ಮೂಡಿಗೆರೆ: ಪೋಕ್ಸೋ-ಕಾಯ್ದೆ ಪ್ರಕರಣ ಒಂದರ ಸಂಬಂಧ ಆರೋಪಿಗೆ ಶಿಕ್ಷೆ, ದಂಡ ಹಾಗೂ 4 ಲಕ್ಷ ರೂ .ಪರಿಹಾರ ನೀಡುವಂತೆ ನ್ಯಾಯಾಲಯ ತೀರ್ಪು ನೀಡಿದೆ .
ಆರೋಪಿ ಡಿ .ಎಂ .ಮಧು ವಿರುದ್ಧ ಪ್ರಕರಣ ದಾಖಲಾಗಿತ್ತು .
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ .ವೆಂಕಟೇಶ್ ಆರೋಪಿಗೆ 3 ವರ್ಷ ಸಾಮಾನ್ಯ ಶಿಕ್ಷೆ ಮತ್ತು 5,000/- ರೂ ದಂಡ ,ದಂಡ ಕಟ್ಟಲು ತಪ್ಪಿದ್ದಲ್ಲಿ ಹೆಚ್ಚುವರಿ 2 ½ ವರ್ಷ, ಸಾಮಾನ್ಯ ಸಜೆ, 1,000/- ರೂ ದಂಡ, ತಪ್ಪಿದ್ದಲ್ಲಿ 03 ತಿಂಗಳ ಸಾಮಾನ್ಯ ಸಜೆ ವಿಧಿಸಿದ್ದಾರೆ .
ಹಾಗೂ ಕಲಂ:- 4(2) ಪೋಕ್ಸೋ ಕಾಯ್ದೆ ಹಾಗೂ ಕಲಂ:-376(3) ಐಪಿಸಿ ರ ಪ್ರಕಾರ 20 ವರ್ಷ ಸಜೆ ಮತ್ತು 50,000/- ರೂ ದಂಡ ವಿಧಿಸಿದ್ದು, ಕಟ್ಟಲು ತಪ್ಪಿದ್ದಲ್ಲಿ ಹೆಚ್ಚುವರಿ 05 ವರ್ಷ ಸಾಮಾನ್ಯ ಸಜೆ ವಿಧಿಸಿದ್ದಾರಲ್ಲದೆ ಸಂತ್ರಸ್ಥೆಗೆ ಪರಿಹಾರ ಮೊತ್ತವಾಗಿ 4,00,000/- ರೂ ಪಾವತಿಸಲು ಆದೇಶಿಸಿದ್ದಾರೆ.
ಮೂಡಿಗೆರೆ ವೃತ್ತ ನಿರೀಕ್ಷಕ ಜಗನ್ನಾಥ್ ತನಿಖೆ ನಡೆಸಿದ್ದರು .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ