ಚಿಕ್ಕಮಗಳೂರು: ನಗರಸಭೆ ವಾರ್ಡ್ ಮೀಸಲಾತಿ ಕೊನೆಗೂ ಪ್ರಕಟವಾಗಿದೆ .ಈ ಹಿಂದೆ ಮೀಸಲಾತಿ ಪ್ರಕಟವಾಗಿದ್ದ ಸಂದರ್ಭದಲ್ಲಿ ಆಡಳಿತ ಬಿಜೆಪಿಯ ಕೆಲವರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು .
ಇದರಿಂದಾಗಿ ಕಳೆದ 2ವರ್ಷಗಳಿಂದ ನಗರಸಭೆಗೆ ಚುನಾವಣೆ ನಡೆಯದೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದವು.
ಕೊನೆಗೂ ಮೀಸಲಾತಿ ಪ್ರಕಟವಾಗಿದ್ದು' ಸದ್ಯದಲ್ಲೇ ಚುನಾವಣೆ ನಡೆಯುವ ನಿರೀಕ್ಷೆಯೂ ಇದೆ .ಜಿಲ್ಲಾ ಕೇಂದ್ರ ಅಭಿವೃದ್ಧಿ ಕಾರ್ಯಗಳಲ್ಲಿ ತೀವ್ರ ಹಿನ್ನಡೆ ಸಾಧಿಸಿದ್ದು , ನಗರಸಭೆ ಚುನಾವಣೆಯಲ್ಲಿ ಹಿನ್ನಡೆ ಆಗುವ ಸಾಧ್ಯತೆಗಳು ಇರುವುದನ್ನು ಗಮನಿಸಿ ಆಡಳಿತ ಪಕ್ಷದವರು ಉದ್ದೇಶಪೂರ್ವಕವಾಗಿ ನ್ಯಾಯಾಲಯದಿಂದ ತಡೆ ತಂದಿದ್ದರು ಎನ್ನುವ ಆರೋಪವೂ ಇದೆ .


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ