ಚಿ
ಚಿಕ್ಕಮಗಳೂರು .: ನಗರಸಭೆಗೆ ಚುನಾವಣೆ ನಡೆಯದೆ ಎರಡು ವರ್ಷ ಕಳೆದಿದ್ದು ಈ ತಕ್ಷಣ ಚುನಾವಣೆ ನಡೆಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರಸಭೆ ಎದುರು ಪ್ರತಿಭಟನೆ ಮಾಡಿದರು
ಶಾಸಕ ಸಿಟಿ ರವಿ , ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಪಿ ಮಂಜೇಗೌಡ ಮಾತನಾಡಿ ಶಾಸಕ ಸಿ.ಟಿ ರವಿ ಮೀಸಲಾತಿ ವಿರುದ್ಧ ತಮ್ಮ ಪಕ್ಷದ ಸದಸ್ಯರಿಂದಲೇ ತಡೆಯಾಜ್ಞೆ ತಂದು ಉದ್ದೇಶಪೂರ್ವಕವಾಗಿ ಚುನಾವಣೆ ನಡೆಯದಂತೆ ಮಾಡಿದ್ದಾರೆಂದು ಆರೋಪಿಸಿದರು .
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ನಗರಸಭೆ ಮಾಜಿ ಸದಸ್ಯೆ ಸುರೇಖ ಸಂಪತ್ ರಾಜ್ , ಮಾಜಿ ಸದಸ್ಯ ರೂಬೆನ್ ಮೊಸಸ್ ಮಾತನಾಡಿ ಸ್ವಂತ ಕ್ಷೇತ್ರವನ್ನು ಸರಿಪಡಿಸಿ ಕೊಳ್ಳಲಾಗದ ಶಾಸಕ ಸಿ.ಟಿ. ರವಿ ಬೇರೆ ರಾಜ್ಯ ಸರಿಪಡಿಸಲು ಹೋರಟಿರುವುದು ಹಾಸ್ಯಾಸ್ಪದ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ಮಾತನಾಡಿ ಕೂಡಲೇ ನಗರಸಭೆ ಚುನಾವಣೆ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ಶಾಸಕ ಸಿಟಿ ರವಿ ಮನೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಮಹಿಳಾ ಕಾಂಗ್ರೆಸ್ಸಿನ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಸಿಡಿಎ ಮಾಜಿ ಅಧ್ಯಕ್ಷ ಅನೀಫ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ ಎಂ ಸಂದೀಪ್ ಇತರರು, ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ