ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಹಾಗೂ ತಾಲೂಕು ಕೇಂದ್ರ ಆಗಿರುವ ಶೃಂಗೇರಿಯಲ್ಲಿ 100 ಹಾಸಿಗೆ ಇರುವ ಆಸ್ಪತ್ರೆ ಆರಂಭಿಸುವ ಬೇಕೆಂಬ ಹೋರಾಟ ಮತ್ತೆ ಮುನ್ನಡೆಗೆ ಬಂದಿದೆ.
ಮುಖ್ಯಮಂತ್ರಿಗಳಾದಿಯಾಗಿ ಎಲ್ಲಾ ಜನ ಪ್ರತಿನಿಧಿಗಳು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಸಾಕಷ್ಟು ಬಾರಿ ಭರವಸೆ ಪಡೆದು ರೋಸಿ ಹೋದ ಸಮಾನ ಮನಸ್ಕರ ಯುವಕರ ತಂಡ ; ಪ್ರಜ್ಞಾವಂತ ನಾಗರಿಕರು ಈಗ ಅಹೋರಾತ್ರಿ ಚಳುವಳಿಗೆ ಸಿದ್ಧರಾಗಿದ್ದಾರೆ.
ಚಳವಳಿಯ ಬಗ್ಗೆ ಮೈಕ್ ಮೂಲಕ ಪ್ರಚಾರ ನಡೆಸಲು ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ ಮಾಡಿದ್ದು ಇದರಿಂದ ಸಿಟ್ಟಿಗೆದ್ದ ಯುವಕರು ತಮಟೆ ಬಾರಿಸುತ್ತ ಧರಣಿ ಸತ್ಯಾಗ್ರಹದ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ
ಶೃಂಗೇರಿಯ ಬೀದಿ ಬೀದಿಯಲ್ಲಿ ಸುತ್ತಿ ತಮಟೆ ಪ್ರಚಾರ ನಡೆಸಿದ್ದೇ ಅಲ್ಲದೆ ತಾಲೂಕಿನಾದ್ಯಂತ ಪ್ರಚಾರ ಮಾಡಲು ಮುಂದಾಗಿ ಜನಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆಗೆ ಮಂಗಳಾರತಿ ಎತ್ತಿದ್ದಾರೆ .
ಕಳೆದ ವರ್ಷ ಶೃಂಗೇರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.ಈ ವೇಳೆ ಒಂದು ತಿಂಗಳ ಒಳಗಾಗಿ ಆಸ್ಪತ್ರೆ ಮಂಜೂರು ಮಾಡುತ್ತೇವೆ ಎಂದು ಅಧಿಕಾರಿಗಳು ಭರವಸೆ ಕೊಟ್ಟಿದ್ದೆ ಅಲ್ಲದೆ ಶೃಂಗೇರಿ ಭೇಟಿ ವೇಳೆ ಮುಖ್ಯಮಂತ್ರಿಗಳುಮಾತು ಕೊಟ್ಟಿದ್ದ ರು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ