ಚಿಕ್ಕಮಗಳೂರು :ತಾಲ್ಲೂಕು ಹುಣಸೆಹಳ್ಳಿ ಪುರದಲ್ಲಿ ತೋಟ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಿ ಮಹಿಳೆಯೊಬ್ಬರ ಗರ್ಭಪಾತಕ್ಕೆ ಕಾರಣವಾಗಿರುವ ತೋಟದ ಮಾಲೀಕ ಮತ್ತು ಆತನ ಪುತ್ರನನ್ನು ಬಂಧಿಸುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳ ಮುಖಂಡರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.
ಘಟನೆ ನಡೆದು 15 ದಿನಗಳು ಕಳೆದರೂ ಈವರೆಗೂ ತೋಟದ ಮಾಲೀಕ ಜಗದೀಶ ಗೌಡ ಮತ್ತು ತಿಲಕ್ ಗೌಡನನ್ನು ಬಂಧಿಸಿಲ್ಲವೆಂದು ಮುಷ್ಕರ ನಿರತರು ಆರೋಪಿಸಿದ್ದಾರೆ .
ತೋಟ ಕಾರ್ಮಿಕರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿರುವ ಬಾಳೆಹೊನ್ನೂರು ಪೊಲೀಸರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳದಿರುವ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ .
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಲಿತರ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದ್ದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಟೀಕಿಸಿದ್ದಾರೆ.
ಆರೋಪಿ ಬಿಜೆಪಿ ಮುಖಂಡ ನಾಗಿದ್ದು ಪ್ರಕರಣವನ್ನು ಮುಚ್ಚಿಹಾಕುವ ವ್ಯವಸ್ಥಿತ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ .
ದಂಟರಮಕ್ಕಿ ಶ್ರೀನಿವಾಸ್, ಹೊನ್ನೇಶ್, ಗಿರೀಶ, ಅಂಗಡಿ ಚಂದ್ರು ,ಕೂದುವಳ್ಳಿ ಮಂಜುನಾಥ್,ಗೌಸ್ ಮುನೀರ್ ಸೇರಿದಂತೆ ಹಲವರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ