ಚಿಕ್ಕಮಗಳೂರು :ನಾಳೆ ನಡೆಯಬೇಕಾಗಿದ್ದ ಪ್ರಥಮ ದರ್ಜೆ ಸಹಾಯಕ ಹುದ್ದೆ ಪರೀಕ್ಷೆ ರದ್ದಾಗಿದೆ .
ಪ್ರಶ್ನೆ ಪತ್ರಿಕೆ ಬಯಲಾಗಿರುವುದು .ಈ ಸಂಬಂಧ ಈಗಾಗಲೇ 6ಜನರನ್ನು ಬಂಧಿಸಿ ಲಕ್ಷಾಂತರ ರೂ , ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ .
ಇದು ಮುಖ್ಯವಲ್ಲ. ಪ್ರಶ್ನೆಪತ್ರಿಕೆ ಸೋರಿಕೆ ಹೇಗೆ ಆಯಿತು ಎನ್ನುವುದೇ ಮುಖ್ಯ .ಪ್ರಶ್ನೆಪತ್ರಿಕೆ ಸಿದ್ಧಪಡಿಸಿ , ಮುದ್ರಿಸಿ ರವಾನೆ ಮಾಡುವುದು ಗೌಪ್ಯ ಕಾರ್ಯಾಚರಣೆ
ಹೀಗಿರುವಾಗ ಪ್ರಶ್ನೆಪತ್ರಿಕೆ ಬಹಿರಂಗವಾಗಿದೆ ಎಂದರೆ ಇದರಲ್ಲಿ ಅನೇಕ ಅಧಿಕಾರಿ ಸಿಬ್ಬಂದಿ ಶಾಮೀಲಾಗಿರುವುದು ಸ್ಪಷ್ಟ .
ಪ್ರಶ್ನೆ ಪತ್ರಿಕೆ ಬಯಲು' ಆರೋಪಿಗಳ ಬಂಧನ ,ತನಿಖೆ ಯಾವುದೂ ಹೊಸತಲ್ಲ. ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಮುಂದೆಯೂ ನಡೆಯಲಿರುವ ನಾಟಕ ಇದು .
ಭ್ರಷ್ಟ ವ್ಯವಸ್ಥೆಯ ಕಬಂಧ ಬಾಹು ಎಲ್ಲಿಯವರೆಗೆ ಚಾಚಿರುತ್ತದೆಯೋ ಅಲ್ಲಿಯವರೆಗೆ ಇದೆಲ್ಲ ಮಾಮೂಲು .ಇದಕ್ಕೆ ಅಧಿಕಾರಿಗಳು ರಾಜಕಾರಣಿಗಳ ಕೃಪಾಕಟಾಕ್ಷವು ಇದ್ದೇ ಇರುತ್ತದೆ .
೧೧೧೭ ಹುದ್ದೆಗೆ ೩.೭೦ ಲಕ್ಷ ಜನ ಪರೀಕ್ಷೆ ಎದುರಿಸಬೇಕಾಗಿತ್ತು . ನಿರುದ್ಯೋಗ ಸಮಸ್ಯೆ ಎಷ್ಟು ಇದೆ ಎಂಬುದಕ್ಕೆ ಇದೇ ಸಾಕ್ಷಿ . ಪಾಪ ಪರೀಕ್ಷೆಗೆ ಸಿದ್ಧತೆ ನಡೆಸಿದವರ ಪಾಡೇನು ?
ಎಲ್ಲದಕ್ಕೂ ಸರ್ಕಾರವೇ ಹೊಣೆಯನ್ನು ಹೊರಬೇಕು . ತೋರಿಕೆಯ ತನಿಖೆ ನಡೆಸಿದರೆ ಯಾವುದೇ ಪ್ರಯೋಜನವಿಲ್ಲ.ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು . ಭ್ರಷ್ಟ ವ್ಯವಸ್ಥೆಯಲ್ಲಿ ಇದು ಸಾಧ್ಯವೇ ಎನ್ನುವುದು ಮತ್ತೆ ಮತ್ತೆ ಕಾಡುವ ಪ್ರಶ್ನೆ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ