ಚಿಕ್ಕಮಗಳೂರು :ಕೋಟೆ ಕೆರೆಯಿಂದ ಹಿರೇಮಗಳೂರು ಸಂಪರ್ಕಿಸುವ ಹೆದ್ದಾರಿಯಲ್ಲಿ ಸೂಕ್ತ ವಿದ್ಯುತ್ ವ್ಯವಸ್ಥೆ ಇಲ್ಲದೆ ಅನೇಕ ಅಪಘಾತಗಳು ಪದೇ ಪದೇ ಸಂಭವಿಸುತ್ತಿವೆ .ವಿದ್ಯುತ್ ವ್ಯವಸ್ಥೆ ಇಲ್ಲದೆ ಕತ್ತಲು ಆವರಿಸಿ ,ಡಿವೈಡರ್ ಗಳು ಕಾಣದೆ ಅನೇಕ ವಾಹನಗಳು ಅಪಘಾತಕ್ಕೆ ಒಳಗಾಗಿವೆ .
ಇಂದು ಅಂತಹದ್ದೇ ಘಟನೆಯೊಂದು ನಡೆದಿದೆ.ವೇಗವಾಗಿ ಬಂದ ಕಾರೊಂದು ,ಡಿವೈಡರ್ ಗೆ ಅಪ್ಪಳಿಸಿ ಎದುರಿನಿಂದ ಹೋಗುತ್ತಿದ್ದ ಆಟೋ ರಿಕ್ಷಾವನ್ನು ಸೀಳಿಕೊಂಡು ಶನಿ ದೇವಸ್ಥಾನದ ಬಳಿ ಹೋಗಿ ನುಜ್ಜುಗುಜ್ಜಾಗಿ ನಿಂತಿದೆ .
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ .ಈ ಹಿಂದೆ ನಡೆದ ಅಪಘಾತದಲ್ಲಿ ಇಬ್ಭರು ಸಾವಪ್ಪಿದ್ದು , ಇಂದು ಪಾದಚಾರಿಯೊಬ್ಬರು ಜಸ್ಟ್ ಮಿಸ್ ಆಗಿದ್ದಾರೆ .
ಈ ರಸ್ತೆಗೆ ಅಗತ್ಯ ವಿದ್ಯುತ್ ದೀಪ ಸೌಲಭ್ಯ ಕಲ್ಪಿಸುವಂತೆ ಅನೇಕ ಬಾರಿ ಒತ್ತಾಯಿಸಿದ್ದರೂ ಸಂಬಂಧಪಟ್ಟ ಅಧಿಕಾರಿ ಜನಪ್ರತಿನಿಧಿಗಳು ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ .
ನಗರಸಭೆ ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜನಪ್ರತಿನಿಧಿಗಳು ಪರಸ್ಪರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದು ಇನ್ನಾದರೂ ಸಮಸ್ಯೆ ಬಗೆಹರಿಸಿ ಮುಂದೆ ಆಗುವ ಅನಾಹುತಗಳಿಗೆ ಕಡಿವಾಣ ಹಾಕಲಿ ಎಂದು ಒತ್ತಾಯಿಸಿದ್ದಾರೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ