ಚಿಕ್ಕಮಗಳೂರು :ದುಷ್ಕರ್ಮಿಗಳು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ಪ್ರಾಣಬಿಟ್ಟಿದೆ .
ಚಿಕ್ಕಮಗಳೂರು ಅರಣ್ಯ ವಿಭಾಗದ ಕೆ .ಆರ್ .ಪೇಟೆ ಸಮೀಪದ ಕೆಳಗಣೆ ಗ್ರಾಮದ ಅಂಬಿಕಾ ಎಸ್ಟೇಟ್ ನಲ್ಲಿ ಈ ಘಟನೆ ನಡೆದಿದೆ .
ಉರುಳಿಗೆ ಸಿಲುಕಿದ್ದ ಚಿರತೆ ಜೀವಂತವಾಗಿ ಒದ್ದಾಡುತ್ತಿದ್ದು , ಶಿವಮೊಗ್ಗ ದಿಂದ ಅಗತ್ಯ ಔಷಧ ಬರುವುದು ತಡವಾದ ಹಿನ್ನೆಲೆಯಲ್ಲಿ ಚಿರತೆಯ ಹೊಟ್ಟೆ ಭಾಗ ಸೀಳಿ ಹೋದ ಕಾರಣ ಅತೀವ ನೋವಿನಿಂದ ಪ್ರಾಣಬಿಟ್ಟಿದೆ.
ಚಿರತೆಯ ಮರಣೋತ್ತರ ಪರೀಕ್ಷೆಯನ್ನು ಮತ್ತಾವರ ಅರಣ್ಯದಲ್ಲಿ ಕೈಗೊಂಡು ನಂತರ ಸುಡಲಾಯಿತು.
ಅರಣ್ಯ ಇಲಾಖೆಯ ಅಧಿಕಾರಿ' ಸಿಬ್ಬಂದಿ ಸ್ಥಳದಲ್ಲಿ ಇದ್ದರು. ಅಂಬಿಕಾ ಎಸ್ಟೇಟ್ ನ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ