ಮೂಡಿಗೆರೆ :ತಾಲ್ಲೂಕಿನ ಊರುಬಗೆ ಅರಣ್ಯ ಪ್ರದೇಶದಲ್ಲಿ ನರಹಂತಕ ಕಾಡಾನೆಯನ್ನು ಹಿಡಿದು ಸಾಗಿಸುವ ಆಪರೇಷನ್ ಬೈರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಕಾರ್ಯಾಚರಣೆಗೆ ಬಂದಿದ್ದ 6 ದಸರಾ ಆನೆಗಳು ವಾಪಸ್ ತೆರಳಿದೆ.
ಅಭಿಮನ್ಯುವಿಗೆ ಜ್ವರ ಭೇದಿ ಬಾಧಿಸಿದೆ. ಅಜ್ಜಯ್ಯ ಮತ್ತು ಗೋಪಾಲಸ್ವಾಮಿ ಆನೆಗೆ ಮದ ಬಂದಿದೆ. ಬೈರ ಮೂಡಿಗೆರೆ ತಾಲ್ಲೂಕಿನ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ಸಕಲೇಶಪುರ ಅಥವ ಮಂಗಳೂರು ಅರಣ್ಯ ಭಾಗಕ್ಕೆ ತೆರಳಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ.
ಈ ಕಾರಣದಿಂದ ಕಾರ್ಯಚರಣೆ ಮಾಡಲು ಸಾಧ್ಯವಿಲ್ಲವೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಡಿಸಿಎಫ್ ಕ್ರಾಂತಿ ತಿಳಿಸಿದ್ದಾರೆ.
ನಿರಾಶೆ :ಮೂಡಿಗೆರೆ ತಾಲ್ಲೂಕಿನ ವಿವಿಧ ಭಾಗಗಳಿಗೆ ಲಗ್ಗೆ ಇಡುತ್ತಿದ್ದ ಕಾಡಾನೆ ಈವರೆಗೆ ಹಲವರನ್ನು ಬಲಿ ತೆಗೆದುಕೊಂಡಿದ್ದು ಸಾಕಷ್ಟು ಬೆಳೆಯನ್ನು ಹಾನಿ ಮಾಡಿದೆ .
ಆನೆ ಹಿಡಿಯುವಂತೆ ಸ್ಥಳೀಯರು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಿದ್ದು , ಕಾರ್ಯಾಚರಣೆ ಆರಂಭವಾಗಿ ಸ್ಥಳೀಯರು ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವ ವೇಳೆಗೆ ಕಾರ್ಯಾಚರಣೆ ಸ್ಥಗಿತ ಕೊಂಡು ನಿರಾಶೆ ತಂದಿದೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ