ಮೂಡಿಗೆರೆ: ತಾಲೂಕಿನ ಹುಲೇಮನೆ ಕುಂದೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ.
45 ವರ್ಷದ ಶೋಭಾ ಅಮೃತ ದುರ್ದೈವಿ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಜನರು ಆತಂಕದಲ್ಲಿ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳು ಮನೆ ಸಮೀಪವೇ ಬರುತ್ತಿದ್ದು ಜನರು ಭಯಭೀತರಾಗಿದ್ದಾರೆ.
ಜಾನುವಾರುಗಳಿಗೆ ಹುಲ್ಲು ತರಲು ಹೋದಾಗ ಶೋಭಾ ಮೇಲೆ ಕಾಡಾನೆ ನಡೆಸಿದ್ದು ಮಹಿಳೆಯ ದೇಹವನ್ನು ಕಾಡಾನೆ ನಜ್ಜುಗುಜ್ಜು ಮಾಡಿದೆ. ಗ್ರಾಮಸ್ಥರು ಭಯ ಬೀತರಾಗಿದ್ದು ಹಾಡು ಹಗಲೇ ನಡೆದ ಘಟನೆಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿತನವೇ ಕಾರಣ ಎಂದು ಆರೋಪಿಸಿದ್ದಾರೆ.
ಕಾಡಾನೆಗಳು ಊರಿನಲ್ಲಿ ಇದ್ದರು ಅರಣ್ಯ ಇಲಾಖೆ ತಿಳಿಸಿದರೆ ಅವುಗಳನ್ನು ಕಾಡಿಗಟ್ಟಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವಿದ್ಯುತ್ ತಂತಿ ತಗುಲಿ ಬಾಲಕ ಸಾವು: ಬೀರೂರು ಸಮೀಪದ ದೊಡ್ಡಘಟ್ಟ ಗ್ರಾಮದ ಡಿ.ಕೆ ರಾಜಪ್ಪನವರ ಪುತ್ರ ಶರತ್ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾನೆ.
ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಮೋಟಾರ್ ಪಂಪಿನ ಸ್ಟಾರ್ಟರ್ ಬಾಕ್ಸ್ ಮೇಲೆ ಬಿದ್ದಿತ್ತು. ಬಾಕ್ಸ್ನ ಬೀಗ ತೆಗೆಯಲು ಬಂದಿದ್ದ ಶರತ್ ಗೆ ವಿದ್ಯುತ್ ಆಗಲಿ ಸ್ಥಳದಲ್ಲಿ ಸಾವಪ್ಪಿದ್ದಾನೆ.
ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಹಾಗೂ ವಿಮಾಸಂಸ್ಥೆ ಪ್ರತಿನಿಧಿಗಳು ಭೇಟಿ ನೀಡಿ ಸೂಕ್ತ ಪರಿಹಾರ ನೀಡುವ ಭರವಸೆ ಕೊಟ್ಟಿದ್ದಾರೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ