ಚಿಕ್ಕಮಗಳೂರು :ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫುಲ್ ಜಾಲಿ ಮೂಡಲ್ಲಿ ಇದ್ದರು
ಸುದ್ದಿಗೋಷ್ಠಿಯಲ್ಲಿ ಖುಷಿ-ಖುಷಿಯಾಗೇ ಮಾತನಾಡಿದ ಸಿದ್ದರಾಮಯ್ಯನವರ ಬಾಡಿ ಲಾಂಗ್ವೇಜ್ ಸೂಪರ್ ಆಗಿತ್ತು .
ಎರಡೂ ಕೈಗಳನ್ನ ತಲೆ ಹಿಂದಕ್ಕೆ ಕಟ್ಟಿ ಮಾತನಾಡುತ್ತಿದ್ದ ಅವರು ಎಲ್ಲಿಯೂ ಗರಂ ಆಗದೆ ಕೆಲ ವೇಳೆ ಎರಡೂ ಕೈಗಳನ್ನೂ ಮೇಲೆಕ್ಕೆ ಎತ್ತಿ ಹ್ಯಾಪಿಯಾಗಿ ಮಾತನಾಡಿದ್ದು ವಿಶೇಷವಾಗಿತ್ತು .
ಕಾಫಿನಾಡ ವಾತಾವರಣ, ಸೌಂದರ್ಯಕ್ಕೆ ಮನ ಸೋತಂತೆ ಇದ್ದ ಅವರು 130-150 ಸೀಟ್ ಗೆಲ್ತೇವೆ, ಮತ್ತೆ ಸಿಎಂ ಆಗ್ತೀನಿ ಅನ್ನೋ ಖುಷಿಯಲ್ಲಿದ್ದಂತೆ ಕಾಣಿಸಿತು .ಇತ್ತೀಚೆಗೆ ನಡೆದ ರಾಹುಲ್ ಗಾಂಧಿ ಪಾದಯಾತ್ರೆ ಸಕ್ಸಸ್ ಆಗಿದ್ದು ಇದಕ್ಕೆ ಕಾರಣ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ
ಸಿದ್ದುಗೆ ಬೇರೆ ಏನಾದ್ರು ಶುಭಸಂಕೇತದ ಮುನ್ಸೂಚನೆ ಸಿಕ್ಕಿದ್ಯಾ, ಗೊತ್ತಿಲ್ಲ.ಆದರೆ, ಒಂದುಕಾಲು ಗಂಟೆಯ ಸುದ್ದಿಗೋಷ್ಠಿ ಬಿಂದಾಸ್ ಆಗಿ ಇದ್ದದ್ದು ಸುಳ್ಳಲ್ಲ .
ಮತ್ತೆ ಮುಖ್ಯಮಂತ್ರಿ :ಸುದ್ದಿಗೋಷ್ಠಿ ಮುಗಿಸಿ ಸಿದ್ದರಾಮಯ್ಯ ಹೊರಬರುತ್ತಿದ್ದಂತೆ ಬೆಂಬಲಿಗರು ಮುಂದಿನ ಮುಖ್ಯಮಂತ್ರಿ ಸಿದ್ಧರಾಮಣ್ಣ ಎಂದು ಘೋಷಣೆ ಕೂಗಿದರು .
ನಾಯಕರಿಗೆ ಟಾಂಗ್ : ಸಿಟಿ ರವಿ ಎಂದರೆ ಬರೀ ಸುಳ್ಳು ಎಂದು ಟಾಂಗ್ ನೀಡಿದ್ದೆ ಅಲ್ಲದೆ , ಅಧಿಕಾರಕ್ಕೆ ಬಂದರೆ ನಾಗಮೋಹನ್ ದಾಸ್ ವರದಿ ಜಾರಿ ಮಾಡುವುದಾಗಿ ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದ ಸಚಿವ ಶ್ರೀರಾಮುಲೂ ರವರನ್ನೂ ಕುಕ್ಕಿದರು .
ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಟೀಕಿಸಿದರು .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ