ಚಿಕ್ಕಮಗಳೂರು : ಸಾವಿರ ರೂ ಸಂಬಳ, ಓಡಾಡಲು ಸರ್ಕಾರಿ ವಾಹನ ,ಆ ನಡುವೆ ಒಂದಿಷ್ಟು ಗೋಲ್ಮಾಲ್ ವ್ಯವಹಾರ . ಹೀಗಿದ್ದರೂ ಪಾರ್ಕಿಂಗ್ -ಟೋಲ್ ಇತರೆ ಶುಲ್ಕ ಕಟ್ಟಲು ತಕರಾರು . ಇದು ಕೆಲ ಉನ್ನತ ಹುದ್ದೆಗಳಲ್ಲಿ ಇರುವವರ ರೋಗ .
ಶೃಂಗೇರಿಯಲ್ಲಿ ಇಂಥಹದೇ ಘಟನೆ ನಡೆದಿದೆ .ಆತ ಕಂದಾಯ ಸಚಿವ ಆರ್. ಅಶೋಕ್ ರವರ ಆಪ್ತ ಸಹಾಯಕ ಹನುಮಂತ ರಾಜು.
ಶೃಂಗೇರಿ ಮಠಕ್ಕೆ ಬಂದಿದ್ದ ಈ ವ್ಯಕ್ತಿ ಗಾಂಧಿ ಮೈದಾನದ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದ್ದಾನೆ . ಶುಲ್ಕ 50 ರೂ.ನೀಡುವಂತೆ ಅಲ್ಲಿನ ವ್ಯಕ್ತಿ ತಿಳಿಸಿದ್ದಾನೆ .
ಆಗ ತನ್ನನ್ನು ಪರಿಚಯಿಸಿಕೊಂಡ ಈ ವ್ಯಕ್ತಿ ಶುಲ್ಕ ಕೊಡುವ ಬದಲಾಗಿ ಯಾರಿಗೋ ಫೋನ್ ಮಾಡುವುದಾಗಿ ಹೇಳಿದ್ದಾನೆ.
ಇದಕ್ಕೆ ಒಪ್ಪದೆ ಶುಲ್ಕ ಪಾವತಿಸುವಂತೆ ತಿಳಿಸಿದ್ದರೂ ಪಾವತಿಸದೆ ಹಾಗೇ ಹೋಗಿದ್ದಾನೆ ಈ ದೊಡ್ಡ ವ್ಯಕ್ತಿ !! .ಈ ಘಟನೆಯ ಆಡಿಯೋ ಈಗ ವೈರಲ್ ಆಗಿದೆ .
.jpeg)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ