ಚಿಕ್ಕಮಗಳೂರು ;ಕಾಂಗ್ರೆಸ್ ನಾಯಕಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತಗೌಡರ ಮನೆಗೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ಕೊಟ್ಟಿದ್ದಾರೆ.
ಇಂದು ಬೆಳಿಗ್ಗೆ ಮದುವೆ ಮನೆಗೆ ಹೋಗುವ ಸೋಗಿನಲ್ಲಿ ಆಗಮಿಸಿದ ಐಟಿ ಅಧಿಕಾರಿಗಳು ನೇರವಾಗಿ ಗಾಯತ್ರಿ ಶಾಂತಗೌಡರ ಮನೆಗೆ ದಾಳಿ ಮಾಡಿ ಅನೇಕ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದಾಳಿ ಸುದ್ದಿ ತಿಳಿಯುತ್ತಿದ್ದಂತೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದ್ದುಗಾಯತ್ರಿ ಶಾಂತಗೌಡರನ್ನು ಕುಗ್ಗಿಸುವ ಯತ್ನ ಎಂದು ಆರೋಪಿಸಿ ದಾಳಿಯ ಹಿಂದೆ ಶಾಸಕ ಸಿಟಿ ರವಿ ಕೈವಾಡ ಇದೆ ಆರೋಪಿಸಿದರು. ಶಾಸಕ ಸಿ.ಟಿ ರವಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.
ಕೇವಲ ಗಾಯತ್ರಿ ಶಾಂತಗೌಡರ ಮನೆಗೆ ಮಾತ್ರ ದಾಳಿ ನಡೆಸಲಾಗಿದೆ .ಗುತ್ತಿಗೆದಾರ ಸುದರ್ಶನ್ ಮನೆಗೂ ದಾಳಿ ಮಾಡಬೇಕಿತ್ತು ಎಂದು ಒತ್ತಾಯಿಸಿದ್ದಾರೆ.
ಗಾಯತ್ರಿ ಶಾಂತಗೌಡರ ಮನೆ ಕ್ರಶರ್ ಅಳಿಯನ ಮನೆಗಳ ಮೇಲು ದಾಳಿ ನಡೆದಿದೆ. ರಾಜಕೀಯ ವಲಯದಲ್ಲಿ ಸಂಚಲನ ಉಂಟುಮಾಡಿದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ