ಚಿಕ್ಕಮಗಳೂರು :ಇಲ್ಲಿನ ನಗರಸಭೆಯ ವಾರ್ಷಿಕ ೮೪.೩೬ಕೋಟಿ ರೂ ಮೊ
ತ್ತದ ಬಜೆಟ್ ಅನ್ನು ಜಿಲ್ಲಾಧಿಕಾರಿಯೂ ಆಗಿರುವ ಆಡಳಿತಾಧಿಕಾರಿ ಕೆ .ಎನ್. ರಮೇಶ್ ಮಂಡಿಸಿದ್ದಾರೆ .
ನಗರದ 4ಕಡೆಗಳಲ್ಲಿ ಹೈಟೆಕ್ ವಾಣಿಜ್ಯ ಸಂಕೀರ್ಣ ನಿರ್ಮಾಣದ ಜೊತೆಗೆ ರಸ್ತೆ ,ಚರಂಡಿ, ಉದ್ಯಾನ ಅಭಿವೃದ್ಧಿ ,ತ್ಯಾಜ್ಯ ವಿಲೇವಾರಿಗೆ ವಿಶೇಷ ಗಮನ ನೀಡಲಾಗಿದೆ .
೧.೮೨ ಕೋಟಿ ರೂ ಉಳಿತಾಯ ಬಜೆಟ್ ಆಗಿದ್ದು , ಹಿಂದೂ ಮುಸಾಫಿರ್ ಖಾನ ಜಾಗದಲ್ಲಿ ೧೦ ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ವಾಣಿಜ್ಯ ಸಂಕೀರ್ಣ ನಿರ್ಮಾಣದ ಪ್ರಸ್ತಾವನೆ ಅಂಗೀಕರಿಸಲಾಗಿದೆ .
ನಗರಸಭೆ ಉದ್ಯಾನ ಅಭಿವೃದ್ಧಿಗೆ ೧೦ ಕೋಟಿ ರೂ. ಮೀಸಲು ಇಡಲಾಗಿದೆ .ಫುಡ್ ಕೋರ್ಟ್ ನಿರ್ಮಾಣ ವಿಚಾರವು ಮತ್ತೆ ಪ್ರಸ್ತಾವನೆ ಗೊಂಡಿದೆ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ