ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸರು ಈವರೆಗೆ 7 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ .
ಶೃಂಗೇರಿಯಲ್ಲಿ ತನ್ನ ಚಿಕ್ಕಮ್ಮ ಗೀತಾರವರ ಮನೆಯಲ್ಲಿ ವಿದ್ಯಾಭ್ಯಾಸಕ್ಕೆ ಇದ್ದ ಬಾಲಕಿ ಕ್ರಷರ್ ಕೆಲಸಕ್ಕೆ ಹೋಗುತ್ತಿದ್ದು ಅಲ್ಲಿ ನಿಶ್ಚಿತ ಬಸ್ಸಿನ ಚಾಲಕ ಯೋಗೀಶ್ ಪರಿಚಯವಾಗಿದೆ ಎಂದು ಹೆಚ್ಚುವರಿ ರಕ್ಷಣಾಧಿಕಾರಿ ಶ್ರುತಿ ತಿಳಿಸಿದ್ದಾರೆ .
ಬಳಿಕ ಈಕೆಯನ್ನು ಮುಖ್ಯ ಆರೋಪಿ ಅಭಿಗೆ ಪರಿಚಯ ಮಾಡಿಕೊಟ್ಟಿದ್ದು ಆತ ತನ್ನ ಸ್ನೇಹಿತರಿಗೂ ಈಕೆಯ ಪರಿಚಯ ಮಾಡಿಕೊಟ್ಟಿದ್ದಾನೆ .
ಆಕೆಯನ್ನು ಚೆನ್ನಾಗಿ ಬಳಸಿಕೊಂಡ ಅಭಿ ಆಕೆಯ ಭಾವಚಿತ್ರ ತೆಗೆದು ವಿಡಿಯೋ ದೃಶ್ಯಗಳನ್ನು ಮಾಡಿ ಬ್ಲಾಕ್ಮೇಲ್ ಮಾಡಿದ್ದಾನೆ
ಎಂದು ತಿಳಿಸಿದ್ದಾರೆ .
ಕಳೆದ ತಿಂಗಳಿ ೫ ತಿಂಗಳಿನಿಂದ ಈ ಪ್ರಕರಣ ನಡೆದಿದ್ದು , ಆರಂಭದಲ್ಲಿ ಪೊಲೀಸರಿಗೆ ದೂರು ನೀಡಲು ಹೆದರಿದ ಯುವತಿ ಕೊನೆಗೂ ಶಿಶು ಅಭಿವೃದ್ಧಿ ಅಧಿಕಾರಿಗಳಲ್ಲಿ ಅಳಲನ್ನು ತೋಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ನೀಡಿದ ದೂರು ಆಧರಿಸಿ ೧೩ ಜನರ ಮೇಲೆ ಪ್ರಕರಣವನ್ನು ದಾಖಲಿಸಿದ್ದು ಈವರೆಗೆ ೧೩ ಜನರನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ .
ಅಭಿಷೇಕ್, ಗಿರೀಶ್, ಮಣಿಕಂಠ' ಅಶ್ವತ್ಥ್ ರಾಜೇಶ್, ಸಂತೋಷ್ ಮತ್ತು ಗೀತಾರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ .
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ವಾಂತನ ಕೇಂದ್ರದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ ಇದೊಂದು ಗಂಭೀರ ಪ್ರಕರಣವಾಗಿದ್ದು ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಯಾವುದೇ ಕಾರಣಕ್ಕೆ ಅವರು ಹೊರ ಬರಬಾರದು ಎಂದು ಒತ್ತಾಯಿಸಿದ್ದಾರೆ .
ಪ್ರಕರಣದಲ್ಲಿ ಭಜರಂಗದಳದ ಮುಖಂಡರ ಹೆಸರುಗಳು ಮುಖ್ಯವಾಗಿ ಕೇಳಿಬರುತ್ತಿದ್ದು , ಕಾಂಗ್ರೆಸ್ ಪಕ್ಷವು ಈ ನಿಟ್ಟಿನಲ್ಲಿ ತನಿಖೆಗೆ ಒತ್ತಾಯಿಸಿದೆ . ಶೃಂಗೇರಿ ಶಾಸಕ ಟಿ. ಡಿ .ರಾಜೇಗೌಡ ಪ್ರಕರಣದ ತನಿಖೆಗೆ ಆಗ್ರಹಿಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ .
ಉಳಿದ ಆರೋಪಿಗಳ ಬಂಧನಕ್ಕೆ 2ತಂಡಗಳನ್ನು ರಚಿಸಲಾಗಿದೆ .


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ