ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ಆರನೇ ದಿನಕ್ಕೆ ಕಾಲಿಟ್ಟಿದೆ
.ಸರ್ಕಾರ ಅನುಸರಿಸುತ್ತಿರುವ ಯಾವುದೇ ರೀತಿಯ ದಮನಕಾರಿ ತಂತ್ರಗಳಿಗೆ ಮಣಿಯದೆ ನೌಕರರು ತಮ್ಮ ಪಟ್ಟನ್ನು ಸಡಿಲಿಸದೆ ಮುಷ್ಕರ ಮುಂದುವರಿಸಿದ್ದಾರೆ .ಇಂದು ಆಜಾದ್ ಮೈದಾನದಲ್ಲಿ ತಟ್ಟೆ ಲೋಟ ಬಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನೌಕರರು ಬೇಡಿಕೆ ಈಡೇರುವ ತನಕ ಮುಷ್ಕರ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ .
ಮುಷ್ಕರಕ್ಕೆ ಬಿಜೆಪಿ ಹೊರತುಪಡಿಸಿ ವಿವಿಧ ಪಕ್ಷ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ .ಸರ್ಕಾರ ನೌಕರರ ಮೇಲೆ ಹೇರುತ್ತಿರುವ ಒತ್ತಡವನ್ನು ಮುಖಂಡರು ಖಂಡಿಸಿದ್ದಾರೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ