ಚಿಕ್ಕಮಗಳೂರು ಶೃಂಗೇರಿ ಕ್ಷೇತ್ರ ಶಾಸಕ ಟಿಡಿ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ ದೂರು ಪ್ರಕರಣ ಈಗ ಹೊಸ ಆಯಾಮ ಪಡೆಯುತ್ತಿದೆ.
ದೂರುದಾರ ಡಿ ಎನ್ ಜೀವರಾಜ್ ಗೆ ಚಾಲಕನಾಗಿದ್ದ ವಿಜಯಾನಂದ ಬಿಡುಗಡೆ ಮಾಡಿರುವ ವಿಡಿಯೋ ಮತ್ತು ವಿಜಯಾನಂದ ಹಾಗೂ ಜೀವರಾಜ್ ಪರಮಾಪ್ತ ದಿನೇಶ್ ಮಧ್ಯ ನಡೆದಿರುವ ಆಡಿಯೋ ಸಂಭಾಷಣೆ ಭಾರಿ ಸದ್ದು ಮಾಡುತ್ತಿವೆ.
ನಿನ್ನೆ ಮತ್ತೆ ರಾತ್ರಿ ಬಿಟ್ಟಿರುವ ವಿಡಿಯೋದಲ್ಲಿ ವಿಜಯಾನಂದ ಪಶ್ಚಾತಾಪದ ಮಾತುಗಳನ್ನು ಆಡಿದ್ದಾರೆ.
ಪಕ್ಷದ ಸಿದ್ಧಾಂತ ನಂಬಿ ಪ್ರಾಮಾಣಿಕವಾಗಿ ದುಡಿದಿದ್ದ ತನಗೆ ಕಾಂಗ್ರೆಸ್ಸಿಗ ಎನ್ನುವ ಪಟ್ಟವನ್ನು ಕಟ್ಟಿದ್ದಾರೆ. ಸ್ನೇಹಿತರ ಎದುರು ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರಿನ ಸತ್ಯ ಸಂಗತಿ ತಿಳಿಯುತ್ತಿದ್ದಂತೆ ತನ್ನ ಕುಟುಂಬದಲ್ಲಿ ತಳಮಳ ಆರಂಭಗೊಂಡಿದೆ. ದೂರನ್ನು ಹಿಂದೆ ಪಡೆಯುವಂತೆ ತಾನೆ ಅನೇಕ ಬಾರಿ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಆನೆಯ ಜೊತೆ ಆನೆಯ ಗುದ್ದಾಟ ಮಾಡಬೇಕು ಎಂದು ಹೇಳುವ ಮೂಲಕ ಸತಕ ರಾಜೇಗೌಡರು ವಿರುದ್ಧ ಜೀವರಾಜ್ ದೂರನ್ನು ಸಲ್ಲಿಸಬೇಕಿತ್ತು ಎಂದು ಮಾರ್ವಿಕವಾಗಿ ತಿವಿದಿದ್ದಾರೆ.
ಆನೆ ಎದುರು ಆನೆಯ ತಾಕಬೇಕು ಇರುವೆಯನ್ನು ಹೊಸಕಿ ಹಾಕುತ್ತಾರೆ. ತನ್ನನ್ನು ನಡು ನೀರಿನಲ್ಲಿ ಕೈಬಿಟ್ಟರು ಎಂದು ಕಿಡಿ ಕಾರಿದ್ದಾರೆ. ತಾನು ದೂರನ್ನು ಹಿಂದೆ ಪಡೆದ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳು ನಡೆಯುತ್ತಿವೆ. ಆ ಕುರಿತು ತನಗೆ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ವಿಜಯಾನಂದ ಮತ್ತು ಜೀವರಾಜ್ ಆಪ್ತ ದಿನೇಶ್ ಮಧ್ಯೆ ನಡೆದ ಸಂಭಾಷಣೆ ಮತ್ತಷ್ಟು ರೋಚಕವಾಗಿದೆ.
ನಿನ್ನನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಒಂದೊಮ್ಮೆ ಜೀವರಾಜ್ ಸಹಾಯ ಮಾಡದಿದ್ದರೂ ತಾನು ಸಹಾಯ ಮಾಡುತ್ತೇನೆ ಎಂದು ದಿನೇಶ್ ಭರವಸೆ ಕೊಟ್ಟಿದ್ದಾರೆ. ಇನ್ನಿಬ್ಬರಿಂದ ದೂರನ್ನು ಕೊಡಿಸುತ್ತೇನೆ ಎಂದು ಧೈರ್ಯ ತುಂಬುವ ಕೆಲಸ ಮಾಡಿ ಯಾವುದಕ್ಕೂ ಧೈರ್ಯ ಕಳೆದುಕೊಳ್ಳಬೇಡ ಎಂದು ಹೇಳಿರುವ ದಿನೇಶ್ ದೂರು ಕೊಡಿಸುವಲ್ಲಿ ತನ್ನ ಪಾತ್ರವು ಮುಖ್ಯ ಎನ್ನುವುದನ್ನು ಸಾಬೀತು ಮಾಡಿದ್ದಾರೆ.