ಮಂಗಳವಾರ, ಡಿಸೆಂಬರ್ 6, 2022

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

 



ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ.
ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ಆವರಣದಿಂದ ಭಜನೆ ,ಮಹಿಳೆಯರ ಚಂಡೇವಾದನ , ದತ್ತ ವಿಗ್ರಹಗಳೊಂದಿಗೆ ಹೊರಟ ಮಹಿಳೆಯರ ಸಂಕೀರ್ತನ ಯಾತ್ರೆ ಪಾಲಿ ಟೆಕ್ನಿಕ್ ವರೆಗೆ ತಲುಪಿತು.
ಅಲ್ಲಿಂದ ಪೀಠಕ್ಕೆ ತೆರಳಿದ ಮಹಿಳೆಯರು ಗುಹೆಯೊಳಗೆ ತೆರಳಿ ದತ್ತ ಪಾದುಕೆ ದರ್ಶನ ಪಡೆದು ಅನುಸೂಯ ದೇವಿ ಪೂಜೆ ಸಲ್ಲಿಸಿದರು. ಹೋಮ ಇತರೆ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.
ಶೋಭಾಯಾತ್ರೆ: ದತ್ತಜಯಂತಿ ಅಂಗವಾಗಿ ನಾಳೆ ಚಿಕ್ಕಮಗಳೂರು ನಗರದಲ್ಲಿ ಮಧ್ಯಾಹ್ನದ ಬಳಿಕ ವಿವಿಧ ಜಾನಪದ ತಂಡಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಜರುಗಲಿದೆ.
ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಶಾಸಕ ಸಿಟಿ ರವಿ ಆರೋಪ: ದತ್ತ ಜಯಂತಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಬೇಕು ಎನ್ನುವ ಉದ್ದೇಶದಿಂದ ಕೆಲವು ದುಷ್ಕರ್ಮಿಗಳು  ಗಿರಿ ರಸ್ತೆಯ ತಿರುವುಗಳಲ್ಲಿ ಮಳೆಗಳನ್ನು ಹೊಡೆದಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಲಾಗಿದೆ ಎಂದಿದ್ದಾರೆ.
ಚಿತ್ರಗಳು: ತಾರಾನಾಥ್ ಕಾಮತ್

ಕಾಫೀ ಕಣಿವೆ ಮೂಡಿಗೆರೆಯ 'ಏಕಲವ್ಯ' ಸಾಕ್ಷತ್ ಗೌಡ

 

 

BIG NEWS 
ಸಾಧನೆಗಳನ್ನು ಸಾಧಿಸುವವನು ಸಾಧಕ, ಅಂತಹ ಸಾಧಕರ ಸಾಲಿನಲ್ಲಿ ಮೊದಲ‌ ಬಾರಿಗೆ ಕಾಫೀ ಕಣಿವೆ ಮೂಡಿಗೆರೆಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಮಲೆನಾಡ ಉದಯೋನ್ಮುಖ ಪ್ರತಿಭೆಯೊಂದು ಇಂದು ದೇಶದಾದ್ಯಂತ ಪ್ರಜ್ವಲಿಸುತ್ತಿದೆ, 

ಅವರೇ ಸಾಕ್ಷತ್ ಗೌಡ ಹೆಚ್.ಎಸ್. 

ನೆಟ್ ಬಾಲ್ ಕ್ರೀಡೆಯ ಬಗ್ಗೆ ಹೆಚ್ಚು ಪರಿಚಿತವಲ್ಲದ ಊರಿನಿಂದ ಬೆಳೆದ ಈ ಸಾಕ್ಷತ್ ಇಂದು ರಾಷ್ಟ್ರದ ನೆಟ್ ಬಾಲ್ ತಂಡವನ್ನು ಪ್ರತಿನಿಧಿಸುತ್ತಿರುವುದು ನಮ್ಮ ಮಲೆನಾಡಿಗೆ ಹೆಮ್ಮೆಯ ಸಂಗತಿ.

 ಕ್ರೀಡಾ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಅನೂಕೂಲಗಳನ್ನು ಹೊಂದಿರದ ಮಲೆನಾಡಿನಲ್ಲಿ ಇಂದು ರಾಷ್ಟ್ರವನ್ನು ಪ್ರತಿನಿಧಿಸುವ ಕ್ರೀಡಾ ಪ್ರತಿಭೆಗೆ ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ಕ್ರೀಡಾ ಗೌರವ ಏಕಲವ್ಯ ಪ್ರಶಸ್ತಿಯನ್ನು ತಮ್ಮ ಮುಡೀಗೇರಿಸಿಕೊಂಡ ಯುವಕ ಈ ಸಾಕ್ಷತ್ ಗೌಡ. ಮೂಲತಃ ಮೂಡಿಗೆರೆಯ ಬಣಕಲ್ ಹೋಬಳಿ ಹೊಸಳ್ಳಿ ಗ್ರಾಮದ  ಹೆಚ್.ಟಿ. ಶಂಕರ್ ಮತ್ತು ಸೀಮಾ ದಂಪತಿಯ ಪುತ್ರ .

 ಶಂಕರ್  ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರಾಗಿ ಚಿಕ್ಕಮಗಳೂರು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು  ಚಿಕ್ಕಮಗಳೂರು ಮಾರುತಿ ನಗರದಲ್ಲಿ ವಾಸ. ನಗರದ ಸೇಂಟ್‌ ಮೇರೀಸ್ ನಲ್ಲಿ ಪ್ರೌಢ ಶಿಕ್ಷಣ ಮುಗಿಸಿ ನಂತರದ ವಿದ್ಯಾಭ್ಯಾಸ ಉಜಿರೆಯ ಎಸ್.ಡಿ.ಎಂ ನಲ್ಲಿ ಪಡೆದಿದ್ದು ಸದ್ಯಕ್ಕೆ ಕ್ರೀಡೆಯ ಜೊತೆ ಎಂ.ಎಸ್.ಡಬ್ಲ್ಯೂ ವ್ಯಾಸಂಗದಲ್ಲಿ ಮುಂದುವರೆಸಲಿದ್ದಾರೆ. 


ಸೋಮವಾರ, ಡಿಸೆಂಬರ್ 5, 2022

ಇಂದಿನಿಂದ ದತ್ತ ಜಯಂತಿಗೆ ಚಾಲನೆ : ಪೊಲೀಸ್ ಕಟ್ಟೆಚ್ಚರ ; ಪಥಸಂಚಲನ

 


BIG NEWS : ಚಿಕ್ಕಮಗಳೂರು :ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಮೂರು ದಿನಗಳ ಕಾಲ ನಡೆಯುವ ವಾರ್ಷಿಕ ದತ್ತ ಜಯಂತಿಗೆ ಇಂದಿನಿಂದ  ಚಾಲನೆ ಸಿಗಲಿದೆ.

  ಡಿಸೆಂಬರ್ 6ರಂದು ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಲ್ಲಿ ಅನುಸೂಯ ಅಂಗವಾಗಿ ಜಯಂತಿ ಬೋಳ ರಾಮೇಶ್ವರ ದೇವಾಲಯದ ಆವರಣದಿಂದ ಪಾಲಿಟೆಕ್ನಿಕ್ ವರೆಗೆ ಮೆರವಣಿಗೆ ನಡೆಯಲಿದೆ. 

 ಬಳಿಕ ಮಹಿಳೆಯರು ಬಾಬಾಬುಡನ್ ಗಿರಿಗೆ ತೆರಳಿ ಗುಹೆಯೊಳಗೆ ದತ್ತ ಪಾದುಕೆಗಳ ದರ್ಶನ ಮಾಡಿ ಅನುಸೂಯ ಜಯಂತಿಯಲ್ಲಿ ಭಾಗವಹಿಸಿ ಹಿಂದಿರುಗಲಿದ್ದಾರೆ.

ಡಿಸೆಂಬರ್ 7 ರಂದು ಚಿಕ್ಕಮಗಳೂರಿನಲ್ಲಿ ಮಧ್ಯಾಹ್ನದ ಬಳಿಕ ಆಕರ್ಷಕ ಶೋಭ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಧಾರ್ಮಿಕ ಸಭೆಯು ನಡೆಯಲಿದೆ.

7 ರಂದು ನಡೆಯಲಿರುವ ಶೋಭ ಯಾತ್ರೆ ಹಾಗೂ ಮರುದಿನದ ಜಯಂತಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಡಿಸೆಂಬರ್ 8 ರಂದು ಬೆಳಿಗ್ಗೆ ದತ್ತ ಮಾಲಾಧಾರಿಗಳು ಪೀಠಕ್ಕೆ ತೆರಳಿ ಸರದಿ ಸಾಲಿನಲ್ಲಿ ಹೋಗಿ ದತ್ತ ಪಾದುಕೆಗಳ ದರ್ಶನ ಪಡೆದು ದತ್ತ ಹೋಮ ಇನ್ನಿತರೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಹಿಂದಿರುಗಲಿದ್ದಾರೆ.

ವ್ಯವಸ್ಥಾಪನಾ ಸಮಿತಿ ರಚಿಸಿರುವುದರ ಜೊತೆಗೆ ಈ ಬಾರಿ ಇಬ್ಬರು ಅರ್ಚಕರನ್ನು ತಾತ್ಕಾಲಿಕವಾಗಿ ನೇಮಿಸಿರುವುದು ವಿಶೇಷ. ಮೂರು ದಿನಗಳ ದತ್ತ ಜಯಂತಿ ಹಿನ್ನೆಲೆಯಲ್ಲಿ ಪ್ರಮುಖ ವೃತ್ತ ಸೇರಿದಂತೆ ಎಲ್ಲಡೆ ಕೇಸರಿ ಬ್ಯಾನರ್ ಬಂಟಿಂಗ್ಸ್ ಗಳು ರಾರಾಜಿಸುತ್ತಿವೆ.

ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ 15 ರಾಜ್ಯ ಸಶಸ್ತ್ರ ಮೀಸಲು ಪಡೆ ಪೊಲೀಸರು ಸೇರಿದಂತೆ 4500 ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿದ್ದು ಗಡಿಪ್ರವೇಶದಲ್ಲಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ.

51 ಸಿಸಿಟಿವಿಗಳನ್ನು ಅಳವಡಿಸಿರುವುದರ ಜೊತೆಗೆ 20 ವಿಡಿಯೋ ಕ್ಯಾಮರಾ ಹಾಗೂ ಡ್ರೋನ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ.7 ರಂದು ನಡೆಯಬೇಕಿದ್ದ ವಾರದ ಸಂತೆಯನ್ನು ರದ್ದುಪಡಿಸಲಾಗಿದೆ. ಜನರಲ್ಲಿ ಧೈರ್ಯ ತುಂಬುವ ಸಲವಾಗಿ ಪೊಲೀಸ್ ಪಥ ಸಂಚಲನವನ್ನು ನಡೆಸಲಾಗಿದೆ


      "ತಾತ್ಕಾಲಿಕವಾಗಿ ನೇಮಕಗೊಂಡ ಅರ್ಚಕರು"



ಚುನಾವಣೆ ವರ್ಷವಾಗಿರುವುದರಿಂದ ಸಹಜವಾಗಿಯೇ ದತ್ತ ಜಯಂತಿ ರಂಗೇರಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.



ಶನಿವಾರ, ಡಿಸೆಂಬರ್ 3, 2022

ಮೂಡಿಗೆರೆ ತಾಲೂಕಿನಲ್ಲಿ ಮತ್ತೊಂದು ಪುಂಡಾನೇ ಸೆರೆ : ನೆಮ್ಮದಿಯ ನಿಟ್ಟುಸಿರು ಬಿಟ್ಟ ಕೃಷಿಕರು

 



 BIG NEWS ಚಿಕ್ಕಮಗಳೂರು: ಜಿಲ್ಲೆಯಮೂಡಿಗೆರೆ ತಾಲೂಕಿನ ತಳವಾರ ಗ್ರಾಮದಲ್ಲಿ  ಮತ್ತೊಂದು ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ.

ಕಳೆದ ಮೂರು ತಿಂಗಳಲ್ಲಿ ಮೂವರನ್ನು ಬಲಿ ತೆಗೆದುಕೊಂಡಿದ್ದ ಕಾಡಾನೆಗಳಲ್ಲಿ ಒಂದನ್ನು ಮೊದಲ ದಿನವೇ ಸೆರೆ ಹಿಡಿಯಲಾಗಿತ್ತು

ಉಪಟಳ ನೀಡುತ್ತಿದ್ದ ಮೂರು ಕಾಡಾನೆಗಳನ್ನು ಸೆರೆಹಿಡಿಯಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತುಐದು ದಿನಗಳ ಹಿಂದೆ ಮೊದಲ ಯಶ ಕಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕುಂಡ್ರ ಗ್ರಾಮದಲ್ಲಿ ಪುಂಡಾನೆ ಸೆರೆ ಹಿಡಿದಿದ್ದರು.

ಇದೀಗ 2ನೇ ಕಾರ್ಯಾಚರಣೆಯಲ್ಲಿ ಮತ್ತೊಂದು ಪುಂಡಾನೆ ಸೆರೆ .5 ಸಾಕಾನೆಗಳಿಂದ ಸತತ ಕಾರ್ಯಾಚರಣೆ ನಡೆದಿದೆ. ಆನೆಗಳ ಜಾಡು ಪತ್ತೆ ಹಚ್ಚಲು ಡ್ರೋನ್ ಕ್ಯಾಮೆರಾ ಕೂಡ ಬಳಸಲಾಗಿತ್ತು

ಮತ್ತೊಂದು ಪುಂಡಾನೆ ಸೆರೆಗೆ ಕಾರ್ಯಾಚರಣೆ ಮುಂದುವರೆಯಲಿದ್ದುಸದ್ಯ ಎರಡು ಪುಂಡಾನೆ ಸೆರೆಯಿಂದ ಕೃಷಿಕರು ನಿಟ್ಟುಸಿರು ಬಿಟ್ಟಿದ್ದಾರೆ.


ಶಾಸಕ ಸಿಟಿ ರವಿ ಮನೆಗೆ ಕಾಂಗ್ರೆಸ್ ಕಾರ್ಯಕರ್ತರ ಲಗ್ಗೆ ಯತ್ನ : ಮಾರ್ಗ ಮಧ್ಯದಲ್ಲಿ ತಡೆದ ಪೊಲೀಸರು-ಇನ್ನೊಂದೆಡೆ ಬಿಜೆಪಿ ಪ್ರತಿ ದಾಳಿ

 



ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿಗಳು ಆದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆ ಖಂಡಿಸಿ  ಶಾಸಕ ಸಿ.ಟಿ .ಮನೆಗೆ   ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ರೂಪಿಸಿದ್ದ ತಂತ್ರವನ್ನು  ಪೊಲೀಸರು ವಿಫಲಗೊಳಿಸಿದ್ದಾರೆ.
ತಾಲೂಕು ಕಚೇರಿಯಿಂದ ಮೆರವಣಿಗೆ ಹೋಗಿ ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸಿ.ಟಿ.ರವಿ ಮನೆಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ ಹಾಕುವ ಕಾರ್ಯಕ್ರಮ ರೂಪಿಸಲಾಗಿತ್ತು.
ಪ್ರತಿಭಟನಾಕಾರರನ್ನ ರಸ್ತೆ ಮಧ್ಯೆಯೇ  ಪೊಲೀಸರು ತಡೆದರಲ್ಲದೆ ಇನ್ನೊಂದೆಡೆ ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿ ಮನೆ ರಸ್ತೆ ಮಧ್ಯೆಯೇ ಅಡ್ಡ ಹಾಕಿ ಕಾಂಗ್ರೆಸ್ ಕಾರ್ಯಕರ್ತರಿಗೆ ಬರುವಂತೆ ಸವಾಲು ಹಾಕಿದರು
ಹಂತದಲ್ಲಿ ಮುಲ್ಲಾ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ಬಂಧನಕ್ಕೆ ಪೊಲೀಸರು ಮುಂದಾಗುತ್ತಿದ್ದಂತೆ ಮಾತಿನ ವಾಕ್ ಸಮರ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಗೊಂಡಿತ್ತು.
ಪೊಲೀಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತಲ್ಲದೆ. ಶಾಸಕ ಸಿಟಿ ರವಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರೆ ರವಿ ಪರ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು.
ಒಂದೆಡೆ ಕಾಂಗ್ರೆಸ್ ಮುಖಂಡರುಭಾಷಣ ಮಾಡಿದರೆ ಮತ್ತೊಂದೆಡೆ ಬಿಜೆಪಿ ಪ್ರತಿಭಟನೆ ಕೂಗು ಮೊಳಗಿ ಗೊಂದಲದ ವಾತಾವರಣ ಉಂಟಾಗಿತ್ತು
ರಸ್ತೆಯ ಎರಡು ಬದಿ  ಇಬ್ಬರನ್ನೂ ಬಿಟ್ಟು ಮಧ್ಯೆ  ಪೊಲೀಸರು ನಿಂತು ತಮಾಷೆ ವೀಕ್ಷಿಸಿದರು. ಶಾಸಕರ ಮನೆಗೆ ಪೊಲೀಸ್ ಹೆಚ್ಚಿನ ಕಾವಲು ಹಾಕಿದ್ದು ಎಚ್ಚರಿಕೆ ವಹಿಸಲಾಗಿದೆ.









ಶುಕ್ರವಾರ, ಡಿಸೆಂಬರ್ 2, 2022

ವ್ಯವಸ್ಥಾಪನ ಸಮಿತಿ ರದ್ದುಪಡಿಸಲು ಒತ್ತಾಯಿಸಿ SDPI ಆಶ್ರಯದಲ್ಲಿ ಪ್ರತಿಭಟನೆ

 



ಚಿಕ್ಕಮಗಳೂರು :ತಾಲೂಕಿನ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕೆ ನೇಮಿಸಿರುವ ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಎಸ್‌ಡಿಪಿಐ ಆಶ್ರಯದಲ್ಲಿ ಪ್ರತಿಭಟನೆ ನಡೆದಿದೆ.

ಕೋಮು ಸಾಮರಸ್ಯದ ಕೇಂದ್ರವಾಗಿರುವ ಪೀಠಕ್ಕೆ ರಚಿಸಿರುವ 8 ಎಂಟು ಸದಸ್ಯರಿರುವ ಸಮಿತಿಯಲ್ಲಿ 7 ಸದಸ್ಯರು ಒಂದೇ ಸಮುದಾಯಕ್ಕೆ ಸೇರಿದ್ದು ಇದು ನ್ಯಾಯಾಲಯದ ಆದೇಶದ ಉಲ್ಲಂಘನೆ ಆಗಿದೆ ಎಂದು ಆರೋಪಿಸಿದ್ದಾರೆ.

 ನಾಮಕಾವಸ್ತೆಗೆ ಮುಸ್ಲಿಂ ಸಮುದಾಯದ ಒಬ್ಬ ಸದಸ್ಯರನ್ನು ಮಾತ್ರ ನೇಮಕ ಮಾಡಿದ್ದು , ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರಿಗೂ ಅವಕಾಶ ಕಲ್ಪಿಸಿಲ್ಲ ಎಂದು ಟೀಕಿಸಿದ್ದಾರೆ.

ಹಿಂದೂ ಮತ್ತು ಮುಸ್ಲಿಂ ಎರಡು ಸಮುದಾಯದ ಸಮಾನ ಸದಸ್ಯರು ಇಲ್ಲದ ಈ ಸಮಿತಿಯನ್ನು ತಕ್ಷಣ ವಿಸರ್ಜಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರ ತಪ್ಪು ಸಂದೇಶಗಳನ್ನು ನೀಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.


ಶಾಸಕರ ತಾಳಕ್ಕೆ ತಕ್ಕ ಕುಣಿದ ಅಧಿಕಾರಿ : ಚುನಾವಣೆ ಮುಂದೂಡಿಕೆ : ಮಾಜಿ ಶಾಸಕ ಶ್ರೀನಿವಾಸ ಅಕ್ಷೇಪ



ಚಿಕ್ಕಮಗಳೂರು: ಶಾಸಕರ ಅಣತಿಯಂತೆ  ಚುನಾವಣಾ ಅಧಿಕಾರಿ ಚುನಾವಣೆ ನಡೆಸದ ಘಟನೆ ನಡೆದಿದ್ದು ಈ ಬಗ್ಗೆ ಕಾಂಗ್ರೆಸ್ ಪಕ್ಷ ಆಕ್ರೋಶ ಹೊರ ಹಾಕಿದೆ

ಚುನಾವಣೆ ನೋಟಿಫಿಕೇಶನ್ ಹೊರಡಿಸಿದ ಅಧಿಕಾರಿ ಆರೋಗ್ಯ ಸರಿಯಿಲ್ಲ ಎಂದು ಪಟ್ಟಣದಲ್ಲಿ ಓಡಾಡುವ ಮೂಲಕ ಶಾಸಕರ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ
ತರೀಕೆರೆ ತಾಲೂಕಿನ ಬೆಟ್ಟದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೆಟ್ಟದಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆ ನಡೆಯಬೇಕಿತ್ತು.
ಲೋಕೋಪಯೋಗಿ ಇಲಾಖೆ ಅಧಿಕಾರಿ ವಾಗೀಶ್ ಚುನಾವಣೆ ಅಧಿಕಾರಿಯಾಗಿ ನೋಟಿಫಿಕೇಶನ್ ಹೊರಡಿಸಿದ್ದರು.
ನೋಟಿಫಿಕೇಶನ್ ಹೊರಡಿಸಿ ಹುಷಾರಿಲ್ಲ ಎಂದು ತರೀಕೆರೆ ಪಟ್ಟಣದಲ್ಲಿ ಓಡಾಟ ನಡೆಸಿದ್ದು ಉಪವಿಭಾಗಾಧಿಕಾರಿಗಳೇ ಕಾರಲ್ಲಿ ತಂದು ಚುನಾವಣೆ ನಡೆಸುವಂತೆ ಸೂಚಿಸಿ ಬಿಟ್ಟು ಹೋಗಿದ್ದಾರೆ.
11 ಗಂಟೆಯಿಂದ 3 ಗಂಟೆವರೆಗೆ ಪಂಚಾಯಿತಿಯಲ್ಲೇ ಇದ್ದರೂ ಚುನಾವಣೆ ನಡೆಸಲಿಲ್ಲ ಎಂದು ಆರೋಪ ವ್ಯಕ್ತವಾಗಿದೆ.
ಶಾಸಕರು, ವೈದ್ಯರು ಹಾಗೂ ಆಂಬುಲೆನ್ಸ್ ಗೆ ಫೋನ್ ಮಾಡಿಕೊಂಡು 3 ಗಂಟೆಗೆ ಪೊಲೀಸ್ ಪ್ರೊಟಕ್ಷನ್ ನಲ್ಲಿ ಚುನಾವಣಾ ಅಧಿಕಾರಿ ತೆರಳಿದ್ದಾರೆ.
ಈ ಹಂತದಲ್ಲಿ ತೀವ್ರ ಮಾತಿನ ಚಕಮಕಿ ಪ್ರತಿಭಟನೆಯು ನಡೆದಿದೆ .ಚುನಾವಣೆ ನಡೆಸದ ತೀವ್ರ ಅಸಮಧಾನ ಹೊರ ಹಾಕಿರುವ ಕಾಂಗ್ರೆಸ್ ಮಾಜಿ ಶಾಸಕ ಶ್ರೀನಿವಾಸ್ ಮತ್ತು ಕಾರ್ಯಕರ್ತರು ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಡಿ.ಸಿ.ಗೆ ಮನವಿ ಸಲ್ಲಿಸಿದ್ದಾರೆ

ಗುರುವಾರ, ಡಿಸೆಂಬರ್ 1, 2022

ನಂದಿ ಬಟ್ಟಲು ಸಮೀಪ ವಿದ್ಯುತ್ ಸ್ಪರ್ಶಿಸಿ ಗಂಡಾನೆ ಬಲಿ

 



ಚಿಕ್ಕಮಗಳೂರು :ಮುಸುಕಿನ ಜೋಳ ತಿನ್ನಲು ಬಂದಿದ್ದ ಕಾಡಾನೆ ಎಂದು ವಿದ್ಯುತ್ ಸ್ಪರ್ಶಿಸಿ  ಮೃತಪಟ್ಟ ಘಟನೆ ನಡೆದಿದೆ. 
ತಣಿಗೆಬೈಲು  ವನ್ಯಜೀವಿ ವಲಯದ  ನಂದಿ ಬೆಟ್ಟದ ಸಮೀಪ ಈ ದುರ್ಘಟನೆ ಸಂಭವಿಸಿದೆ.
ಈ ಭಾಗದಲ್ಲಿ ಕಾಡುಪ್ರಾಣಿಗಳನ್ನು ನಿಯಂತ್ರಿಸಲು ಅಕ್ರಮವಾಗಿ ವಿದ್ಯುತ್ ಬೇಲಿಗಳನ್ನು ರೈತರು ನಿರ್ಮಿಸಿಕೊಳ್ಳುತ್ತಿದ್ದು ಇದರಿಂದ ಪದೇ ಪದೇ ವನ್ಯಜೀವಿಗಳು  ಮೃತ ಪಡುತ್ತಿವೆ ಎಂದು ಪರಿಸರ ಪ್ರೇಮಿಗಳು ಕಡವಳ ವ್ಯಕ್ತಪಡಿಸಿದ್ದಾರೆ.
ಕೊಲೆ ಆರೋಪಿಗಳ ಸೆರೆ ಅಜ್ಜಂಪುರ ತಾಲೂಕು ಶಿವನಿ ಗ್ರಾಮದ ನಿವೃತ್ತ ಶಿಕ್ಷಕ ಶೇಖರಪ್ಪ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಉಮೇಶ್ ಮತ್ತು ಆತನ ಮಗ ಮಲ್ಲಿಕಾರ್ಜುನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಗೆ ಆಶ್ರಯ ನೀಡಿದ ಕಡೂರಿನ ಹೇಮಂತ್ ಕುಮಾರ್ ಆಲಘಟ್ಟದ ಶಾಂತಕುಮಾರ್ ಹಾಗೂ ದೊಡ್ಡಬಳ್ಳಾಪುರ ದರ್ಶಣ್ಮುಖಪ್ಪನವರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಕೀರ್ತನ ಯಾತ್ರೆಯೊಂದಿಗೆ ದತ್ತ ಜಯಂತಿಗೆ ಚಾಲನೆ; ಪೀಠದಲ್ಲಿ ಅನುಸೂಯಾ ಜಯಂತಿ

  ಚಿಕ್ಕಮಗಳೂರು :ಇಂದಿನಿಂದ ಮೂರು ದಿನ  ನಡೆಯುವ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ದೊರಕಿದೆ. ಮೊದಲ ದಿನವಾದ ಇಂದು ಚಿಕ್ಕಮಗಳೂರು ನಗರದಲ್ಲಿ  ಬೋಳರಾಮೇಶ್ವರ ದೇವಾಲಯದ ...