ಸೋಮವಾರ, ನವೆಂಬರ್ 28, 2022

250 ಕೋಟಿ ಬೆಲೆಗೆ ಜೀವರಾಜ್ ರವರೇ ಜಮೀನು ಖರೀದಿಸಲಿ :ಶಾಸಕ ರಾಜೇಗೌಡ ಸವಾಲು -ತನಿಖೆಗೆ ಸಿದ್ದ ಇರುವುದಾಗಿ ಘೋಷಣೆ

 


ಚಿಕ್ಕಮಗಳೂರು: ತಾವು ಬಾಳೆಹೊನ್ನೂರು ಬಳಿ ಖರೀದಿಸಿರುವ  ಜಮೀನನ್ನು 250 ಕೋಟಿಗೆ ಜೀವರಾಜ್ ರವರು ಖರೀದಿಸುವುದಾದರೆ ಸಂತೋಷದಿಂದ ಕೊಡುವುದಾಗಿ ಶೃಂಗೇರಿ ಶಾಸಕ ಟಿ.ಡಿ .ರಾಜೇಗೌಡ ಸವಾಲು ಹಾಕಿದ್ದಾರೆ.
ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸರಿಸುಮಾರು 20 ಕೋಟಿ ರೂ.ಗಳಿಗೆ ಜಮೀನನ್ನು ಖರೀದಿಸಿದ್ದು ಯಾವುದೇ ರೀತಿಯ ಅವ್ಯವಹಾರ ಕಾನೂನು ಬಾಹಿರ ಕೃತ್ಯ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಮೀನು ಖರೀದಿ ನಮ್ಮ ಮತ್ತು ಸಿದ್ಧಾರ್ಥ ಕುಟುಂಬದ ನಡುವಿನ ವ್ಯವಹಾರ. ಅದು ಕಾಯ್ದೆ ಮತ್ತು ಕಾನೂನು ಚೌಕಟ್ಟಿನಲ್ಲಿ ಅಡಿಯಲ್ಲಿಯೇ ನಡೆದಿದೆ.ಈಗಾಗಲೇ ಸಿದ್ದಾರ್ಥ ಅವರ ಪತ್ನಿ ಮಾಳವಿಕಾರವರು ಕೂಡ ಸ್ಪಷ್ಟನೆ ನೀಡಿದ್ದಾರೆ ಎಂದರು.
ಲೋಕಾಯುಕ್ತಕ್ಕೆ  ತಮ್ಮ ವಿರುದ್ಧ ದೂರು ನೀಡಿದ ಬಗ್ಗೆ ಅಧಿಕೃತವಾಗಿ  ಮಾಹಿತಿ ಬಂದಿಲ್ಲ. ಹೀಗಾಗಿ ಸ್ಪಷ್ಟನೆಯನ್ನು ಕೊಟ್ಟಿರಲಿಲ್ಲ. ಆದರೆ ಕೊಪ್ಪಕ್ಕೆ ಬಂದ ಮುಖ್ಯಮಂತ್ರಿಗಳಾಗಿ ಎಲ್ಲರೂ ಈ ವಿಷಯವನ್ನು ಚರ್ಚಿಸುತ್ತಿರುವುದರಿಂದ ಸ್ಪಷ್ಟನೆ ನೀಡುತ್ತಿರುವುದಾಗಿ ಹೇಳಿದರು.
ಲೋಕಾಯುಕ್ತ ಸೇರಿದಂತೆ ಯಾವುದೇ ರೀತಿಯ ತನಿಖಾ ಸಂಸ್ಥೆಯಿಂದ ತನಿಖೆ ನಡೆದರು ತಾವು ಎದುರಿಸಲು ಸಿದ್ಧ . ಈ ಹಿಂದೆಯೂ ತಮ್ಮ ಹಾಗೂ ತಮ್ಮ ಬೆಂಬಲಿಗರ ವಿರುದ್ಧ ಹಲವು ರೀತಿಯ ತನಿಖೆಗಳು ಆಗಿವೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಸೋತು ಹತಾಶರಾಗಿರುವ ಡಿ .ಎನ್ ಜೀವರಾಜ್ ಗೆ ಒಂದೊಮ್ಮೆ ರಾಜಕೀಯ ಕಾರ್ಯದರ್ಶಿ ಸ್ಥಾನ ಸಿಗದೇ ಹೋಗಿದ್ದರೆ ಮಾನಸಿಕವಾಗಿ ಅಸ್ವಸ್ಥರಾಗುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಜೀವರಾಜ್ ಮೇಲೆ ಇರುವಂತೆ ತಮ್ಮ ವಿರುದ್ಧ ಯಾವುದೇ ಆಪಾದನೆಗಳು ಇಲ್ಲ .ತನಿಖೆಗಳು ನಡೆಯುತ್ತಿಲ್ಲ ಪತ್ರಿಕೆಗಳಲ್ಲಿ ಸುದ್ದಿ ಬಾರದಂತೆ ತಡೆ ಆಜ್ಞೆಯನ್ನು ತಂದಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ತಮ್ಮ ವಿರುದ್ಧ ಭ್ರಷ್ಟಾಚಾರ ಸುಳ್ಳುಆಪಾದನೆ ಹೊರಿಸುತ್ತಿರುವ ಜೀವರಾಜ್ ಬಹುಶಃ ಅವರ ಅಧಿಕಾರ ಅವಧಿಯಲ್ಲಿ ಅದನ್ನೇ ಮಾಡಿದ್ದಾರೆ ಎಂದು ಟೀಕಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...