ಚಿಕ್ಕಮಗಳೂರು: ರಾಸಲೀಲೆ ಸೇರಿದಂತೆ ರಾಜಕಾರಣಿಗಳ ವಿರುದ್ಧ ಸುಳ್ಳು ಆರೋಪ ಹೊರಿಸಿ ಸೀಡಿಗಳನ್ನು ಬಿಡುಗಡೆ ಮಾಡುವುದನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಕಾನೂನು ಜಾರಿಗೆ ತರುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮಲಾಲಿ ಅಭಿಪ್ರಾಯಿಸಿದ್ದಾರೆ .
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಇಂತಹ ಕಾನೂನುಗಳು ರಾಜಕಾರಣಿಗಳಿಗೆ ಪರವಾನಿಗೆ ನೀಡಿದಂತೆ ಆಗುತ್ತದೆ. ಮುಂದೆ ಇಂಥ ಕೃತ್ಯಗಳಿಗೆ ವಿಧಾನ ಸೌಧದಲ್ಲಿ ಕೊಠಡಿಗಳನ್ನು ಕಾದಿರಿಸುತ್ತಾರೆ ಎಂದು ವ್ಯಂಗ್ಯವಾಡಿದರು .
ವೇಶ್ಯಾವಾಟಿಕೆಯನ್ನು ಮೊದಲು ನಿಲ್ಲಿಸಬೇಕು ರಾಜಕಾರಣಿಗಳು ತಮ್ಮ ಮನೆ ,ಕುಟುಂಬ ,ಸಾಮಾಜಿಕ ಜೀವನದ ಬಗ್ಗೆ ಯೋಚನೆ ಮಾಡುವುದು ಅಗತ್ಯ .ಕೆಲವು ರಾಜಕಾರಣಿಗಳಿಗೆ ಇದೊಂದು ಹವ್ಯಾಸವಾಗಿ ಹೋಗಿದೆ.ಈವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ ಎಂದು ಬೇಸರ ಹೊರಹಾಕಿದರು .
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣ ದೊಡ್ಡ ದುರಂತ ಈ ಘಟನೆಯ ಹಿಂದೆ ದೊಡ್ಡ ಷಡ್ಯಂತ್ರವಿದೆ ,ಯಾರನ್ನೊ ಹಣಿಯಬೇಕು, ರಾಜೀನಾಮೆ ಕೊಡಿಸಬೇಕು ಎನ್ನುವ ಉದ್ದೇಶದಿಂದ ವ್ಯವಸ್ಥಿತವಾಗಿ ಮಾಡಿದ ಪಿತೂರಿ ಎಂದು ಟೀಕಿಸಿದರು .
ಸುಳ್ಳು ಆರೋಪ ಹೊರಿಸಿ ಈ ರೀತಿ ಮಾಡುವವರ ವಿರುದ್ಧ ಮೊಕದ್ದಮೆ ಹೂಡುವುದು ಸ್ವಾಗತಾರ್ಹ .ಖಾಸಗಿ ವ್ಯಕ್ತಿತ್ವ ಹಾಳು ಮಾಡುವುದನ್ನು ನಿಲ್ಲಿಸಬೇಕು .ಕಾನೂನಿನಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ