ಚಿಕ್ಕಮಗಳೂರು :ಭಾರಿ ಮಳೆಯಿಂದ ಕಳೆದ 2ವರ್ಷಗಳಿಂದ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದ ಚಾರ್ಮಾಡಿ ಘಾಟಿಯಲ್ಲಿ ಕೊನೆಗೂ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ .
ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೀಡಿದ ವರದಿ ಆಧರಿಸಿ ಜಿಲ್ಲಾಧಿಕಾರಿ ಕೆ.ಎನ್ . ರಮೇಶ್ ಆದೇಶ ನೀಡಿದ್ದಾರೆ .
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್, 6ಚಕ್ರದ ಲಾರಿಗಳು, ಟೆಂಪೋ ಸೇರಿದಂತೆ ಇನ್ನಿತರೆ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ .
6 ಚಕ್ರ ಮೇಲ್ಪಟ್ಟ ವಾಹನಗಳಿಗೆ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ . ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ .ಈ ಭಾಗದಲ್ಲಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕೊಟ್ಟಿಗೆಹಾರ , ಚಾರ್ಮಾಡಿ ಭಾಗದ ಗ್ರಾಮಸ್ಥರು ತೀವ್ರ ಒತ್ತಾಯವನ್ನು ಹೇರಿದ್ದನ್ನು ಇಲ್ಲಿ ನೆನಪಿಸಬಹುದು .
ಜಿಲ್ಲಾಡಳಿತ ಆದೇಶದಿಂದಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ .


ಚಾರ್ಮಾಡಿ ಬಸ್ ಸಂಚಾರ ...ಶುಭ ಸುದ್ದಿ ಕೊಟ್ಟದ್ದಕ್ಕೆ ಧನ್ಯವಾದಗಳು. --ಡಿ.ಶಿವರಾಮಯ್ಯ.
ಪ್ರತ್ಯುತ್ತರಅಳಿಸಿ