ಚಿಕ್ಕಮಗಳೂರು :ಶೀರ್ಷಿಕೆ ನೋಡಿ ಅಚ್ಚರಿಯಾಗಬಹುದು .
ತರೀಕೆರೆಯ ಸಾರ್ವಜನಿಕ ಶೌಚಾಲಯ ನೋಡಿದಾಗ ಯಾರಿಗಾದರೂ 1ಸೆಲ್ಫಿ ತೆಗೆದುಕೊಳ್ಳುವ ಮನಸ್ಸಾಗದೆ ಇರದು .
ಸಾರ್ವಜನಿಕ ಶೌಚಾಲಯಗಳೆಂದರೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಇಂದಿಗೂ ಇದೆ . ನಿರ್ವಹಣೆ ಕೊರತೆ ಇದಕ್ಕೆ ಮುಖ್ಯ ಕಾರಣ .
ತರೀಕೆರೆಯಲ್ಲಿ ಇರುವ ಸಾರ್ವಜನಿಕ 11 ಶೌಚಾಲಯಗಳು ಇದಕ್ಕೆ ಭಿನ್ನ . ಆಕರ್ಷಕ ಬಣ್ಣ ಹೊಡೆದು ಪ್ರಾಣಿ ಪಕ್ಷಿ ಸೇರಿದಂತೆ ವಿವಿಧ ಚಿತ್ತಾರಗಳನ್ನು ಬಿಡಿಸಿದ್ದು ಸಾರ್ವಜನಿಕರ ಗಮನ ಸೆಳೆಯುತ್ತಿವೆ .
ಹೊರಗಷ್ಟೇ ಸುಂದರವಲ್ಲ .ಒಳಗೂ ಅಚ್ಚುಕಟ್ಟಾಗಿ ಶುಚಿತ್ವ ಕಾಪಾಡಲಾಗಿದೆ. ಶೌಚಾಲಯ ಬಳಸಿದವರು ಸೆಲ್ಫಿ ತೆಗೆದುಕೊಂಡು ಹೋಗುವುದು ಸಾಮಾನ್ಯ .ಇದರ ಹಿಂದಿನ ರೂವಾರಿ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಮತ್ತವರ ಸಿಬ್ಬಂದಿ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ