ಚಿಕ್ಕಮಗಳೂರು :ಕೊಟ್ಟಿಗೆಹಾರ: ಬಣಕಲ್ ಗ್ರಾಮದ ಸರ್ವೇ ನಂ 353 ಆಟದ ಮೈದಾನವನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಕ್ಕಾ ಪೋಡಿ ಬದಲಾಯಿಸುವಂತೆ ಒತ್ತಾಯಿಸಿ ಕರೆ ನೀಡಿದ್ದ ಬಣಕಲ್ ಪಟ್ಟಣ ಯಶಸ್ವಿಯಾಗಿದೆ.
ಅಂಗಡಿ ಮುಂಗಟ್ಟುಗಳ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ನೀಡಿದ್ದರು.
ಬಣಕಲ್‌ನ ಪೆಟ್ರೋಲ್ ಬಂಕ್‌ನಿಂದ ಪ್ರತಿಭಟನಾ ಮೆರವಣಿಗೆ ಹೊರಟು ಬಣಕಲ್‌ನ ಮುಖ್ಯ ಬೀದಿಗಳಲ್ಲಿ ಸಾಗಿ ಆಟದ ಮೈದಾನದಲ್ಲಿ ಧರಣಿ ನಡೆಸಲಾಯಿತು.
ಸ್ಥಳಕ್ಕೆ ಶಾಸಕ ಎಂ.ಪಿ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಎಂ ಅಕ್ಷಯ್ ಬೇಟಿ ನೀಡಿ ಧರಣಿ ನಿರತದ ಬಳಿ ಮಾತುಕತೆ ನಡೆಸಿದರು. ನಂತರ ಪೊಲೀಸ್ ವರಿಷ್ಠಾಧಿಕಾರಿ ಪಕ್ಕಾ ಪೋಡಿ ಮಾಡುವ ಕುರಿತು ಭರವಸೆ ನೀಡಿದರು.
ಆಟದ ಮೈದಾನದ ಪಕ್ಕಾ ಪೋಡ್ ಬದಲಾವಣೆಯ ಭರವಸೆ ನೀಡಿದ್ದರಿಂದ ಧರಣಿಯನ್ನು ಹಿಂಪಡೆದುಕೊಂಡಿದ್ದು ಪಕ್ಕಾ ಪೋಡಿ ಬದಲಾವಣೆ ಆಗದಿದ್ದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಅನಿರ್ದಿಷ್ಟಾವಧಿ ಧರಣಿ ನಡೆಡಲಾಗುವುದು ಎಂದರು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ