ಮೂಡಿಗೆರೆ: ಇಲ್ಲಿನ ಬೆಥನಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಈಕೆಯ ಪೋಷಕರು ಎಂ.ಜಿ ರಸ್ತೆಯ ರಾಮೇಶ್ವರ ಮೆಡಿಕಲ್ ಅಂಗಡಿ ಬಳಿ ಚಿನ್ನ ಬೆಳ್ಳಿ ಆಭರಣ ರಿಪೇರಿ ಮಾಡುತ್ತಿದ್ದು ಮಹಾರಾಷ್ಟ್ರದ ಮೂಲದವರಾಗಿದ್ದಾರೆ .ವಿದ್ಯಾರ್ಥಿನಿ ಅಕಾಲಿಕ ನಿಧನದ ವಿಷಯ ತಿಳಿಯುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ, ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ. ಆಕೆಯ ಎರಡೂ ಕಣ್ಣುಗಳನ್ನು ಹಾಸನದ ನೇತ್ರ ಬ್ಯಾಂಕಿಗೆ ದಾನ ಮಾಡಲು ತಂದೆ ತಾಯಿ ನಿರ್ಧರಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ