ಚಿಕ್ಕಮಗಳೂರು: ವಿವಿಧ ರೂಪದಲ್ಲಿ ನೊಂದ ಮಹಿಳೆಯರು ಮತ್ತು ಮಕ್ಕಳ ಹಿತರಕ್ಷಣೆಗೆ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಸ್ವಾಧಾರ ಕೇಂದ್ರ ಸಾಲದ ಸುಳಿಯಲ್ಲಿ ಸಿಲುಕಿದೆ .
ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಅನುದಾನ ಬಾರದೆ ಹತ್ತು ಲಕ್ಷ ರೂ ಸಾಲ ವಾಗಿದೆ . ಕಸ್ತೂರಿಬಾ ಸದನದ ಆಶ್ರಯದಲ್ಲಿ ಈ ಕೇಂದ್ರ ನಡೆಯುತ್ತಿದ್ದು ಇಲ್ಲಿ ಹನ್ನೆರಡು ಮಹಿಳೆಯರು ಹಾಗೂ ಇಪ್ಪತ್ತು ಮಕ್ಕಳು ನೆಲೆಸಿದ್ದಾರೆ .
ಸರ್ಕಾರ ವಾರ್ಷಿಕ ೧೬ ಲಕ್ಷ ರೂ ಗಳನ್ನು ನೀಡಬೇಕಾಗಿದ್ದು ಕೇವಲ ೬ ಲಕ್ಷ ರೂ ಬಂದಿದೆ ಎಂದು ಕೇಂದ್ರದ ಮುಖ್ಯಸ್ಥೆ ಮೋಹಿನಿ ಸಿದ್ದೇಗೌಡ ಬೇಸರ ಹೊರಹಾಕಿದ್ದಾರೆ .
ಕೇಂದ್ರ ಸರ್ಕಾರದ ಕಾರ್ಯಕ್ರಮ ಇದಾಗಿತ್ತು ರಾಜ್ಯ ಸರ್ಕಾರ ಅನುದಾನವನ್ನು ನೀಡಬೇಕು .
ಮಠ ಮಂದಿರಗಳಿಗೆ ಹೇರಳವಾಗಿ ಅನುದಾನ ನೀಡುತ್ತಿರುವ ಸರ್ಕಾರಕ್ಕೆ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸುವ ಕೇಂದ್ರದ ಬಗ್ಗೆ ಕಾಳಜಿ ಇಲ್ಲವಾಗಿದೆ .
ಇಲ್ಲಿನ ಸಂಸತ್ ಸದಸ್ಯರು ಮತ್ತು ಶಾಸಕರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ