ಸೋಮವಾರ, ಮಾರ್ಚ್ 15, 2021

ಬಿಎಸ್ಸೆನ್ನೆಲ್ ಕಚೇರಿಗೆ ಬೆಂಕಿ: ಸುಟ್ಟು ಕರಕಲಾದ ಕೇಬಲ್ ಗಳು


 ಚಿಕ್ಕಮಗಳೂರು :ಒಣಗಿದ ತರಗೆಲೆಗಳಿಗೆ ಹಚ್ಚಿದ ಬೆಂಕಿ ಇಲ್ಲಿನ ದೂರವಾಣಿ ಮುಖ್ಯಕಚೇರಿಗೆ ಪಸರಿಸಿ ಭಾರಿ ಪ್ರಮಾಣದ ಕೇಬಲ್ ಗಳು ಸುಟ್ಟು ಕರಕಲಾಗಿವೆ 

ಬೆಲ್ಟ್  ರಸ್ತೆಗೆ ಹೊಂದಿಕೊಂಡಂತಿರುವ ದೂರಸಂಪರ್ಕ ಇಲಾಖೆಯ ಮುಖ್ಯ ಕಚೇರಿ ಬಳಿ ಸಾಕಷ್ಟು ತರಗೆಲೆಗಳು ಬಿದ್ದಿದ್ದವು .ಅದಕ್ಕೆ ಯಾರೊ ಬೆಂಕಿ ಹಚ್ಚಿದ್ದಾರೆ .

ಬ ಗಾಳಿಯ ರಭಸಕ್ಕೆ ವೇಗವಾಗಿ ಉರಿದು  ಜ್ವಾಲೆಗಳು ಪಕ್ಕದಲ್ಲೇ ಇದ್ದ ದೂರಸಂಪರ್ಕ ಇಲಾಖೆಗೂ ಪಸರಿಸಿದೆ . ಅಲ್ಲಿ ಶೇಖರಿಸಿಟ್ಟಿದ್ದ ಭಾರಿ ಪ್ರಮಾಣದ ಕೇಬಲ್ ಗಳನ್ನು ಅಗ್ನಿ ಆಹುತಿ ಪಡೆದಿದೆ .

ಕಟ್ಟಡ  ಭದ್ರವಾಗಿದ್ದ ಹಿನ್ನೆಲೆಯಲ್ಲಿ ಬೆಂಕಿ ಒಳಗೆ ಆವರಿಸಿಲ್ಲ . ಇದರಿಂದಾಗಿ ಉಪಕರಣಗಳಿಗೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ .  

ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ . ನಷ್ಟದ ಪ್ರಮಾಣ ಇನ್ನಷ್ಟೇ ತಿಳಿಯಬೇಕಾಗಿದೆ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...