ಚಿಕ್ಕಮಗಳೂರು :ಇತ್ತೀಚೆಗೆ ನಡೆದ ಶಿವಮೊಗ್ಗ ಬ್ಲಾಸ್ಟ್ ಪ್ರಕರಣ ತನಿಖೆಗೆ ತಂಡ ಕಳುಹಿಸಿದ್ದು ನಿಖರ ಕಾರಣಗಳಿಗೋಸ್ಕರ ವರದಿಯನ್ನು ಕಾಯಲಾಗುತ್ತಿದೆ ಎಂದು ಕಂದಾಯ ಸಚಿವ ಆರ್ .ಅಶೋಕ್ ತಿಳಿಸಿದ್ದಾರೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರುಶಿವಮೊಗ್ಗಕ್ಕೆ ಸ್ಪೋಟಕಗಳು ಆಂಧ್ರದಿಂದ ಬಂದಿದೆ ಎಂಬ ಮಾಹಿತಿ ಇದೆ ಎಂದರು .
ಬೇರೆ ಕಾರ್ಯಕ್ಕೆ ಇದು ಬಳಕೆಯಾಗಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು. ಇನ್ನು ಮುಂದೆ ರಾಜ್ಯದ ಎಲ್ಲೆಡೆ ಚೆಕ್ ಪೋಸ್ಡ್ ಗಳನ್ನು ಸ್ಥಾಪಿಸಿ ಪರಿಶೀಲನೆ ನಡೆಸಲಾಗುವುದು.ಇದಕ್ಕಾಗಿ ಬಿಗಿ ನಿಯಮವನ್ನು ತರಲಾಗುತ್ತದೆ ಎಂದು ಹೇಳಿದರು .
ಅಧಿಕಾರಿಗಳ ಸಭೆ ಕರೆದು ಇನ್ನು ಮುಂದೆ ಈ ರೀತಿಯಾಗದಂತೆ ಹೊಸ ಮಾರ್ಗಸೂಚಿ ರೂಪಿಸಿ ಕಠಿಣ ನಿಯಮ ಜಾರಿಗೆ ತರಲಾಗುವುದು ಎಂದರು .ಸಿಬಿಐ ತನಿಖೆ ನಡೆಸುವ ಅವಶ್ಯಕತೆಯಿಲ್ಲ ರಾಜ್ಯದ ಪೊಲೀಸರು ಸಮರ್ಥರಿದ್ದಾರೆ ಎಂದ ಅಶೋಕ್
ಚಿಕ್ಕಮಗಳೂರಿನಲ್ಲಿ ನಡೆದ ಜಾರಳಿ ಹೊಳೆ ನೇತೃತ್ವದ ಸಭೆಗೆ ಮಹತ್ವ ನೀಡಬೇಕಾಗಿಲ್ಲ ಎಂದು ಹೇಳಿದರು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ