ಚಿಕ್ಕಮಗಳೂರು :ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಮನೆಯೊಂದಕ್ಕೆ ನುಗ್ಗಿದ ಇಬ್ಬರು ಹಾಡುಹಗಲೇ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ .
ಕಲ್ಯಾಣ ನಗರದ ವಾಸಿ ಚಂದ್ರೇಗೌಡ ಮನೆಯಲ್ಲಿದ್ದ ಸಮಯದಲ್ಲಿ ಹಿಂದಿನಿಂದ ಬಂದ ಇಬ್ಬರು ಬಾಯಿಗೆ ಬಟ್ಟೆಯನ್ನು ಕಟ್ಟಿ ,ಬೆದರಿಸಿ ಚಿನ್ನ ಹಾಗೂ ನಗದನ್ನು ಅಪಹರಿಸಿದ್ದಾರೆ .
ಆ ಸಂದರ್ಭದಲ್ಲಿ ಚಂದ್ರೇಗೌಡರ ಮಗ ಮನೆಗೆ ಬಂದು ಬೆಲ್ಲನ್ನು ಮಾಡಿದ್ದು, ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡು ಕೂಗಿಕೊಂಡಾಗ ಕಳ್ಳರು ಪರಾರಿಯಾಗಲು ಯತ್ನಿಸಿದ್ದಾರೆ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ