BIG NEWS
ಸಾಧನೆಗಳನ್ನು ಸಾಧಿಸುವವನು ಸಾಧಕ, ಅಂತಹ ಸಾಧಕರ ಸಾಲಿನಲ್ಲಿ ಮೊದಲ ಬಾರಿಗೆ ಕಾಫೀ ಕಣಿವೆ ಮೂಡಿಗೆರೆಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಮಲೆನಾಡ ಉದಯೋನ್ಮುಖ ಪ್ರತಿಭೆಯೊಂದು ಇಂದು ದೇಶದಾದ್ಯಂತ ಪ್ರಜ್ವಲಿಸುತ್ತಿದೆ,
ಅವರೇ ಸಾಕ್ಷತ್ ಗೌಡ ಹೆಚ್.ಎಸ್.
ನೆಟ್ ಬಾಲ್ ಕ್ರೀಡೆಯ ಬಗ್ಗೆ ಹೆಚ್ಚು ಪರಿಚಿತವಲ್ಲದ ಊರಿನಿಂದ ಬೆಳೆದ ಈ ಸಾಕ್ಷತ್ ಇಂದು ರಾಷ್ಟ್ರದ ನೆಟ್ ಬಾಲ್ ತಂಡವನ್ನು ಪ್ರತಿನಿಧಿಸುತ್ತಿರುವುದು ನಮ್ಮ ಮಲೆನಾಡಿಗೆ ಹೆಮ್ಮೆಯ ಸಂಗತಿ.
ಕ್ರೀಡಾ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಅನೂಕೂಲಗಳನ್ನು ಹೊಂದಿರದ ಮಲೆನಾಡಿನಲ್ಲಿ ಇಂದು ರಾಷ್ಟ್ರವನ್ನು ಪ್ರತಿನಿಧಿಸುವ ಕ್ರೀಡಾ ಪ್ರತಿಭೆಗೆ ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ಕ್ರೀಡಾ ಗೌರವ ಏಕಲವ್ಯ ಪ್ರಶಸ್ತಿಯನ್ನು ತಮ್ಮ ಮುಡೀಗೇರಿಸಿಕೊಂಡ ಯುವಕ ಈ ಸಾಕ್ಷತ್ ಗೌಡ. ಮೂಲತಃ ಮೂಡಿಗೆರೆಯ ಬಣಕಲ್ ಹೋಬಳಿ ಹೊಸಳ್ಳಿ ಗ್ರಾಮದ ಹೆಚ್.ಟಿ. ಶಂಕರ್ ಮತ್ತು ಸೀಮಾ ದಂಪತಿಯ ಪುತ್ರ .
ಶಂಕರ್ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರಾಗಿ ಚಿಕ್ಕಮಗಳೂರು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು ಚಿಕ್ಕಮಗಳೂರು ಮಾರುತಿ ನಗರದಲ್ಲಿ ವಾಸ. ನಗರದ ಸೇಂಟ್ ಮೇರೀಸ್ ನಲ್ಲಿ ಪ್ರೌಢ ಶಿಕ್ಷಣ ಮುಗಿಸಿ ನಂತರದ ವಿದ್ಯಾಭ್ಯಾಸ ಉಜಿರೆಯ ಎಸ್.ಡಿ.ಎಂ ನಲ್ಲಿ ಪಡೆದಿದ್ದು ಸದ್ಯಕ್ಕೆ ಕ್ರೀಡೆಯ ಜೊತೆ ಎಂ.ಎಸ್.ಡಬ್ಲ್ಯೂ ವ್ಯಾಸಂಗದಲ್ಲಿ ಮುಂದುವರೆಸಲಿದ್ದಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ