ಚಿಕ್ಕಮಗಳೂರು: ಇಲ್ಲಿನ ಎ.ಐ.ಟಿ. ಸರ್ಕಲ್ ರಾಷ್ಟ್ರೀಯ ಹೆದ್ದಾರಿ ೧೭೩ ರಿಂದ ಪ್ರಾರಂಭವಾಗಿ ಬೇಲೂರು - ಹಾಸನ - ಹೊಳೆನರಸೀಪುರ - ಬಿಳಿಕೆರೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಈ ಮೂಲಕ ಚಿಕ್ಕಮಗಳೂರಿನ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಈ ಹಿಂದೆ ಬೇಲೂರಿನಿಂದ ಬಿಳಿಕೆರೆ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಸಂದರ್ಭ ಚಿಕ್ಕಮಗಳೂರಿನಿಂದ ಬೇಲೂರಿನವರೆಗೆ ಸುಮಾರು ೨೫ ಕಿ.ಮೀ. ಕೈಬಿಟ್ಟು ಹೋಗಿತ್ತು, ಸತತ ಪ್ರಯತ್ನದ ಫಲವಾಗಿ ಬೇಡಿಕೆ ಈಡೇರಿದಂತಾಗಿದೆ .
ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಹಸ್ತಾಂತರಿಸಿದ ನಂತರ ಅಭಿವೃದ್ಧಿ ಕಾರ್ಯ ಪ್ರಾರಂಭವಾಗಲಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.
ಈ ರಸ್ತೆ ಅಭಿವೃದ್ಧಿಪಡಿಸುವುದರಿಂದ ಚಿಕ್ಕಮಗಳೂರಿನಿಂದ ಬೆಂಗಳೂರು ಹಾಗೂ ಮೈಸೂರಿಗೆ ಸಂಚಾರ ಇನ್ನಷ್ಟು ಸುಗಮವಾಗಲಿದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ