ಉಸಿರಾಟದ ಸಮಸ್ಯೆಯಿಂದ ಮೂಡಿಗೆರೆ ಮೂಲದ ಮಹಿಳೆ ಸಾವು.
ಎರಡು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ
ಇಂದಿರಮ್ಮ(55) ಮೃತ ಪಟ್ಟಿದ್ದಾರೆ.ಪಿ.ಪಿ.ಇ. ಕಿಟ್ ಬಳಸಿ ಮೂಡಿಗೆರೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ. ಕೊರೋನಾ 2ನೇ ಅಲೆಗೆ ಜಿಲ್ಲೆಯಲ್ಲಿ 7 ಮಂದಿ ಸಾವು.
ಉಸಿರಾಟದ ಸಮಸ್ಯೆಯಿಂದ ಮೂಡಿಗೆರೆ ಮೂಲದ ಮಹಿಳೆ ಸಾವು.
ಎರಡು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ
ಇಂದಿರಮ್ಮ(55) ಮೃತ ಪಟ್ಟಿದ್ದಾರೆ.ಪಿ.ಪಿ.ಇ. ಕಿಟ್ ಬಳಸಿ ಮೂಡಿಗೆರೆಯ ಚಿತಾಗಾರದಲ್ಲಿ ಅಂತ್ಯಕ್ರಿಯೆ. ಕೊರೋನಾ 2ನೇ ಅಲೆಗೆ ಜಿಲ್ಲೆಯಲ್ಲಿ 7 ಮಂದಿ ಸಾವು.
ಜೈಪುರ ಆಟೋ ನಿಲ್ದಾಣದ ಬಳಿ ಹಶಿಶ್ ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಆಧರಿಸಿ ಅಬಕಾರಿ ಡಿವೈಎಫ್ ಐ ಪ್ರದೀಪ್ ನೇತೃತ್ವದಲ್ಲಿ ದಾಳಿ ನಡೆಯಿತು .
ವಿಜಯ್ ಎಂಬಾತ ಸೆರೆಸಿಕ್ಕಿತ್ತು ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಸುಮಾರು ೮,೭೫೦ ಗ್ರಾಂ ಗಾಂಜಾ ಹಾಗೂ ೨೦೦ ಗ್ರಾಂ ಹಶಿಶ್ ಪತ್ತೆಯಾಗಿದೆ .
ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಖಾಸಗಿ ಆಸ್ಪತ್ರೆಗಳು ಶೇ. ೫೦% ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕು, ಇತರೆ ಖಾಯಿಲೆಗಳಿಗೆ ಸಂಬಂಧಿಸಿದ ರೋಗಿಗಳನ್ನು ನಿರ್ಲಕ್ಷಿಸದೇ ಪರ್ಯಾಯ ಮಾರ್ಗಗಳನ್ನು ರೂಪಿಸಬೇಕು . ಔಷಧಿ ದರಗಳನ್ನು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೆ ಹೆಚ್ಚಿನ ಜನರು ಭೇಟಿ ನೀಡುವುದರಿಂದ, ಅರ್ಚಕರಿಗೆ, ಮುಲ್ಲಾ, ಫಾದರ್‌ಗಳಿಗೆ , ಆಟೋ ಚಾಲಕರು, ಕ್ಷೌರಿಕರುಗಳಿಗೂ ಲಸಿಕೆ ನೀಡುವಂತೆ ತಿಳಿಸಿದರು.
ನಿಯಮ ಪಾಲಿಸದ ಕಲ್ಯಾಣ ಮಂಟಪದ ಮಾಲೀಕರ ವಿರುದ್ಧ ಕ್ರಮ ಜರುಗಿಸುವಂತೆ ಹೇಳಿದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹೆಚ್, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ, ತಹಸೀಲ್ದಾರ್ ಕಾಂತರಾಜ್, ಜಿಲ್ಲಾ ಆರೋಗ್ಯ ಮತ್ತು ಕುಂಟಬ ಕಲ್ಯಾಣಾಧಿಕಾರಿ ಡಾ.ಉಮೇಶ್ ಉಪಸ್ಥಿತರಿದ್ದರು.
.ಸರ್ಕಾರ ಅನುಸರಿಸುತ್ತಿರುವ ಯಾವುದೇ ರೀತಿಯ ದಮನಕಾರಿ ತಂತ್ರಗಳಿಗೆ ಮಣಿಯದೆ ನೌಕರರು ತಮ್ಮ ಪಟ್ಟನ್ನು ಸಡಿಲಿಸದೆ ಮುಷ್ಕರ ಮುಂದುವರಿಸಿದ್ದಾರೆ .ಇಂದು ಆಜಾದ್ ಮೈದಾನದಲ್ಲಿ ತಟ್ಟೆ ಲೋಟ ಬಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನೌಕರರು ಬೇಡಿಕೆ ಈಡೇರುವ ತನಕ ಮುಷ್ಕರ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ .
ಮುಷ್ಕರಕ್ಕೆ ಬಿಜೆಪಿ ಹೊರತುಪಡಿಸಿ ವಿವಿಧ ಪಕ್ಷ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ .ಸರ್ಕಾರ ನೌಕರರ ಮೇಲೆ ಹೇರುತ್ತಿರುವ ಒತ್ತಡವನ್ನು ಮುಖಂಡರು ಖಂಡಿಸಿದ್ದಾರೆ
ಬೀದಿ ನಾಯಿಗಳ ಹಾವಳಿಯಿಂದ ಬೇಸತ್ತ ಜನ ನಗರಸಭೆಗೆ ದೂರನ್ನು ಸಲ್ಲಿಸಿದ್ದರು. ಸಾರ್ವಜನಿಕರ ದೂರು ಆಧರಿಸಿ ನಗರಸಭೆ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಿಸಲು ಆರಂಭಿಸಿದೆ .
ಇಂದಾವರದ ಹೊರವಲಯದಲ್ಲಿ ಈ ಕೆಲಸ ನಡೆಯುತ್ತಿದ್ದು ಸಂತಾನಹರಣ ಚಿಕಿತ್ಸೆಗೆ ಒಳಗಾದ ನಾಯಿಗಳನ್ನು 4ದಿನಗಳ ಬಳಿಕ ಬಿಡಲಾಗುವುದು ಎಂದು ನಗರಸಭೆ ಆಯುಕ್ತ ಬಸವರಾಜ್ ತಿಳಿಸಿದ್ದಾರೆ
ಚಿಕ್ಕಮಗಳೂರು : ಸಮೀಪದ ದಾಸರಹಳ್ಳಿ ಕೆರೆ ಕಾಲುವೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಉಪವಿಭಾಗಧಿಕಾರಿ ಡಾ.ಹೆಚ್.ಎಲ್ ನಾಗರಾಜ್ ಮಾರ್ಗದರ್ಶನದಲ್ಲಿ ದಾಸರಹಳ್ಳಿ ಕೆರೆ ಸರ್ವೆ ಕಾರ್ಯ ಮುಗಿದಿದ್ದು ಇಂದು
ರೆವಿನ್ಯೂ ಇನ್ಸ್‌ಪೆಕ್ಟರ್ ಪುಟ್ಟರಾಜು,ಸರ್ವೆಯರ್ ದೊರೆರಾಜು. ವಿಷನ್ ಚಿಕ್ಕಮಗಳೂರು ಟ್ರಸ್ಟ್ ಸದಸ್ಯರು ಹಾಗೂ ಸ್ಥಳೀಯರಯ ಭಾಗವಹಿಸಿದ್ದರು.
ಚಿಕ್ಕಮಗಳೂರು :ಕಡೂರು ವಲಯದ ಹಾದಿ
ಭದ್ರ ವನ್ಯಜೀವಿ ವಿಭಾಗದ ಪಶವೈದ್ಯಾಧಿಕಾರಿ ಯಶಸ್ ಮತ್ತು ಅಸಂದಿ ಗ್ರಾಮ ಪಶವೈದ್ಯಾಧಿಕಾರಿ ಭರತ್ ನೇತೃತವದಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲ , ಕಡೂರು ವಲಯ ಅರಣ್ಯಾಧಿಕಾರಿ ತನುಜ್ ಕುಮಾರ್ , ಗೌರವ ವನ್ಯಜೀವಿ ಪರಿಪಾಲಕ ಜಿ. ವೀರೇಶ್ ಸಿಬ್ಬಂದಿಗಳು ಇದ್ದರು .ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೇಸಗೆಯಲ್ಲಿ ಕಾನನದಲ್ಲಿ ಅಡಗಿ ಕುಳಿತು ಮಳೆ ಬಿದ್ದೊಡನೆ ಧುತ್ತೆಂದು ಹೊರಜಗತ್ತಿಗೆ ಕಾಣಿಸಿಕೊಳ್ಳುವ ಜಲ ಧಾರೆಗಳ ನೋಟ ಒಂದು ಕಾವ್ಯ .
ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಲಧಾರೆಗಳಿವೆ ಕೊರತೆಯಿಲ್ಲ . ಚಿಕ್ಕಮಗಳೂರು -ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿ ಜಲಧಾರೆಗಳ ಗಣಿ .
ಜುಲೈನಲ್ಲಿ ಧೋ ಎಂದು ಸುರಿಯುವ ಮಳೆ ಇಲ್ಲಿನ ಜಲಪಾತಗಳಿಗೆ ಜೀವ ತುಂಬುತ್ತದೆ . ಹೆಜ್ಜೆಗೊಂದರಂತೆ ಸಿಗುವ ಜಲಕನ್ಯೆಯರು ಕಣ್ಮನ ತಣಿಸುತ್ತಾರೆ . ಅಕ್ಟೋಬರ್ ವರೆಗೆ ಈ ಸಂಭ್ರಮ ಇರುತ್ತದೆ .ಮತ್ತೆ ಮಳೆಗಾಲಕ್ಕೆ ಕಾಯಬೇಕು .
ಇಂದು 47 ಪ್ರಕರಣಗಳು ಬೆಳಕಿಗೆ ಬಂದಿದ್ದು ಅದರಲ್ಲಿ 26 ವಿದ್ಯಾರ್ಥಿನಿಯರಿಗೆ ಸೋಂಕು ಇರುವುದು ದೃಢಪಟ್ಟಿದ್ದು ಜನ ಗಾಬರಿಗೊಳ್ಳುವಂತೆ ಮಾಡಿದೆ .
ಬಸವನಹಳ್ಳಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಮೊದಲು ಸೋಂಕು ಕಾಣಿಸಿಕೊಂಡಿತ್ತು .ಆಕೆಯಿಂದಲೇ ಉಳಿದವರಿಗೂ ಹಬ್ಬಿರುವ ಶಂಕೆ ವ್ಯಕ್ತವಾಗಿದೆ .
ಶೃಂಗೇರಿ ವಸತಿ ಶಾಲೆಯ ಮೂವರು ವಿದ್ಯಾರ್ಥಿನಿಯರಲ್ಲಿ ಸೋಂಕು ಕಾಣಿಸಿಕೊಂಡಿದೆ
ಜಿಲ್ಲಾಧಿಕಾರಿ ಕೆ ಎನ್ ರಮೇಶ್ ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂವಿತಾ, ಜಿಲ್ಲಾ ರಕ್ಷಣಾಧಿಕಾರಿ ಅಕ್ಷಯ್, ನಿವೃತ್ತ ಪೋಲಿಸ್ ನಿರೀಕ್ಷಕ ಪ್ರಭಾಕರ್
ನಿವೃತ್ತ ಪೊಲೀಸರು ಹಾಗೂ ಕರೊನ ಸಂದರ್ಭದಲ್ಲಿ ಶ್ರಮಿಸಿದವರನ್ನು ಸನ್ಮಾನಿಸಲಾಯಿತು . ಧ್ವಜ ದಿನಾಚರಣೆ ಅಂಗವಾಗಿ ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ನಡೆಯಿತು .
ಪ್ಯಾನ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಈ ಬೆಂಕಿ ಹರಡಿದೆ ಎನ್ನಲಾಗಿದ್ದು .ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಬ್ಯಾಂಕಿನ ಬಾಗಿಲನ್ನು ತೆಗೆಸಿದ್ದಾರೆ .
ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಂದಿಸಲಾಗಿದ್ದು ನಷ್ಟದ ಪ್ರಮಾಣ ತಿಳಿದುಬಂದಿಲ್ಲ .
ಉಪನೋಂದಣಾಧಿಕಾರಿಗಳಿಗೆ ತಲಾ 4 ವರ್ಷ, ಮೂವರು ಪತ್ರ ಬರಹಗಾರರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 1.25 ಕೋಟಿ ದಂಡ ವಿಧಿಸಿ ಮಂಡ್ಯ 1ನೇ ಹೆಚ್ಚುವರಿ ಸಿವಿಲ್, ಜೆಎಂಎಫ್‌ಸಿ ನ್ಯಾಯಾಧೀಶರು ಮಹತ್ವದ ತೀರ್ಪು ನೀಡಿದ್ದಾರೆ.
2006ಕ್ಕೂ ಹಿಂದೆ ಮಂಡ್ಯ ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಉಪ ನೋಂದಾವಣಾಧಿಕಾರಿಗಳಾಗಿದ್ದ ಎಸ್.ಎನ್.ಪ್ರಭಾ, ಚಲುವರಾಜು, ಪ್ರಭಾರ ಉಪ ನೋಂದಣಾಧಿಕಾರಿಗಳಾಗಿದ್ದ ಲೀಲಾವತಿ, ಸುನಂದಾ ಹಾಗೂ ಪತ್ರ ಬರಹಗಾರರಾಗಿದ್ದ ಬಿ.ಕೆ.ರಾಮರಾವ್, ನರಸಿಂಹಮೂರ್ತಿ, ಚಂದ್ರಶೇಖರ್ ಶಿಕ್ಷೆಗೆ ಒಳಗಾದವರು.
ಒಟ್ಟು 154 ಪ್ರಕರಣಗಳಲ್ಲಿ ಹಣ ದುರುಪಯೋಗವಾಗಿರುವ ಬಗ್ಗೆ 2006ರಲ್ಲಿ ಉಪ ನೋಂದಣಾಧಿಕಾರಿಯಾಗಿದ್ದ ನರಸಿಂಹಯ್ಯ ಪಶ್ಚಿಮ ಠಾಣೆಗೆ ದೂರು ಸಲ್ಲಿಸಿದ್ದರು.
ಇದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಮೇಶ್ ಎಸ್ ಗಾಣಿಗೇರ್ ಮಹತ್ವದ ತೀರ್ಪು ನೀಡಿದ್ದಾರೆ.
ಎಸ್.ಎನ್.ಪ್ರಭಾ ಸದ್ಯ ಬೆಂಗಳೂರು ಐಜಿಆರ್ (ಇನ್‌ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್) ಕಛೇರಿಯಲ್ಲಿದ್ದಾರೆ. ಚೆಲುವರಾಜು ಶೃಂಗೇರಿ ಉಪ ನೋಂದಣಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ .
ಲೀಲಾವತಿ ಮದ್ದೂರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಎಫ್‌ಡಿಎ, ಸುನಂದಾ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಎಫ್‌ಡಿಎ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಅಭಿಯೋಜಕ ಎಂ. ಜಿ ಸುರೇಶ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಶೃಂಗೇರಿ ಉಪನೋಂದಣಾಧಿಕಾರಿ ಚಲುವರಾಜ್ ಇತ್ತೀಚೆಗೆ ಕಂದಾಯ ಸಚಿವ ಆರ್ ಅಶೋಕ್ ರವರ ಆಪ್ತ ಸಹಾಯಕರ ಮೇಲೆ ಲಂಚದ ಆರೋಪ ಹೊರಿಸಿ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು .
ನರಸಿಂಹರಾಜಪುರ ತಾಲ್ಲೂಕಿನ ಮಾರಿದಿಬ್ಬ ಬಳಿಯ ಭದ್ರಾ ಹಿನ್ನೀರಿನಲ್ಲಿ ಶಿವಮೊಗ್ಗದ ಸಲ್ಮಾನ್ ಈಜಲು ತೆರಳಿದ್ದು ನೀರುಪಾಲಾಗಿದ್ದಾನೆ .
ತನ್ನನ್ನು ರಕ್ಷಿಸುವಂತೆ ಮನವಿ ಮಾಡುತ್ತಿದ್ದರೂ ಯಾರೂ ಸ್ಪಂದಿಸಿಲ್ಲ .ಆದರೆ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ ಇರುವುದು ಅಚ್ಚರಿ ತಂದಿದೆ .
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಪ್ರಾಧಿಕಾರದ ಅಧ್ಯಕ್ಷ ಆನಂದ ಹಾಗೂ ಪ್ರಭಾರಿ ಆಯುಕ್ತ ಬಸವರಾಜ್ ಬೈಪಾಸ್ ರಸ್ತೆಯಿಂದ ದಂಟರಮಕ್ಕಿ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಅತ್ಯಾಧುನಿಕ ವಸತಿ ಬಡಾವಣೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು .
ಉದ್ಯಾನವನ, ಕೆರೆಗಳ ಅಭಿವೃದ್ಧಿ ಜೊತೆಗೆ ಯಗಚಿ ಹಳ್ಳದ ಇಕ್ಕೆಲಗಳ ಬಫರ್ ಜಾಗವನ್ನು ಗುರುತಿಸಿ ಒತ್ತುವರಿ ತಡೆಯಲಾಗುತ್ತದೆ ಎಂದು ತಿಳಿಸಿದರು.
ಚಿಕ್ಕಮಗಳೂರು :ಇಂದಿನಿಂದ ಮೂರು ದಿನ ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ ಬೋಳರಾಮೇಶ್ವರ ದೇವಾಲಯದ ...