ಮಂಗಳವಾರ, ಮಾರ್ಚ್ 16, 2021

ಶೃಂಗೇರಿಯಲ್ಲಿ ಸರ್ಕಾರಿ ಜಾಗ ಮಾರಾಟ: 7ಜನರ ವಿರುದ್ಧ ಪ್ರಕರಣ


 ಚಿಕ್ಕಮಗಳೂರು :ನದಿಪಾತ್ರದ ಖರಾಬು ಜಮೀನು ಮಾರಾಟ ಹಾಗೂ ನೋಂದಣಿ ಮಾಡಿದ ಆರೋಪದ ಮೇಲೆ ಶೃಂಗೇರಿ ಠಾಣೆಯಲ್ಲಿ 7ಜನರ ವಿರುದ್ಧ ಪ್ರಕರಣ ದಾಖಲಾಗಿದೆ .

ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಮೇಲೆ ವಿ ಎಂ ಬೆಳ್ಳಚ್ಚಾರ್ ಹಾಗೂ ಖರೀದಿ ಮಾಡಿದ ಆರೋಪದಡಿ ಕಲ್ಮಕ್ಕಿ ಪ್ರದೀಪ್ ಮೇಲೆ ಪ್ರಕರಣ ದಾಖಲಾಗಿದೆ .

ನೋಂದಣಿ ಮಾಡಿದ ಆರೋಪದಡಿ ಕೊಪ್ಪ ಉಪ ನೋಂದಣಾಧಿಕಾರಿ ಎಸ್ ಅನಿತಾ , ಕಂಪ್ಯೂಟರ್ ನಿರ್ವಾಹಕರಾದ ಎಚ್ ಎನ್  ಕಿರಣ್ ,ನೇತ್ರಾವತಿ ಸಾಕ್ಷಿದಾರರಾದ ಅಗಸನಹಳ್ಳಿ ಬಿ ವಿ ಭಾಸ್ಕರ್, ಎಸ್ ಕುಮಾರ್ ವಿರುದ್ಧ  ದೂರು ದಾಖಲಾಗಿರುವುದನ್ನು ಉಪನೋಂದಣಾಧಿಕಾರಿ ಚಲುವರಾಜ್ ಖಚಿತಪಡಿಸಿದ್ದಾರೆ .

2016 ಡಿಸೆಂಬರ್ 12 ರಂದು ಶೃಂಗೇರಿ ಉಪನೋಂದಣಿ ಕಚೇರಿಯಲ್ಲಿ  ನದಿಪಾತ್ರದ ಖರಾಬು ಜಮೀನನ್ನು ನೋಂದಣಿ ಮಾಡಲಾಗಿತ್ತು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...