ಶನಿವಾರ, ನವೆಂಬರ್ 5, 2022

ಕಾಡಾನೆ ಸೆರೆ ಕಾರ್ಯಾಚರಣೆಗೆ ಬಂದ ಆನೆ ಅಭಿಮನ್ಯುಗೆ ಅನಾರೋಗ್ಯ ;ಅಂಬಾರಿ ಹೊರುವ ಆನೆ ಬಳಕೆಗೆ ತಕರಾರು

 


ಕೊಟ್ಟಿಗೆಹಾರ:ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಊರುಬಗೆಯಲ್ಲಿ ಕಾಡಾನೆ ಸೆರೆಗೆ ಆಗಮಿಸಿರುವ ದಸರಾದಲ್ಲಿ ಅಂಬಾರಿ‌ ಹೊರುವ ಆನೆ ಅಭಿಮನ್ಯುವಿಗೆ ಅನಾರೋಗ್ಯ ಪ್ರಾರಂಭವಾಗಿದೆ.

 ಜ್ವರ ಹಾಗೂ ಬೇಧಿಯಿಂದಾಗಿ ಅಭಿಮನ್ಯು ಬಳಲುತ್ತಿದ್ದು ಆಪರೇಷನ್ ಭೈರ ಕಾರ್ಯಾಚರಣೆ ಸದ್ಯಕ್ಕೆ ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.

ಕಾರ್ಯಾಚರಣೆಗೆ ಬಂದಿರುವ  ಅಜಯ್, ಗೋಪಾಲಸ್ವಾಮಿ  ಆನೆಗಳಿಗೆ ಮದ ಬಂದಿರುವುದರಿಂದ ಅವುಗಳನ್ನು ಕಾರ್ಯಾಚರಣೆಗೆ ಬಳಸಲು ಅಸಾಧ್ಯವಾಗಿದೆ.

ಅಭಿಮನ್ಯು ಬಳಕೆಗೆ ಆಕ್ಷೇಪ :

ಅಂಬಾರಿ ಹೊರುವ ಆನೆ ಅಭಿಮನ್ಯುವನ್ನು ಕಾಡಾನೆ ಕಾರ್ಯಾಚರಣೆಗೆ ಬಳಸುವುದು ಸರಿಯಲ್ಲ ಎಂದು ಪರಿಸರವಾದಿ ಹಾಗೂ ಕರ್ನಾಟಕ ರಾಜ್ಯ ಕಾಡಾನೆಗಳ ಸಂರಕ್ಷಣಾ ಸಂಘದ ಅಧ್ಯಕ್ಷ ವಿಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಭಿಮನ್ಯು ಆನೆ ಈ ದೇಶದ ಆಸ್ತಿ. ಬುದ್ದಿವಂತ ಹಾಗೂ ವಿಶಿಷ್ಟ  ಆನೆಯನ್ನು ಕಾರ್ಯಾಚರಣೆಗೆ ಬಳಸಿಕೊಳ್ಳುವುದು ಸರಿಯಲ್ಲಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ .

ಊರುಬಗೆಯಲ್ಲಿ ಕಾಡಾನೆ ಸೆರೆಗೆ ಅಭಿಮನ್ಯು ವನ್ನು ಕರೆ ತಂದಿದ್ದು  ಅಭಿಮನ್ಯು ವಿಗೆ ಜ್ವರ ಹಾಗೂ ನಿರ್ಜಲೀಕರಣ ಪ್ರಾರಂಭವಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಲಿ ಎಂದು ಒತ್ತಾಯಿಸಿದ್ದಾರೆ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...