ಚಿಕ್ಕಮಗಳೂರು :ಜಿಲ್ಲೆಯಲ್ಲಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ 2 ಕಡೆ ದಾಳಿ ನಡೆಸಿದ ಪೊಲೀಸರು 44 ಜನರನ್ನು ವಶಕ್ಕೆ ಪಡೆದು 5.72 ಲಕ್ಷ ನಗದು, 4 ಕಾರು - 39 ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ .
ಜಯಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಡಿಲೈಟ್ ಫುಲ್ ಹೋಂ ಸ್ಟೇ ಮೇಲೆ ಕೊಪ್ಪ ಉಪವಿಭಾಗದ ಎ ಎಸ್ ಪಿ ಗುಂಜನ್ ಆರ್ಯ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿದೆ. ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ 35 ಜನರನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ್ದ 5,54,140.00 ನಗದು, 4 ಕಾರು ಮತ್ತು 39 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ. ದಾಳಿಯಲ್ಲಿ ಶೃಂಗೇರಿ ಪಿ.ಎಸ್.ಐ. ಮುತ್ತುರಾಜ್, ಜಯಪುರದ ಶ್ರೀಮತಿ ಜ್ಯೋತಿ ಮತ್ತು ಪೊಲೀಸ್ ಸಿಬ್ಬಂದಿ ಮೂರ್ತಪ್ಪ, ಪ್ರಸನ್ನ ಕುಮಾರ್, ಕಾಂತರಾಜು, ಪ್ರವೀಣ ಬ. ನಲಗಾವಲ ಮತ್ತು ಆನಂದ ಬಿರಾದಾರ ಭಾಗವಹಿಸಿದ್ದರು.
ಚಿಕ್ಕಮಗಳೂರು ನಗರದ ಮಧುವನ ಲೇಔಟ್ ಪಾರ್ಕ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಜಿಲ್ಲಾ ಅಪರಾಧ ಪೊಲೀಸ್ ತಂಡ ದಾಳಿ ನಡೆಸಿ, 9 ಜನರನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ್ದ 18,790.00 ನಗದು ವಶಪಡಿಸಿಕೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ