ಚಿಕ್ಕಮಗಳೂರು ಇಲ್ಲಿನ ಬಸವನಹಳ್ಳಿ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ಯೋರ್ವರಿಗೆ ಕೊರೊನ ಸೋಂಕು ಪತ್ತೆಯಾಗಿದೆ .
ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಆತಂಕ ಮನೆ ಮಾಡಿದೆ. ಈ ಶಾಲೆಯಲ್ಲಿ ಒಟ್ಟು 419 ವಿದ್ಯಾರ್ಥಿಗಳು ಇದ್ದು ಅದರಲ್ಲಿ ಇಂದು 284 ವಿದ್ಯಾರ್ಥಿಗಳು ಹಾಜರಾಗಿದ್ದರು .
ಸೋಂಕು ಪತ್ತೆಯಾಗಿರುವುದು ತಿಳಿದ ತಕ್ಷಣ ಆರೋಗ್ಯ ಇಲಾಖೆ ನೆರವಿನಿಂದ ಎಲ್ಲ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಮಾಡಿಸಲಾಗಿದೆ .
ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೂ ಸೋಂಕು ಪತ್ತೆಯಾಗಿರುವುದು ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕಳವಳ ಮೂಡಿಸಿದ್ದು ಎಲ್ಲಿ ಪರೀಕ್ಷೆಗಳು ಮುಂದೂಡಲ್ಪಡುತ್ತವೆ' ಶಾಲೆ ಮುಚ್ಚುತ್ತದೆ ಎಂಬ ಹೆದರಿಕೆ ಮನೆಮಾಡಿದೆ .
ಉಳಿದ ಶಾಲೆಗಳಲ್ಲಿಯೂ ಎಚ್ಚರಿಕೆ ವಹಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ .
ಚಿತ್ರ: ತಾರನಾಥ್ ಕಾಮತ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ