ಚಿಕ್ಕಮಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಆಲ್ದೂರಿನ ಯುವಕನೊಬ್ಬನನ್ನು ವಿಶೇಷ ತನಿಖಾ ತಂಡ ವಶಕ್ಕೆ ಪಡೆದಿದೆ .
ಸಹಜವಾಗಿ ಇದು ಜಿಲ್ಲೆಯಲ್ಲಿ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದ್ದು , ಈ ಯುವಕ ಯಾರು ಎನ್ನುವ ಚರ್ಚೆ ಎಲ್ಲೆಡೆ ಕೇಳಿಬರುತ್ತಿವೆ .
ಆಲ್ದೂರು ಪಟ್ಟಣದ ಗ್ರಾಮ ಪಂಚಾಯ್ತಿ ಮಾಜಿ ಪದಾಧಿಕಾರಿಯ ಪುತ್ರ ಎನ್ನಲಾಗಿದ್ದು ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಎಂದು ಹೇಳಲಾಗುತ್ತಿದೆ . ಯುವಕ ಬೆಂಗಳೂರಿನಲ್ಲಿ ನೆಲೆಸಿದ್ದ .
ಜಿಲ್ಲೆಯ ಇನ್ನಷ್ಟು ಯುವಕರು ಖೆಡ್ಡಾಕ್ಕೆ ಬೀಳುವ ಸಾಧ್ಯತೆಗಳು ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ .
ರಾಜ್ಯದಲ್ಲಿ ಬೆಳಕಿಗೆ ಬರುವ ಬಹುತೇಕ ಗಂಭೀರ ಪ್ರಕರಣಗಳಲ್ಲಿ ಜಿಲ್ಲೆಯ ಯುವಕರು ಥಳಕು ಹಾಕಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ