ಚಿಕ್ಕಮಗಳೂರು: ಪಶ್ಚಿಮಘಟ್ಟ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಹೋರಾಟ ರೂಪಿಸುವ ಅಗತ್ಯವಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಬಿ. ಎಲ್. ಶಂಕರ್ ಪ್ರತಿಪಾದಿಸಿದ್ದಾರೆ .
ಪೂರ್ವೋತ್ತರ ರಾಜ್ಯಗಳಿಗೆ ನೀಡಿರುವ ವಿಶೇಷ ಸ್ಥಾನಮಾನವನ್ನು ಪಶ್ಚಿಮಘಟ್ಟ ಪ್ರದೇಶಕ್ಕೆ ನೀಡುವ ಅಗತ್ಯವಿದೆ. ದೀರ್ಘ ಕಾಲದ ಹೋರಾಟಕ್ಕೆ ಪೀಠಿಕೆ ಹಾಕುವ ಅಗತ್ಯವಿದ್ದು ಈ ಕುರಿತು ವಿಧಾನಸಭಾಧ್ಯಕ್ಷರು ವಿಶೇಷ ಸಭೆ ಕರೆಯಲು ಮುಂದಾಗಿದ್ದಾರೆ ಎಂದರು .
ಉತ್ತರ ಭಾರತದ 6 ರಾಜ್ಯಗಳು ವಿಶೇಷ ವಲಯಕ್ಕೆ ಸೇರ್ಪಡೆಗೊಂಡು ವಿಶೇಷ ಸ್ಥಾನಮಾನವನ್ನು ಪಡೆದಿದೆ .ತೆರಿಗೆ ಹಾಗೂ ಜನಪ್ರಾತಿನಿಧ್ಯ ದಲ್ಲೂ ವಿನಾಯಿತಿ ಇದ್ದು ಈ ರೀತಿಯ ವಿನಾಯಿತಿಗಳು ಪಶ್ಚಿಮಘಟ್ಟ ಪ್ರದೇಶಕ್ಕೆ ಸಲ್ಲಬೇಕಾಗಿದೆ ಎಂದು ಹೇಳಿದರು .
ಕಾಯಿದೆ ಅಗತ್ಯ :ಸರ್ಫೆಸಿ ಕಾಯಿದೆಯಿಂದ ಕಾಫಿ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುತ್ತಿದ್ದು ಉದ್ಯಮದ ರಕ್ಷಣೆಗೆ ಹೊಸ ಕಾಯ್ದೆ ರೂಪಿಸಲು ಕೇಂದ್ರ ಮೇಲೆ ಒತ್ತಡ ತರಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದರು .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ