ಚಿಕ್ಕಮಗಳೂರು :ರಾಜ್ಯ ಸಚಿವ ಸಂಪುಟದ ಮುಂದಿರುವ ಮುಳ್ಳಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಪ್ರಸ್ತಾವನೆಯನ್ನು ಹಿಂದೆ ಪಡೆಯುವಂತೆ ಹೋರಾಟ ಸಮಿತಿ ಒತ್ತಾಯಿಸಿದೆ .
ಈ ಭಾಗದ ಅರಣ್ಯದಲ್ಲಿರುವ ಜನವಸತಿ ಪ್ರದೇಶಗಳ ಪುರಾವೆಗಳನ್ನು ಗಮನಿಸಿ ಧೃಢ ಪಡಿಸಿಕೊಂಡು ಸೂಕ್ತ ಪರಿಹಾರ ನೀಡುವಂತೆ ಸಮಿತಿ ಆಗ್ರಹಿಸಿದೆ .
ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶದ15,897 ಎಕರೆಯನ್ನು ಸಂಪುಟದ ಅನುಮೋದನೆಗಾಗಿ ಜಿಲ್ಲಾಡಳಿತ ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ ಸರ್ಕಾರಕ್ಕೆ ಸಲ್ಲಿಸಿದೆ ಎಂದು ಸಮಿತಿ ಪ್ರಧಾನ ಸಂಚಾಲಕ ವಿಜಯಕುಮಾರ್ ಆರೋಪಿಸಿದ್ದಾರೆ .
ಸಮಿತಿಯ ಹೋರಾಟದ ಫಲವಾಗಿ 5ಸಾವಿರ ಎಕರೆ ಪ್ರದೇಶವನ್ನು ಕೈಬಿಡಲಾಗಿದ್ದರೂ ಯಾವ ಸರ್ವೆ ನಂಬರ್ ಎಂಬುದನ್ನು ಸ್ಪಷ್ಟಪಡಿಸಿಲ್ಲ . ಈ ವಿಷಯದಲ್ಲಿ ಅನೇಕ ಗೋಜಲು ಗಳಿದ್ದು ಸೂಕ್ತ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ