ಚಿಕ್ಕಮಗಳೂರು :ಇತ್ತೀಚೆಗೆ ಪ್ರಶ್ನೆ ಮಾಡುವವರನ್ನು, ಸರ್ಕಾರ ವಿರುದ್ಧ ಮಾತನಾಡುವವರನ್ನು ಒಂದಿಲ್ಲ ಒಂದು ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಿ ಜೈಲಿಗೆ ಅಟ್ಟುವ ಪರಿಪಾಠ ಹೆಚ್ಚಾಗುತ್ತಿದೆ .
ದೇಶದ ವಿವಿಧ ಕಡೆಗಳಲ್ಲಿ ಇಂತಹ ಅನೇಕ ಘಟನೆಗಳು ಈಗಾಗಲೇ ಜರುಗಿವೆ. ಅದರಲ್ಲಿ ಪತ್ರಕರ್ತರು ಒಳಗೊಂಡಿದ್ದಾರೆ .
ಈಗ ರಾಜ್ಯ ಸರಕಾರವು ಪರೋಕ್ಷವಾಗಿ ಪತ್ರಕರ್ತರನ್ನು ಕಟ್ಟಿ ಹಾಕುವ ಕೆಲಸಕ್ಕೆ ಕೈ ಹಾಕಿದೆ .ಅದಕ್ಕಾಗಿ ಕ ಎಲ್ಲ ಪತ್ರಕರ್ತರ ಜಾತಕ ಸಂಗ್ರಹಿಸುವ ಕೆಲಸಕ್ಕೆ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ .
ಮಾನ್ಯತೆ ಪಡೆದ ಪತ್ರಕರ್ತರ ಮಾಹಿತಿಯನ್ನು ಒದಗಿಸುವ ಹೊಣೆಗಾರಿಕೆಯನ್ನು ವಾರ್ತಾ ಇಲಾಖೆಗೆ ನೀಡಲಾಗಿದೆ .
ತಮಾಷೆಯ ಸಂಗತಿಯೆಂದರೆ ಇದರಲ್ಲಿ ಸಿದ್ಧಾಂತ ಯಾವುದು ಎಂದು ಕೇಳಿರುವುದು . ಸಂವೇದನಶೀಲ ಪತ್ರಕರ್ತರಿಗೆ ಇದರ ಮರ್ಮ ಅರ್ಥವಾಗಬಹುದು . ಕನಿಷ್ಠ ಈಗಲಾದರೂ ನಾವು ಇದನ್ನು ವಿರೋಧಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು
**ಈ ಬಗ್ಗೆ ಟೆಲೆಕ್ಸ್ ರವಿ ಹೀಗೆ ಬರೆದಿದ್ದಾರೆ ...
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಗೃಹಸಚಿವರಾಗಿದ್ದ ವಿ ಎಸ್ ಆಚಾರ್ಯ ಸುದ್ದಿಮಾಧ್ಯಮ ಕ್ಷೇತ್ರಕ್ಕೆ ಓಂಬಡ್ಮನ್ ನೇಮಕ ಮಾಡಲು ಮುಂದಾಗಿದ್ದರು. ಆಗ ಕಾರ್ಯನಿರತ ಪತ್ರಕರ್ತ ಸಂಘಟನೆಗಳ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಆ ನಿಧಾರವನ್ನು ಕೈ ಬಿಡಲಾಯಿತು.
ಬಿಜೆಪಿ ಪ್ರತಿ ಸಂದರ್ಭದಲ್ಲೂ ಪತ್ರಕರ್ತರು. ಮಾಧ್ಯಮಗಳು ತಮ್ಮ ಮರ್ಜಿಗೆ ತಕ್ಕಂತೆ ಇರಬೇಕು ಎಂಬ ಧೋರಣೆ ಹೊಂದಿದೆ. ಅದಕ್ಕೆ ವಿರುದ್ಧವಾಗಿರುವವರನ್ನು ನಕ್ಸಲ್ ಸಿಂಪಥೈಸರ್, ದೇಶದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟಿ ಹತ್ತಿಕ್ಕುವ ಕೆಲಸ ಮಾಡುತ್ತಲೆ ಬಂದಿದೆ.
ಈಗ ವಿವರ ಕೇಳುತ್ತಿರುವುದರ ಹಿಂದೆ ಇಂತಹ ಉದ್ದೇಶವೆ ಇದೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ