ಚಿಕ್ಕಮಗಳೂರು :ಜಿಲ್ಲೆಯ ಕಡೂರು ತಾಲ್ಲೂಕು ಕಚೇರಿಯಲ್ಲಿ ನಡೆದಿರುವ ಭೂ ಅಕ್ರಮ ಮಂಜೂರಾತಿ ಹಗರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಕೆ .ಎನ್ ರಮೇಶ್ ಆದೇಶ ಹೊರಡಿಸಿದ್ದಾರೆ .
ಕಡೂರು ತಾಲ್ಲೂಕು ಕಚೇರಿಯ ತಹಸೀಲ್ದಾರ್ ವರ್ಗಾವಣೆಗೊಂಡಿದ್ದರು ಅವರ ಹೆಸರಿನಲ್ಲಿ ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ ಭೂಮಿ ಮಂಜೂರು ಮಾಡಿದ 64 ಪ್ರಕರಣಗಳು ಬೆಳಕಿಗೆ ಬಂದಿದ್ದು ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ಬಗಾದಿ ಗೌತಮ್ ತನಿಖೆಗೆ ಆದೇಶಿಸಿದ್ದರು.
ತನಿಖಾಧಿಕಾರಿಯಾಗಿ ಉಪ ವಿಭಾಗಾಧಿಕಾರಿ ಎಚ್ ಎಲ್ ನಾಗರಾಜ್ ನೇಮಕಗೊಂಡಿದ್ದು , ಅಕ್ರಮ ಎಸಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಸಖರಾಯಪಟ್ಟಣ ಹೋಬಳಿಯ ರಾಜಸ್ವ ನಿರೀಕ್ಷಕ ಹೆಚ್ ಸಿ. ಸುರೇಶ್ ,ಪಂಚನಹಳ್ಳಿಯ ಬಿ. ಎನ್ .ಚಂದ್ರಶೇಖರ್ ಹಾಗೂ ಭೂಮಿ ಕೇಂದ್ರದ ಕೆ .ಎಸ್. ಶ್ರುತಿ ಅಮಾನತುಗೊಂಡಿದ್ದಾರೆ
ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ತಹಶೀಲ್ದಾರ್ ಉಮೇಶ್ ಹಾಗೂ ಶಿರಸ್ತೆದಾರ್ ಮೇಲೂ ಕ್ರಮಕ್ಕೆ ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿದೆ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ