ಚಿಕ್ಕಮಗಳೂರು:- ಕ್ಯಾನ್ಸರ್ ಬಗ್ಗೆ ವೈದ್ಯರೊಂದಿಗೆ ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾ ವಿಚಕ್ಷಣಾಧಿಕಾರಿ ಡಾ. ಹೆಚ್.ಕೆ.ಮಂಜುನಾಥ್ ಹೇಳಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಬೆಂಗಳೂರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕ್ಯಾನ್ಸರ್ ಮತ್ತು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಆರ್.ಶ್ರೀನಿವಾಸ್ ವಹಿಸಿದ್ದರು. ಕಿದ್ವಾಯಿ ಆಸ್ಪತ್ರೆಯ ವೈದ್ಯರಾದ ಡಾ .ಮಹಾಂತೇಶ್, ವಿಘ್ನೇಶ್ ತಪಾಸಣೆ ನಡೆಸಿದರು. ಸಂಸ್ಥೆಯ ಉಪಾಧ್ಯಕ್ಷ ಪ್ರದೀಪ್‌ಗೌಡ, ಆರೋಗ್ಯ ಸಮಿತಿ ಅಧ್ಯಕ್ಷ ಡಾ .ಕೆ.ಸುಂದರಗೌಡ, ನಿರ್ದೇಶಕರಾದ ರಸೂಲ್‌ಖಾನ್, ಕೋಟೆ ಸೋಮಣ್ಣ, ಪವನ್, ಲಿಖಿತ್, ವಿನಾಯಕ್, ಬ್ರಹ್ಮಕುಮಾರಿ ಭಾಗ್ಯಕ್ಕ ಹಾಜರಿದ್ದರು.
ನಟ ಪುನೀತ್‌ರಾಜ್‌ಕುಮಾರ್ ಗೆ ಪುಷ್ಪನಮನ ಚಿಕ್ಕಮಗಳೂರು :- ನಟ ಪುನೀತ್‌ರಾಜ್‌ಕುಮಾರ್ ಮೃತರಾಗಿ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಜಿಲ್ಲಾ ಡಾ| ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಆಜಾದ್‌ಪಾರ್ಕ್ ವೃತ್ತದಲ್ಲಿ ಪುನೀತ್ ಭಾವಚಿತ್ರಕ್ಕೆ ಶಾಲಾ ಮಕ್ಕಳೊಂದಿಗೆ ಪುಷ್ಪನಮನ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಐ.ಕೆ.ಓಂಕಾರೇಗೌಡ , ಸಂಘದ ಗೌರವಾಧ್ಯಕ್ಷ ಎಲ್.ವಿ.ಕೃಷ್ಣಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ವ್ಯವಸ್ಥಾಪಕ ಲೋಕೇಗೌಡ, ಆಜಾದ್‌ಪಾರ್ಕ್ ಶಾಲೆ ಶಿಕ್ಷಕ ಲೋಕೇಶ್ವರಾಚಾರ್ ಹಾಗೂ ಶಾಲಾಮಕ್ಕಳು ಉಪಸ್ಥಿತರಿದ್ದರು.
ಸಮುದಾಯ ಭವನ -ಗುಣಮಟ್ಟಕ್ಕೆ ಮೆಚ್ಚುಗೆ ಚಿಕ್ಕಮಗಳೂರು: ರಾಜ್ಯ ಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಡಿಯಲ್ಲಿ ಹಿರೇಮಗಳೂರು ವ್ಯಾಪ್ತಿಯ ಲಕ್ಷ್ಮಿ ಪುರದ ಗೌರೇಶ್ವರ ಸಮುದಾಯ ಭವನದ ಮೇಲಂತಸ್ತಿನ ಕಾಮಗಾರಿ ಗುಣಮಟ್ಟ ವೀಕ್ಷಿಸಿದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಗರಸಭೆ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾಹಿತಿ ನೀಡಿ, ಶಾಸಕಿಯಾಗಿದ್ದ ಎ.ವಿ.ಗಾಯತ್ರಿ ಶಾಂತೇಗೌಡ ೩ ಲಕ್ಷ ರೂ. ವಿಧಾನ ಪರಿಷತ್ ಶಾಸಕ ಗೋವಿಂದರಾಜು ೩ ಲಕ್ಷ ರೂ ಶಾಸಕ ಸಿ.ಟಿ.ರವಿ ೨ ಲಕ್ಷ ರೂ ರಾಜ್ಯಸಭಾ ಸದಸ್ಯ ರೇಹಮಾನ್ ಖಾನ್ ೩ ಲಕ್ಷ ರೂ. ಸಂಸದರಾಗಿದ್ದ ಜಯಪ್ರಕಾಶ್ ಹೆಗ್ಗಡೆ ೧ ಲಕ್ಷ ರೂ.ಅನುದಾನ ನೀಡಿದ್ದಾರೆಂದರು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ