ಚಿ
ಕ್ಕಮಗಳೂರು :ಚಿಕ್ಕಮಗಳೂರು ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಲು ಸಮ್ಮತಿ ಸಿಕ್ಕಿದ್ದು ಸದ್ಯದಲ್ಲೇ ಸಚಿವ ಸಂಪುಟದ ಒಪ್ಪಿಗೆ ಸಿಗಲಿದೆ ಎಂದು ಶಾಸಕ ಸಿ .ಟಿ .ರವಿ ತಿಳಿಸಿದ್ದಾರೆ .
ಸುದೀರ್ಘ ಕಾಲದ ಬಳಿಕ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ಶಿಕ್ಷಣ ಸಚಿವರ ಜತೆಗೆ ಈ ಕುರಿತು ಈಗಾಗಲೇ ಚರ್ಚಿಸಲಾಗಿದೆ ಎಂದರು .
ಸಮ್ಮತಿ ಸಿಕ್ಕಿದ್ದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .ಇದಕ್ಕಾಗಿ ಕದ್ರಿಮಿದ್ರಿ ಬಳಿ ನಲವತ್ತು ಎಕರೆ ಜಾಗ ಮೀಸಲಿಡಲಾಗಿದೆ ಎಂದು ಹೇಳಿದರು .
ಇದೇ ತಿಂಗಳ 15 ರಂದು ಕಡೂರಿಗೆ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಆಗಮಿಸಲಿದ್ದು ಕಡೂರು ಮತ್ತು ತರೀಕೆರೆ ತಾಲ್ಲೂಕಿನ ಹಳ್ಳಿಗಳಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಯೋಜನೆಗೆ ಶಿಲಾನ್ಯಾಸ ಹಾಕಲಿದ್ದಾರೆ ಎಂದರು .
ಅದೇ ದಿನ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು .
ಒಳಚರಂಡಿ ಕಾಮಗಾರಿಯನ್ನು ಡಿಸೆಂಬರ್ ಅಂತ್ಯಕ್ಕೆ ಮುಗಿಸಬೇಕೆಂದು ನಿರ್ಧರಿಸಿದ್ದು ,ಹೆಚ್ಚೆಂದರೆ ಮಾರ್ಚಿ ವೇಳೆಗೆ ಖಚಿತವಾಗಿ ಮುಗಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುಜರಾತಿನ ಮೊರ್ಬಿಯಲ್ಲಿ ನಡೆದ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿ , ನಟನೆಗೆ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದರು .
ಜಿಲ್ಲೆಯ ವಿವಿಧ ಸಮಸ್ಯೆಗಳತ್ತ ಪತ್ರಕರ್ತರು ಗಮನ ಸೆಳೆದಾಗ ಪರಿಶೀಲಿಸುವ ಭರವಸೆ ನೀಡಿದರು .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ