ಚಿಕ್ಕಮಗಳೂರು : ಬಾಬಾಬುಡನ್ ದರ್ಗಾ ವಿಷಯದಲ್ಲಿ ಕೋಮುವಾದಿ ರಾಜಕಾರಣ ಮಾಡುತ್ತಾ ಅಧಿಕಾರಕ್ಕೆ ಬಂದ ಬಿಜೆಪಿ ನಿರೀಕ್ಷೆಯಂತೆ ಬಾಬಾಬುಡನ್ ದರ್ಗಾ ವ್ಯವಸ್ಥಾಪನಾ ಸಮಿತಿಯ ರಚನೆಯಲ್ಲೂ ಎಲ್ಲಾ ಆಡಳಿತಾತ್ಮಕ ಹಾಗೂ ಸಾಂವಿಧಾನಾತ್ಮಕ ನೈತಿಕತೆಗಳನು ಗಾಳಿಗೆ ತೂರಿದೆ ಎಂದು ಚಿಂತಕ ಶಿವ ಸುಂದರ ಆರೋಪಿಸಿದ್ದಾರೆ
ಬಾಬಾಬುಡನ್ ದರ್ಗಾದಲ್ಲಿ ಪಾರಂಪರಿಕವಾಗಿ ಆಡಳಿತಾತ್ಮಕ ಹಾಗೂ ಧಾರ್ಮಿಕ ಅಧಿಕಾರವನ್ನು ಹೊಂದಿದ್ದ ಶಾಖಾದ್ರಿಯ ಅಧಿಕಾರವನ್ನು ಕಿತ್ತುಹಾಕಿತು .. ಮತ್ತು ಅಲ್ಲಿ ಆಡಳಿತ ಮತ್ತು ಧಾರ್ಮಿಕ ನಿರ್ವಹಣೆಗೆ ಒಂದು ವ್ಯವಸ್ಥಾಪನಾ ಸಮಿತಿಯನ್ನು ರಚಿಸಬೇಕೆಂಬ ಆದೇಶವನ್ನು ಹೊರಡಿಸಿತು.
ಪ್ರಸ್ತಾವಿತ ಸಂಸ್ಥೆಗೆ ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮದವರನ್ನೊಳಗೊಂಡ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವುದು .
ಸದರಿ ಸಂಸ್ಥೆಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ವ್ಯವಸ್ಥಾಪನಾ ಸಮಿತಿ ಅರ್ಚಕ ಹಾಗೂ ಮುಜಾವರ್ ಅವರನ್ನು ನೇಮಿಸುವುದು ಎಂದು ಆದೇಶಿಸಿತ್ತು.
ಆದರೆ ಬಾಬಾಬುಡನ್ ದರ್ಗಾ ನಿರ್ವಹಣೆಗೆ ಸರ್ಕಾರ ಮೂರು ವರ್ಷಗಳ ಅವಧಿಗೆ ಘೋಷಿಸಿರುವ ಎಂಟು ಜನರ ಸಮಿತಿಯಲ್ಲಿ- ಏಳು ಸದಸ್ಯರು ಹಿಂದೂಗಳು.ಒಬ್ಬರು ಮಾತ್ರ ಮುಸ್ಲಿಮರಿದ್ದಾರೆ ಎಂದು ಆಕ್ಷೇಪ ಹೊರ ಹಾಕಿದ್ದಾರೆ.
ಇದು ಬಿಜೆಪಿ ಸರ್ಕಾರದ ಹಿಂದುತ್ವ ರಾಜಕಾರಣದ ಸರ್ವಾಧಿಕಾರವಲ್ಲದೆ ಮತ್ತೇನು? ಎಂದು ಪ್ರಶ್ನಿಸಿ
ಎರಡೂ ಧರ್ಮದವರನ್ನೊಳಗೊಂಡ ಸಮಿತಿ ರಚಿಸಲಾಗುವುದು ಎಂದು ಕೋರ್ಟಿನ ಮುಂದೆ ಮುಚ್ಚಳಿಕೆ ಕೊಟ್ಟು ಸಮಿತಿಯಲ್ಲಿ ನೆಪಮಾತ್ರಕ್ಕೆ ಒಬ್ಬ ಮುಸ್ಲಿಂ ಸದಸ್ಯನನ್ನು ಮಾತ್ರ ನೇಮಕ ಮಾಡಿದೆ ಎಂದು ಟೀಕಿಸಿದ್ದಾರೆ.
ಇದಕ್ಕಿಂತ ಭಿನ್ನಾವಾದದ್ದನ್ನು ಬಿಜೆಪಿ ಸರ್ಕಾರ ಮಾಡುತ್ತದೆಂಬ ನಿರೀಕ್ಷೆಯೂ ಇರಲಿಲ್ಲ.
ನಾಗರೀಕ ಸಮಾಜ ಮೌನ ಬಿಜೆಪಿಯ ಕ್ರೌರ್ಯಕ್ಕಿಂತ ಅಪಾಯಕಾರಿ.. ಅಲ್ಲವೇ? ಎಂದು ಹೇಳಿದ್ದಾರೆ
.jpeg)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ