ಶನಿವಾರ, ನವೆಂಬರ್ 26, 2022

ಶಾಸಕ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ್ದ ದೂರು ವಾಪಸ್ : ಉದ್ಯೋಗದ ಆಮಿಷಕ್ಕೆ ಬಲಿಯಾಗಿ ದೂರು ನೀಡಿಕೆ -ದೂರುದಾರನ ಸ್ಪಷ್ಟನೆ

 


BIG NEWS

ಚಿಕ್ಕಮಗಳೂರು: ಶೃಂಗೇರಿ ಸೇರಿದಂತೆ ರಾಜ್ಯದಲ್ಲಿ ಸಂಚಲನ ಉಂಟುಮಾಡಿದ್ದ ಶಾಸಕ ಟಿ.ಡಿ. ರಾಜೇಗೌಡರ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ ದೂರನ್ನು ಹಿಂದಕ್ಕೆ ಪಡೆಯಲಾಗಿದೆ.
ದೂರುದಾರ ವಿಜಯಾನಂದ ಈ ಬಗ್ಗೆ ಪ್ರಮಾಣ ಪತ್ರವನ್ನು ಸಲ್ಲಿಸಿದ್ದು ತಾವು ಮಾಹಿತಿ ಇಲ್ಲದೆ ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರನ್ನು ಹಿಂದೆ ಪಡೆಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ತಾವು ಈ ಹಿಂದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ರವರಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು ಅನಗತ್ಯ ಆರೋಪಗಳನ್ನು ಹೊರೆಸಿ ಕೆಲಸದಿಂದ ತೆಗೆದುಹಾಕಿದ್ದರು ಎಂದು ಪ್ರಮಾಣ ಪತ್ರದಲ್ಲಿ ವಿವರಿಸಿದ್ದಾರೆ.
ಮತ್ತೆ ಉದ್ಯೋಗ ಕೇಳಿ ಹೋದ ಸಂದರ್ಭದಲ್ಲಿ ಶಾಸಕ ಟಿ.ಡಿ .ರಾಜೇಗೌಡರ ವಿರುದ್ಧ ಲೋಕಾಯುಕ್ತಕ್ಕೆ ದೂರು ಕೊಡಲು ಒಪ್ಪಿದರೆ ಮಾತ್ರ ಕೆಲಸ ಕೊಡುವ ಆಮಿಷ ಒಡ್ಡಿದ್ದು ಅದರಂತೆ ದೂರು ಪ್ರತಿಗೆ ಸಹಿ ಹಾಕಿ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ದೂರು ಅರ್ಜಿಯ ವಿಷಯಗಳನ್ನು ತಮ್ಮ ಗಮನಕ್ಕೂ ತಂದಿಲ್ಲ ಪ್ರತಿಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿ ಸಿದ್ದಾರ್ಥ ಹೆಗಡೆಯವರಾಗಲಿ ರಾಜೇಗೌಡರ ಬಗ್ಗೆ ಆಗಲಿ ತನಗೆ ಯಾವುದೇ ಮತ್ಸರ ಇಲ್ಲದಿದ್ದು ನೀಡಿದ ದೂರಿನಿಂದ ಆದ ತೊಂದರೆಗೆ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.
ಲೋಕಾಯುಕ್ತಕ್ಕೆ ನೀಡಿದ ದೂರನ್ನೇ ಬಂಡವಾಳವಾಗಿ ಇಟ್ಟುಕೊಂಡು ಸುದ್ದಿಗೋಷ್ಠಿ ಮೂಲಕ ಟಿ ಡಿ ರಾಜೇಗೌಡರ ತೇಜೋವಧೆಗೆ ಯತ್ನಿಸಿದ ಡಿ ಎನ್ ಜೀವರಾಜ್ ಮತ್ತು ಬಿಜೆಪಿ ಮುಖಂಡರಿಗೆ ಈಗ ಭಾರಿ ಮುಖಭಂಗವಾಗಿದೆ ಎನ್ನುವ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...