"ರಾಮಮಂದಿರಕ್ಕಾಗಿ ಹಣ ಕೊಡದವರ ಮನೆಗಳನ್ನು ಗುರುತು ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಇದು ಹಿಟ್ಲರ್ ಆಡಳಿತ ನೆನಪಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ .
ಶಿವಮೊಗ್ಗದಲ್ಲಿ ಮಾತನಾಡಿದ ಅವರು ಹಿಟ್ಲರ್ ಕಾಲದಲ್ಲಿ ನಾಜಿ, ಮತ್ತು ಜ್ಯೂ ಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ಆ ದಿನಗಳಲ್ಲೂ ಇದೇ ರೀತಿ ಮನೆಗಳಿಗೆ ಗುರುತು ಹಾಕಲಾಗುತ್ತಿತ್ತು ಇದು ಎಲ್ಲಿಗೆ ಹೋಗುತ್ತೆ ? ಯಾತಕ್ಕೆ ಮನೆಗಳನ್ನು ಗುರುತು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ ?
ಆರ್ ಎಸ್ ಎಸ್ ಹುಟ್ಟಿದ್ದು ಜರ್ಮನಿಯಲ್ಲಿ. ನಾಜಿ ಹುಟ್ಟಿದ ಕಾಲದಲ್ಲೇ ಎಂದು ಚರಿತ್ರಾಕಾರರು ಹೇಳುತ್ತಾರೆ. ಆ ನೀತಿಗಳನ್ನೆ ಮುಂದುವರೆಸಿದರೆ ಮುಂದೇನಾಗುತ್ತದೆ ಎನ್ನುವ ಭೀತಿ ಆವರಿಸಿದೆ ಎಂದು ಕಳವಳ ಹೊರಹಾಕಿದ್ದಾರೆ .
ದೇಶದಲ್ಲಿ ಮಾತಾಡುವ ಮೂಲಭೂತ ಹಕ್ಕನ್ನೆ ಕಸಿಯುತ್ತಿದ್ದಾರೆ.ಸ್ವತಂತ್ರವಾಗಿ ಯಾರೂ ಭಾವನೆಗಳನ್ನೆ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅಘೋಷಿತ ತುರ್ತು ಪರಿಸ್ಥಿತಿ ಇದೆ ವಾತಾವರಣ ನೋಡಿದಾಗ ಮುಂದೆ ದೇಶದಲ್ಲಿ ಏನು ಬೇಕಾದರೂ ಆಗಬಹುದು ಎಂದಿದ್ದಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ