ಬಣಕಲ್ : ಧರ್ಮಗ್ರಂಥಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಿದವನು ಎಂದಿಗೂ ಕೋಮವಾದಿ ಆಗುವುದಿಲ್ಲ ಎಂದು ಚಕಮಕ್ಕಿಯ ಖಲಂದರಿಯ ಅನಾಥಾಶ್ರಮದ ಪ್ರಾಂಶುಪಾಲ ಮೌಲಾನಾ ಸಿನಾನ್ ಫೈಝಿ ಹೇಳಿದರು.
ಬಣಕಲ್ ನಲ್ಲಿ ನಡೆದ ವಾರ್ಷಿಕ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮಾತನಾಡಿ ಕುರಾನ್, ಭಗವದ್ಗೀತೆ, ಬೈಬಲ್ ಧರ್ಮ ಗ್ರಂಥಗಳನ್ನು ಪೂರ್ಣವಾಗಿ ಅರಿತವನು ಕೋಮುವಾದಿಯಾಗಲು ಸಾಧ್ಯವಿಲ್ಲ , ಪ್ರವಾದಿ ಮಹಮ್ಮದ್ ಪೈಗಂಬರ್ ಜಗತ್ತಿಗೆ ಬೆಳಕು ನೀಡಿದ ಮಹಾನ್ ವ್ಯಕ್ತಿ ಎಂದರು.
ಬಣಕಲ್ ಸುನ್ನೀ ಜಾಮಿಯಾ ಜುಮ್ಮ ಮಸೀದಿಯ ಧರ್ಮಗುರು ಜನಾಬ್ ಮೌಲಾನ ಮಹಮ್ಮದ್ ಶಾಕೀಬ್ ರಜ್ವಿ ನೂರಿ ಮಾತನಾಡಿದರು . ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು .
ಕೊಟ್ಟಿಗೆಹಾರ ಬದ್ರಿಯ ಜುಮ್ಮಾ ಮಸೀದಿಯ ಧರ್ಮ ಗುರುಅಬ್ದುಲ್ ರೆಹಮಾನ್ ಫೈಝಿ, ಮೋಹಿದ್ದೀನ್ ಜುಮ್ಮಾ ಮಸೀದಿಯ ಧರ್ಮ ಗುರು ಜುಬೇರ್ ಧಾರಿಮಿ, ಹೋಬಳಿ ಮಿಲಾದ್ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಆಲಿ ಹಾಜಿ ಪಾಲ್ಗೊಂಡಿದ್ದರು

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ