ವ್ಯಾಪಕ ಬೆಳೆ ನಷ್ಟವಾಗಿದ್ದು, 2019-20ನೇ ಸಾಲಿನಿಂದ ಈವರೆಗೆ ಒಟ್ಟು 53.94 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದೆ. ಇಂತಹ ಸಂಕಷ್ಟ ಕಾಲದಲ್ಲಿ ಬೆಳೆ ವಿಮೆ ಆಸರೆಯಾಗಬೇಕಿತ್ತು. ಆದರೆ, ರೈತರು ತಮ್ಮ ಬೆವರು ಸುರಿಸಿ ಕಟ್ಟಿದ ಪ್ರೀಮಿಯಂ ಕೂಡ ಕೈಗೆ ಸಿಗುತ್ತಿಲ್ಲ..!ಬೆಳೆ ಹಾಳಾದ ಸಂದರ್ಭದಲ್ಲಿ ನಿಗದಿತ ಪರಿಹಾರದ (ಸಮ್ ಅಶ್ಯೂರ್ಡ್) ಬದಲಿಗೆ ಕಟ್ಟಿದ ಪ್ರೀಮಿಯಂ ಕೂಡ ರೈತರಿಗೆ ಸಿಗುತ್ತಿಲ್ಲ. ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟಕ್ಕೆ ಪರಿಹಾರ ಪಾವತಿಸಬೇಕಿದೆ. ಆದರೆ, ಆಣೆವಾರು ಮಾಡುವಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ವಿಮೆ ಕಂಪೆನಿಗಳ ಪರವಾಗಿ ಕೆಲಸ ಮಾಡುತ್ತಿರುವುದು, ವಿಮಾ ಷರತ್ತುಗಳಲ್ಲಿ ಲೋಪವಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ರೈತರು ಸಂತ್ರಸ್ತರಾಗಿದ್ದಾರೆ. ರೈತರು ತಮ್ಮ ಈ ಎಲ್ಲ ಕಷ್ಟವನ್ನು ಹೇಳಿಕೊಳ್ಳಲು ವಿಮೆ ಕಂಪೆನಿಗಳ ಟೋಲ್ ಫ್ರೀ ಸಂಖ್ಯೆಗಳೇ ಕೆಲಸ ಮಾಡುತ್ತಿಲ್ಲ.*ಸಾಲದಲ್ಲೇ ಕಂತು ಕಡಿತ:*ಬ್ಯಾಂಕ್, ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಮಂಜೂರಾತಿ ವೇಳೆ ವಿಮೆ ಕಂತನ್ನು ಕಡಿತ ಮಾಡಿಕೊಂಡೇ ರೈತರಿಗೆ ಸಾಲದ ಮೊತ್ತ ನೀಡಲಾಗುತ್ತದೆ. ಕಡ್ಡಾಯ ವ್ಯವಸ್ಥೆಯಂತಾಗಿರುವ ಈ ವಿಮೆ ಕಂತು ಬಹುತೇಕ ವಿಮಾ ಕಂಪೆನಿಗಳ ಪಾಲು ಎಂಬಂತಾಗಿದೆ. ಬೆಳೆ ಸಾಲ ಪಡೆಯುವ ರೈತರ ಹೊರತಾಗಿ, ಉಳಿದ ಬಹುತೇಕ ರೈತರು ವಿಮೆ ಯೋಜನೆ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ.ಪರಿಣಾಮ ರಾಜ್ಯದಲ್ಲಿ 2019ರಿಂದ ಈವರೆಗೆ ಒಟ್ಟಾರೆ 38,31,749 ರೈತರಿಗೆ ಸೇರಿದ ಒಟ್ಟು 53,94,575 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದೆ. ಈ ಎಲ್ಲ ರೈತರೂ ಬೆಳೆ ವಿಮೆಯನ್ನೇ ಮಾಡಿಸಿರಲಿಲ್ಲ. ಬೆಳೆ ವಿಮೆ ಕೈಹಿಡಿಯುತ್ತದೆ ಎಂಬ ಭರವಸೆಯನ್ನೇ ಈ ರೈತರು ಕಳೆದುಕೊಂಡಿದ್ದಾರೆ.. ಶಬರೀಶ್ ಸದಸ್ಯರು ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಶೃಂಗೇರಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ